ನವದೆಹಲಿ: ಗಾಲ್ವಾನ್​ನಲ್ಲಿ ಗಡಿ ಅತಿಕ್ರಮಿಸಿ ಅಟಾಟೋಪ ತೋರಿದ ಚೀನಾ, ಅದರ ಬೆನ್ನಿಗೆ ಸೈಬರ್ ದಾಳಿಯನ್ನು ತೀವ್ರಗೊಳಿಸಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಚೀನಾದಿಂದ ಆಗುತ್ತಿರುವ ಸೈಬರ್ ದಾಳಿ ಮೇ ತಿಂಗಳಿಗೆ ಹೋಲಿಸಿದರೆ ಜೂನ್​ನಲ್ಲಿ ಪ್ರಮಾಣ ಶೇಕಡ 200 ಹೆಚ್ಚಾಗಿದೆ ಎಂದು ಸಿಂಗಾಪುರ ಮೂಲದ ಸೈಬರ್​ ಥ್ರೆಟ್ ಇಂಟೆಲಿಜೆನ್ಸ್ ಸಂಸ್ಥೆ ಸೈಫರ್ಮಾ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತದ ವಿರುದ್ಧ ಚೀನಾ ಸೈಬರ್​ ದಾಳಿ; ಬ್ಯಾಂಕಿಂಗ್​ ವ್ಯವಸ್ಥೆ, ಎಟಿಎಂಗಳೇ ಗುರಿ
ಸೈಫರ್ಮಾದ ಸಂಸ್ಥಾಪಕ, ಸಿಇಒ ಕುಮಾರ್ ರಿತೇಶ್ ಹೇಳುವ ಪ್ರಕಾರ, ಲಡಾಕ್​ನಲ್ಲಿ ಬಿಕ್ಕಟ್ಟು ಏರ್ಪಟ್ಟ ಬೆನ್ನಿಗೆ ಚೀನಾದಲ್ಲಿನ ಹ್ಯಾಕರ್ ಕಮ್ಯೂನಿಟಿ ಹೆಚ್ಚು ಹೆಚ್ಚು ಸಕ್ರಿಯವಾಗಿವೆ. ಚೀನಾದಲ್ಲಿನ ಹ್ಯಾಕರ್​ಗಳ ತಂಡಗಳು ಭಾರತದ ಸಚಿವಾಲಯಗಳು, ದೊಡ್ಡ ದೊಡ್ಡ ಉದ್ಯಮಗಳು, ಮಾಧ್ಯಮ ಸಂಘಟನೆಗಳ ಇನ್​ಫಾರ್ಮೇಷನ್ ಟೆಕ್ನಾಲಜಿ ಮೂಲಸೌಕರ್ಯಗಳನ್ನೇ ಹ್ಯಾಕ್​ ಮಾಡಲು ಪ್ರಯತ್ನಿಸುತ್ತಿವೆ. ಸಾಮಾನ್ಯವಾಗಿ ಚೀನೀ ಹ್ಯಾಕರ್​ಗಳು ಜಪಾನ್​, ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾಗಳನ್ನು ಟಾರ್ಗೆಟ್ ಮಾಡುತ್ತಾರೆ. ಆದರೆ, ಕಳೆದ ಆರು ದಿನಗಳಿಂದ ಚೀನಿ ಹ್ಯಾಕರ್​ಗಳು ಐಟಿ ಅಸೆಟ್​ಗಳನ್ನು ಗುರುತಿಸಿಕೊಂಡು ಅವುಗಳ ಮೇಲೆ ದಾಳಿ ನಡೆಸಲಾರಂಭಿಸಿದ್ದಾರೆ.
