ಭುವನೇಶ್ವರ:ವರ್ಷದ ಮೊದಲ ಚಂಡಮಾರುತ ಎದುರಿಸಲು ಒಡಿಶಾ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಂಗಳವಾರ ಕರಾವಳಿ ತೀರಕ್ಕೆ ಬಂದಪ್ಪಳಿಸಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ನಡುವೆ ಭಾನುವಾರದಿಂದಲೇ ಮಳೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಸದ್ಯ ಒಡಿಶಾದ ಪೂರಿ ಕರಾವಳಿ ತೀರದಿಂದ 1020 ಕಿಮೀ ದೂರದಲ್ಲಿದ್ದು, ಮಂಗಳವಾರ 16 ಕಿ.ಮೀ, ವೇಗದಲ್ಲಿ ಬಂದಪ್ಪಳಿಸಲಿದೆ ಎಂದು ತಿಳಿಸಿದೆ.
ಆಸನಿ ಹೆಸರಿನ ಚಂಡಮಾರುತ ಎಷ್ಟು ಭೀಕರತೆ ಸೃಷ್ಟಿಸಲಿದೆ ಎಂಬುದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಎದುರಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಮುನ್ನೆಚ್ಚರಿಕೆ ನೀಡಲಾಗಿದೆ.  ಅಂತೆಯೇ ಒಡಿಶಾ ಸರ್ಕಾರ ಕರಾವಳಿ ತೀರದಲ್ಲಿ ಎಚ್ಚರಿಕೆ ಕ್ರಮ ಕೈಗೊಂಡಿದ್ದು, ಎನ್​ಡಿಆರ್​ಎಫ್​ ತಂಡವನ್ನು ಸಿದ್ಧತೆ ಮಾಡಿಕೊಂಡಿದೆ.
ಆಸನಿ ಎಂದರೆ ಶ್ರೀಲಂಕಾ ಭಾಷೆಯಲ್ಲಿ ಕ್ರೋಧ ಎಂದು ಅರ್ಥೈಸಲಾಗುತ್ತದೆ. ಇದನ್ನೇ ಈ ಚಂಡಮಾರುತಕ್ಕೆ ಹೆಸರಿಸಲಾಗಿದ್ದು, ಭಾನುವಾರ ಸಂಜೆ 5.30ರವೇಳೆಗೆ ತನ್ನ ವೇಗ ಹೆಚ್ಚಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸದ್ಯ ಹೆಚ್ಚು ಹಾನಿ ಸಂಭವಿಸುವ ಸಾಧ್ಯತೆ ಇಲ್ಲ ಎಂದಾದರೂ ಚಂಡಮಾರುತದಿಂದ ಹಲವು ಪರಿಣಾಮ ಬೀರಬಹುದು ಎಂದೂ ತಿಳಿಸಿದೆ. ಆಂದ್ರ ಕರಾವಳಿ ಮೇಲೂ ಹಾದುಹೋಗಲಿದ್ದು, ಒಡಿಶಾದ ಗಂಜಮ್​, ಗಜಪತಿ, ಖೊರ್ಧಾ ಮತ್ತು ಪೂರಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿ ಬೀಸಲಿದ್ದು, ಇದರಿಂದ ಸ್ವಲ್ಪನ ಹಾನಿಯಾಗಬಹುದೆಂದು ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + five =
Remember me
