ಜೈಪುರ:ಮೋದಿ ಮೋಡಿಗೆ ಮತ್ತೊಂದಯು ಉದಾಹರಣೆ ಎಂಬಂತೆ ಶನಿವಾರ ರಾಜಸ್ತಾನದ ಬಿಕಾನೇರ್​ನಲ್ಲಿ ಪ್ರಧಾನಿಯನ್ನು ನೋಡಲು ಬಂದಿದ್ದ ಜನತೆ ಕಾದು ನಿಂತು ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಂಡರು.
ನಿರಂತರ ಮಳೆಯ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್​ಶೋನಲ್ಲಿ ಸೈಕ್ಲಿಸ್ಟ್​ಗಳು ಸಹ ಉತ್ಸಾಹದಿಂದ ಪಾಲ್ಗೊಂಡಿದ್ದು, ವಿಶೇಷವಾಗಿತ್ತು. ಶುಕ್ರವಾರ ಉತ್ತರಪ್ರದೇಶ ಗೋರಖ್​ಪುರದಲ್ಲು ಸಹ ಜನತೆ ಬಾರಿ ಮಳೆಯ ನಡುವೆ ಪ್ರಧಾನಿಯನ್ನು ಕಣ್ತುಂಬಿಕೊಂಡಿದ್ದು, ವಿಶೇಷವಾಗಿತ್ತು.
ಜನರು ಮಳೆಯಲ್ಲಿ ನಿಂತು ಪ್ರಧಾನಿ ಮೋದಿಯವರ ಬರುವಿಕೆಯನ್ನು ಕಣ್ತುಂಬಿಕೊಂಡ ಇಂದಿನ ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ದೇಶದ ಪ್ರಧಾನಿ ಕುರಿತ ಅಭಿಮಾನ, ಅದರಲ್ಲೂ ವಿಶ್ವಗುರು ಮೋದಿಯ ಮೋಡಿಗೆ ಇಂದಿನ ದೃಶ್ಯ ನಿದರ್ಶನ ಎಂಬಂತಾಗಿದ್ದು, ಭಾರಿ ಮೆಚ್ಚುಗೆ ಗಳಿಸಿದೆ.
#WATCH| Rajasthan: Prime Minister Narendra Modi holds roadshow in Bikaner, cycle rally accompanies himpic.twitter.com/Kauszj71Vp
ಇದನ್ನೂ ಓದಿ:ಮೋದಿ ಮೋಡಿ: ಮಳೆಯನ್ನೂ ಲೆಕ್ಕಿಸದೆ ರಸ್ತೆಯಲ್ಲಿ ಕಾದು ನಿಂತು ಪ್ರಧಾನಿಯನ್ನು ಕಣ್ತುಂಬಿಸಿಕೊಂಡ ಜನತೆ!
ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್​ ಲೂಟಿ ಹಾಗೂ ಸುಳ್ಳಿನಿಂದ ಕೂಡಿರುವ ಪಕ್ಷ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವು ಅಂತ್ಯದತ್ತ ಸಾಗುತ್ತಿದ್ದು, ಭ್ರಷ್ಟಾಚಾರ, ತುಷ್ಟೀಕರಣ ಹಾಗೂ ಅಪರಾಧದಂತಹ ವಿಷಯಗಳಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದಿದೆ.
ಅತ್ಯಾಚಾರದಂತಹ ಪ್ರಕರಣಗಳಲ್ಲಿ ರಾಜಸ್ಥಾನ ಇಡೀ ದೇಶದಲ್ಲೇ ಮೊದಲ ಸ್ಥಾನ ಪಡೆದಿದ್ದು, ರಕ್ಷಣೆಯ ಹೊಣೆ ಹೊರಬೇಕಾಗಿರುವವರೇ ಭಕ್ಷಕರಾದರೆ ಏನು ಕಥೇ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ ಸರ್ಕಾರವು ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಬದಲು ಅವರ ರಕ್ಷಣೆಗೆ ನಿಂತಿರುವುದು ದುರದೃಷ್ಟಕರ ಸಂಗತಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 8 =
Remember me
