ಪಟನಾ:ಕಳೆದ ವರ್ಷದ ಲಾಕ್​ಡೌನ್​ ಅನ್ನು ಯಾರೂ ಮರೆತಿಲ್ಲ. ಆ ಸಮಯದಲ್ಲಿ ಬಾಲಕಿಯೊಬ್ಬಳು ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಗುರುಗ್ರಾಮದಿಂದ ಬಿಹಾರದ ದರ್ಬಾಂಗ್​ ಜಿಲ್ಲೆಗೆ ಸೈಕಲ್​ನಲ್ಲೇ ಕರೆದುಕೊಂಡು ಹೋಗಿದ್ದು ನಿಮಗೆಲ್ಲರಿಗೂ ನೆನಪಿರಬಹುದು. ಇದೀಗ ಆಕೆಯ ತಂದೆ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
13 ವರ್ಷದ ಬಾಲಕಿ ಜ್ಯೋತಿ ಪಾಸ್ವಾನ್​ ಇದೀಗ ತಂದೆ ಮೋಹನ್​ ಪಾಸ್ವಾನ್​ನನ್ನು ಕಳೆದುಕೊಂಡಿದ್ದಾಳೆ. ಮೋಹನ್​ನ ಸಂಬಂಧಿಯೊಬ್ಬರು ಇತ್ತೀಚೆಗೆ ಮೃತರಾಗಿದ್ದರಂತೆ. ಅವರ ತಿಥಿ ಮಾಡುವ ಸಲುವಾಗಿ ಕುಟುಂಬಸ್ಥರು ಸೇರಿ ಚರ್ಚೆ ನಡೆಸುತ್ತಿದ್ದರು. ಚರ್ಚೆ ಮುಗಿಯುತ್ತಿದ್ದಂತೆ ಮೋಹನ್​ ಕುಸಿದು ಬಿದ್ದಿದ್ದಾನೆ. ಹೃದಯಾಘಾತವಾಗಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ಮೋಹನ್​ ಪಾಸ್ವಾನ್​ ಗುರುಗ್ರಾಮದಲ್ಲಿ ಆಟೋ ಓಡಿಸಿಕೊಂಡು ಬದುಕುತ್ತಿದ್ದ. ಆತನ ಕುಟುಂಬ ಪೂರ್ತಿ ಬಿಹಾರದ ದರ್ಬಾಂಗ್​ ಜಿಲ್ಲೆಯ ಸಿರ್ತುಲ್ಲಿ ಗ್ರಾಮದಲ್ಲಿ ನೆಲೆಸಿತ್ತು. ಕಳೆದ ವರ್ಷ ಜನವರಿಯಲ್ಲಿ ಮೋಹನ್​ಗೆ ಅಪಘಾತವಾಗಿದ್ದರಿಂದಾಗಿ ಆತನನ್ನು ನೋಡಿಕೊಳ್ಳಲೆಂದು ಮಗಳು ಜ್ಯೋತಿ ಗುರುಗ್ರಾಮಕ್ಕೆ ತೆರಳಿದ್ದಳು. ಇದ್ದ ಒಂದು ಆಟೋವನ್ನೂ ಅದರ ಮಾಲೀಕ ತೆಗೆದುಕೊಂಡು ಹೋಗಿದ್ದನಂತೆ. ಅದೇ ಸಮಯಕ್ಕೆ ಸರಿಯಾಗಿ ಲಾಕ್​ಡೌನ್​ ಘೋಷಿಸಲಾಯಿತು. ಕೆಲಸವೂ ಇಲ್ಲದೆ ಗುರುಗ್ರಾಮದಲ್ಲಿ ಜೀವಿಸುವುದು ಕಷ್ಟವೆಂದು ಅರಿತ ಜ್ಯೋತಿ 400 ರೂಪಾಯಿಗೆ ಸೈಕಲ್​ ಒಂದನ್ನು ಖರೀದಿಸಿ ಅದರಲ್ಲಿ ತಂದೆಯನ್ನು ಕೂರಿಸಿಕೊಂಡು ಊರಿನ ಕಡೆ ಮುಖ ಮಾಡಿದ್ದಳು. ಬರೋಬ್ಬರಿ 8 ದಿನಗಳ ನಂತರ ಅವರು ಮನೆ ಸೇರಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. (ಏಜೆನ್ಸೀಸ್)
ಸೆಂಟ್ರಲ್ ವಿಸ್ತಾ ಅವೆನ್ಯೂ ​​ನಿರ್ಮಾಣ ಕಾರ್ಯಕ್ಕೆ ತಡೆ ಇಲ್ಲ : ದೆಹಲಿ ಹೈಕೋರ್ಟ್

ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
