ಜಾರ್ಖಂಡ್:ಪೊಲೀಸರ ಬಲೆಯಿಂದ ತಪ್ಪಿಸಿಕೊಳ್ಳಲು ಮುಂದಾದ 6 ಸೈಬರ್ ಅಪರಾಧಿಗಳು ನದಿಗೆ ಜಿಗಿದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸಿನಿಮಿಯ ರೀತಿಯಲ್ಲಿ ಬೆಂಬಿಡದೆ ಚೇಸ್​ ಮಾಡಿದ ಆರಕ್ಷಕ ದಳ ಅವರನ್ನೆಲ್ಲಾ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ:19 ವಯೋಮಿತಿಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪಾಕ್‌ಗೆ ಶರಣಾದ ಭಾರತ ಕಿರಿಯರ ತಂಡ
ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರ ತಂಡವು ಮಫ್ತಿಯಲ್ಲಿದ್ದು, ಬರಾಕರ್ ನದಿಯ ದಡದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಸೈಬರ್ ಅಪರಾಧಿಗಳನ್ನು ಸೆರೆಹಿಡಿಯಲು ಮುಂದಾಯಿತು. ಅಧಿಕಾರಿಗಳು ತಮ್ಮನ್ನು ಚೇಸ್ ಮಾಡುತ್ತಿದ್ದಾರೆ ಎಂಬುದನ್ನು ಅರಿತ ಅಪರಾಧಿಗಳ ತಂಡ, ದಾರಿ ಮಧ್ಯೆಯಿದ್ದ ನದಿಗೆ ಹಾರಿ ಪರಾರಿಯಾಗಲು ಪ್ರಯತ್ನಿಸಿದರು. ಆದ್ರೆ, ಅಪರಾಧಿಗಳ ಪರಾರಿ ಕನಸ್ಸನ್ನು ಪೊಲೀಸರು ಭಗ್ನಗೊಳಿಸಿದ್ದಾರೆ.
ಪೊಲೀಸ್​ ಅಧಿಕಾರಿಗಳು ಅಪರಾಧಿಗಳನ್ನು ಬೆನ್ನಟ್ಟಿ ಎಲ್ಲ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳಿಂದ 8,29,600 ರೂ. ನಗದು, 12 ಮೊಬೈಲ್ ಫೋನ್‌ಗಳು, 21 ಎಟಿಎಂ ಕಾರ್ಡ್‌ಗಳು, 18 ಸಿಮ್ ಕಾರ್ಡ್‌ಗಳು, 12 ಪಾಸ್‌ಬುಕ್‌ಗಳು, ಆರು ಚೆಕ್‌ಬುಕ್‌ಗಳು, ನಾಲ್ಕು ಪ್ಯಾನ್ ಕಾರ್ಡ್‌ಗಳು ಮತ್ತು ಎರಡು ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಆಯುಷ್ಮಾನ್ ಯೋಜನೆಗೆ ಅನಾರೋಗ್ಯ; ತುರ್ತು ಚಿಕಿತ್ಸೆ ಸಿಗದೆ ರೋಗಿಗಳ ಗೋಳು
ಜಾರ್ಖಂಡ್‌ನ ಗಿರಿದಿಹ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, “ಬಂಧಿತ ಸೈಬರ್ ಅಪರಾಧಿಗಳು ಆ್ಯಪ್‌ಗಳ ಮೂಲಕ ನಗ್ನ ವೀಡಿಯೊ ಕರೆಗಳನ್ನು ಮಾಡುವ ಮೂಲಕ ವಂಚನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ತಮ್ಮ ಸಂತ್ರಸ್ತರನ್ನು ಬ್ಲ್ಯಾಕ್‌ಮೇಲ್ ಮಾಡಲು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇವರು ಗರ್ಭಿಣಿಯರನ್ನು ಗುರಿಯಾಗಿಸಿಕೊಂಡು, ಆ್ಯಪ್ ಮೂಲಕ ಹೆರಿಗೆ ಸೌಲಭ್ಯಗಳ ಸುಳ್ಳು ಭರವಸೆ ನೀಡಿ ವಂಚಿಸುತ್ತಿದ್ದರು” ಎಂದು ಹೇಳಿದ್ದಾರೆ,(ಏಜೆನ್ಸೀಸ್).
ಈ ರಾಶಿಯವರಿಗಿಂದು ಹಣಕಾಸು ಅನುಕೂಲ: ನಿತ್ಯಭವಿಷ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 15 =
Remember me
