ನವದೆಹಲಿ:ಟಾಟಾ ಸನ್ಸ್ ಸಮೂಹದ ಕಾರ್ಯ ನಿರ್ವಾಹಕ ಅಧ್ಯಕ್ಷ ಸ್ಥಾನವನ್ನು ಬಯಸುವುದಿಲ್ಲ ಎಂದು ಅಧ್ಯಕ್ಷ ಹುದ್ದೆಯಿಂದ ಪದಚ್ಯುತರಾಗಿದ್ದ ಸೈರಸ್ ಮಿಸ್ತ್ರಿ ಭಾನುವಾರ ಹೇಳಿದ್ದಾರೆ.
ಮಿಸ್ತ್ರಿ ವಜಾ ಮಾಡಿದ್ದನ್ನು ರದ್ದುಪಡಿಸಿ ಅವರನ್ನು ಮರುನೇಮಕ ಮಾಡುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ (ಎನ್​ಸಿಎಲ್​ಎಟಿ) ಡಿಸೆಂಬರ್​ನಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಟಾಟಾ ಸನ್ಸ್ ಮತ್ತು ಅದರ ಮುಖ್ಯಸ್ಥ ರತನ್ ಟಾಟಾ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.
ಸೋಮವಾರ ಅದರ ವಿಚಾರಣೆ ನಡೆಯಲಿದ್ದು ಮಿಸ್ತ್ರಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ‘ಎನ್​ಸಿಎಲ್​ಎಟಿ ಆದೇಶದಿಂದ ನಾನು ವಿನೀತನಾಗಿದ್ದೇನೆ. ಆದರೆ ನಾನು ಟಾಟಾ ಸನ್ಸ್​ನ ಕಾರ್ಯನಿರ್ವಾಹಕ ಹುದ್ದೆಯ ಹಿಂದೆ ಬಿದ್ದಿಲ್ಲ. ಟಿಸಿಎಸ್, ಟಾಟಾ ಟೆಲಿಸರ್ವಿಸಸ್ ಅಥವಾ ಟಾಟಾ ಇಂಡಸ್ಟ್ರೀಸ್​ನ ನಿರ್ದೇಶಕತ್ವವೂ ನನಗೆ ಬೆಕಿಲ್ಲ’ ಎಂದು ಮಿಸ್ತ್ರಿ ತಿಳಿಸಿದ್ದಾರೆ. ಟಾಟಾ ಸಮೂಹದ ಒಟ್ಟಾರೆ ಹಿತದೃಷ್ಟಿಯಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಯಾವುದೇ ಒಬ್ಬ ವ್ಯಕ್ತಿಗಿಂತ ಸಮೂಹದ ಹಿತವೇ ಮುಖ್ಯವಾದದ್ದು ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