ಯಾವ್ಯಾವ ಹ್ಯಾಕರ್​ ಗ್ರೂಪ್​ಗಳು1.ಗೋತಿಕ್ ಪಾಂಡಾ(Gothic Panda) – ಇದು ಸ್ಟ್ರಾಟಜಿಕ್ ಸೆಕ್ಟರನ್ನು ಟಾರ್ಗೆಟ್ ಮಾಡಿ ಸೈಬರ್ ದಾಳಿ ನಡೆಸುವ ಗುಂಪು2.ಸ್ಟೋನ್ ಪಾಂಡಾ(Stone Panda)- ಇದು ಟ್ರೇಡ್ ಸೀಕ್ರೆಟ್​ ಮತ್ತು ಸಪ್ಲೈ ಚೇನ್​ ಮಾಹಿತಿ ಟಾರ್ಗೆಟ್ ಮಾಡಿ ಸೈಬರ್ ದಾಳಿ ನಡೆಸುವ ಗುಂಪು
ಹ್ಯಾಕರ್​ಗಳ ಗುಂಪಿಗೆ ಚೀನಾ ತವರು:ಅತಿ ಹೆಚ್ಚು ಹ್ಯಾಕರ್​ಗಳಿರುವ ರಾಷ್ಟ್ರ ಚೀನಾ. 1990ರಲ್ಲಿ ಹ್ಯಾಕಿಂಗ್ ಶುರುಮಾಡಿದ ಚೀನಾ ಈಗ ಈ ಕ್ಷೇತ್ರದಲ್ಲಿ ಪರಿಣತ ರಾಷ್ಟ್ರವಾಗಿ ಮಾರ್ಪಟ್ಟಿದೆ. ಕೆಲವು ಗುಂಪುಗಳನ್ನು ಚೀನಾ ಸರ್ಕಾರ ಪ್ರಾಯೋಜಿಸುತ್ತಿದೆ. ಈ ಗುಂಪಿಗಳಿಗೆ ಪೂರಕವಾಗಿ ಸೈಂಟಿಸ್ಟ್​ಗಳು ಹಾಗೂ ಹ್ಯಾಕ್ಟಿವಿಸ್ಟ್​ಗಳು ಕೆಸಲ ಮಾಡುತ್ತಾರೆ. ಗೋತಿಕ್ ಪಾಂಡಾ ಮತ್ತು ಸ್ಟೋನ್ ಪಾಂಡಾ ಎರಡು ಗುಂಪುಗಳಿಗೆ ನೇರವಾಗಿ ಚೀನಾ ಸರ್ಕಾರದ ಅಭಯವಿದೆ.
ಇದನ್ನೂ ಓದಿ:ಕೋವಿಡ್ ನೆಪದಲ್ಲಿ ಸೈಬರ್ ದಾಳಿ; ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ, ಉಚಿತ ಪರೀಕ್ಷೆ ನೆಪದಲ್ಲಿ ಮೋಸ
ಹ್ಯಾಕರ್​ಗಳ ಹಿಟ್​ಲಿಸ್ಟ್​:ಚೀನೀ ಹ್ಯಾಕರ್​ಗಳ ದಾಳಿಗಳು ಸಂಕೀರ್ಣವಾಗಿವೆ. ಉದಾಹರಣೆಗೆ, ಉದ್ಯಮಗಳ ವೆಬ್​ಸೈಟ್ ಹ್ಯಾಕ್ ಮಾಡಿ ಅವುಗಳ ಮುಖಪುಟ ಹಾಳುಗೆಡಹುವುದಲ್ಲದೆ, ಅವುಗಳಲ್ಲಿರುವ ಸೂಕ್ಷ್ಮ ಡೇಟಾವನ್ನು ಲೀಕ್​ ಮಾಡ್ತಾರೆ. ಸದ್ಯದ ಮಾಹಿತಿ ಪ್ರಕಾರ, ಹ್ಯಾಕರ್​ಗಳ ಹಿಟ್​ಲಿಸ್ಟ್​ನಲ್ಲಿ ಎಸ್​ಬಿಐ, ಐಸಿಐಸಿಐ ಬ್ಯಾಂಕ್​, ಏರ್​ಇಂಡಿಯಾ, ಎಲ್​ಐಸಿ, ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್​, ಇಂಡಿಯನ್ ಆಯಿಲ್ ಕಾರ್ಪೊರೇಷನ್​, ರಿಲಯನ್ಸ್ ಜಿಯೋ, ಕಾರ್ಬನ್​ ಮೊಬೈಲ್ಸ್, ಎಚ್​ಎಎಲ್​, ಹೀರೋ ಮೋಟೊಕಾರ್ಪ್​, ಡಾಬರ್, ಸೈಲ್​, ವಿಪ್ರೋ ಮತ್ತು ಇತರೆ ಕಂಪನಿಗಳಿವೆ. ಜೂನ್ 18 ರಿಂದ 23ರ ಅವಧಿಯಲ್ಲಿ ಇಂತಹ ಅನೇಕ ಕಂಪನಿಗಳ ಮೇಲೆ ವಿಶೇಷವಾಗಿ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ವೆಬ್​ಸೈಟ್ ಮೇಲೆ ಚೀನೀ ಹ್ಯಾಕರ್​ಗಳು ದಾಳಿ ನಡೆಸಿದ್ದಾರೆ.
ನಾಳೆಯೇ ಭಾರಿ ಪ್ರಮಾಣದ ಸೈಬರ್ ಅಟ್ಯಾಕ್ ಶುರು: ಎಚ್ಚರಿಸಿದೆ ಸರ್ಕಾರ! ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
