ಬೆಂಗಳೂರು:ಮೈಚಾಂಗ್ ಚಂಡಮಾರುತದ ಹಿನ್ನೆಲೆ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬಿರುಸಿನ ಗಾಳಿ ಸಹಿತ ಸುರಿಯುತ್ತಿರುವ ನಿರಂತರ ಮಳೆಗೆ ಸದ್ಯ ತಮಿಳುನಾಡು ತತ್ತರಿಸಿದೆ. ವರಣನ ಆರ್ಭಟಕ್ಕೆ ಚೆನ್ನೈ ಜಿಲ್ಲಾಡಳಿತ ಕೆಲವು ಪ್ರದೇಶಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಇದರೊಟ್ಟಿಗೆ ಖಾಸಗಿ ಸಂಸ್ಥೆಯ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಸದ್ಯ ಮೈಚಾಂಗ್ ಚಂಡಮಾರುತದ ಎಫೆಕ್ಟ್​ ಬೆಂಗಳೂರಿಗೆ ತಟ್ಟಲಿದೆಯಾ? ಎಷ್ಟು ದಿನ ಮಳೆಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಶೂಟಿಂಗ್​ ರೇಂಜ್​ನಲ್ಲಿ ಅವಘಡ; ಕೈಬೆರಳು ಕಳೆದುಕೊಂಡ ಶೂಟರ್!​
ಚಂಡಮಾರುತವು ಚೆನ್ನೈ ಮತ್ತು ಪುದುಚೇರಿ ಬಳಿ ಮಂಗಳವಾರ ಮುಂಜಾನೆ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆಯಿದ್ದು, ಸದ್ಯ ಕರಾವಳಿ ಪ್ರದೇಶಗಳು ಮಳೆಯಿಂದ ಜರ್ಜರಿತವಾಗಿದೆ. ಹವಾಮಾನ ವೈಪರೀತ್ಯದಿಂದ ಬೆಂಗಳೂರಿನಲ್ಲಿ ಮೋಡ ಕವಿದಿದ್ದು, ಸದ್ಯ ಶೀತ ವಾತಾವರಣಕ್ಕೆ ಸಾಕ್ಷಿಯಾಗಿದೆ. “ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯೊಂದಿಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವನ್ನು ನಿರೀಕ್ಷಿಸಬಹುದು” ಎಂದು ವರದಿ ಉಲ್ಲೇಖಿಸಿದೆ.
ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಮತ್ತು 19 ಡಿಗ್ರಿ ಸೆಲ್ಸಿಯಸ್ ನಡುವೆ ಏರಿಳಿತಗೊಳ್ಳುತ್ತದೆ. ಇದರ ಜತೆಗೆ ಗಾಳಿ ಬೀಸುವ ನಿರೀಕ್ಷೆಯಿದೆ. 30ರಿಂದ 40 ಕಿಮೀ ವೇಗ, ಒಂದು ಅಥವಾ ಎರಡು ದಿನಗಳವರೆಗೆ ಶೀತದ ಅಲೆ ಸಂಭಾವ್ಯವಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಇದನ್ನೂ ಓದಿ:ಕೊಳವೆಬಾವಿ ಕಾಮಗಾರಿ ಗುತ್ತಿಗೆ 431 ಕೋಟಿ ರೂ. ಹಗರಣ
ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, “ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಆವರಿಸಬಹುದು. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 24 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ” ಎಂದು ವರದಿ ಹೇಳಿದೆ,(ಏಜೆನ್ಸೀಸ್).
BBKS10: ಮಾನವೀಯತೆ ಅಂತ ಹೋದ್ರೆ, ಮುಂದೇನೆ ತೋಡ್ತಾರೆ ಹಳ್ಳ; ವರ್ತೂರು ಹೇಳಿಕೆಗೆ ‘ಬೆಂಕಿ’ ಕಿಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 3 =
Remember me
