ಕೋಲ್ಕತ:ಇತ್ತಿಚೆಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶಗಳಲ್ಲಿ ಅಪ್ಪಳಿಸಿದ ಅಂಫಾನ್​ ಚಂಡಮಾರುತದಿಂದಾಗಿ ಉಭಯ ರಾಜ್ಯಗಳ ಜನಜೀವನ ಅಸ್ತವ್ಯಸ್ತವಾಗಿದೆ. ಒಡಿಶಾ ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮದಿಂದಾಗಿ ಅಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಆದರೆ, ಪಶ್ಚಿಮ ಬಂಗಾಳದಲ್ಲಿ 80ಕ್ಕೂ ಹೆಚ್ಚು ಜನರನ್ನು ಬಲಿಪಡೆದುದ್ದಲ್ಲದೆ, ಸಾಕಷ್ಟು ಆಸ್ತಿ ನಷ್ಟವನ್ನುಂಟು ಮಾಡಿತು. ಹೀಗಾಗಿ ಜನರು ಅಂಫಾನ್​​ ಚಂಡಮಾರುತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಆದರೆ, ಕೋವಿಡ್​-19 ಲಾಕ್​ಡೌನ್​ನಿಂದ ಉದ್ಯೋಗ ನಷ್ಟಕ್ಕೆ ಒಳಗಾಗಿ ವಿವಿಧ ರಾಜ್ಯಗಳಿಂದ ತವರು ಪಶ್ಚಿಮ ಬಂಗಾಳಕ್ಕೆ ಮರಳಿರುವ ವಲಸೆ ಕಾರ್ಮಿಕರ ಪಾಲಿಗೆ ಅಂಫಾನ್​ ಚಂಡಮಾರುತ ಅದೃಷ್ಟಕಾರಿಯಾಗಿ ಪರಿಣಮಿಸಿದೆ. ಅದರಲ್ಲೂ ವಿಶೇಷವಾಗಿ ದಿನಗೂಲಿ ಕಾರ್ಮಿಕರು ಮತ್ತು ಎಲೆಕ್ಟ್ರೀಷಿಯನ್​ಗಳಿಗೆ ಅವಕಾಶದ ದಿಡ್ಡಿಬಾಗಿಲೇ ತೆರೆದಂತಾಗಿದೆ. ಲಾಕ್​ಡೌನ್​ನಿಂದ ಉದ್ಯೋಗ ನಷ್ಟಕ್ಕೆ ಒಳಗಾಗಿದ್ದ ಅವರಿಗೆ ತಮ್ಮದೇ ರಾಜ್ಯದಲ್ಲಿ ಉದ್ಯೋಗ ಗಳಿಸಿಕೊಂಡು, ಹೊಟ್ಟೆ ತುಂಬಿಸಿಕೊಳ್ಳಲು ಇದರಿಂದ ಅನುಕೂಲವಾಗಿದೆ.
ಇದನ್ನೂ ಓದಿ:ಕರ್ನಾಟಕಕ್ಕೆ ಕೊವಿಡ್​-19 ಕಂಟಕ, ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ; ಚಿತ್ರದುರ್ಗಕ್ಕೆ ಶಾಕ್​
ಚಂಡಮಾರುತಕ್ಕೆ ಸಿಲುಕಿ ಬುಡಮೇಲಾಗಿರುವ ಮರಗಳು ಮತ್ತಿತರ ವಸ್ತುಗಳನ್ನು ತೆರವುಗೊಳಿಸಲು ಪಶ್ಚಿಮ ಬಂಗಾಳದಲ್ಲಿ ಕೂಲಿಯಾಳುಗಳ ಕೊರತೆ ಉಂಟಾಗಿದೆ. ಆದರೆ, ವಲಸೆ ಕಾರ್ಮಿಕರು ಈ ಕೊರತೆಯನ್ನು ನೀಗಿಸಲು ಮುಂದಾಗಿದ್ದಾರೆ.
ತುಂಡಾಗಿ ಬಿದ್ದಿರುವ ವಿದ್ಯುತ್​ ತಂತಿಗಳನ್ನು ತೆರವುಗೊಳಿಸಿ, ವಿದ್ಯುತ್​ ಮರುಸಂಪರ್ಕ ಒದಗಿಸುವುದು ಕಲ್ಕತ್ತಾ ವಿದ್ಯುತ್​ ಸರಬರಾಜು ನಿಗಮದ ಜವಾಬ್ದಾರಿಯಾಗಿದೆ. ಆದರೂ ನಾವು ಸ್ಥಳೀಯ ಎಲೆಕ್ಟ್ರೀಷಿಯನ್​ಗಳನ್ನು ಬಳಸಿಕೊಂಡು ತುಂಡಾಗಿರುವ ವಿದ್ಯುತ್​ ತಂತಿಗಳನ್ನು ತೆರವುಗೊಳಿಸುತ್ತಿದ್ದೇವೆ. ಜತೆಗೆ ವಿದ್ಯುತ್​ ಸಂಪರ್ಕ ಮರುಸ್ಥಾಪನೆ ಕಾರ್ಯದಲ್ಲೂ ಅವರನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಕೋಲ್ಕತ ಮಹಾನಗರಪಾಲಿಕೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ತಲುಪಿದ ಮಿಡತೆಗಳ ಗುಂಪು, ಕರ್ನಾಟಕಕ್ಕೂ ಕಾದಿದೆಯಾ ಕಂಟಕ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − four =
Remember me
