ನವದೆಹಲಿ :ಜುಲೈ 1 ರಿಂದ 52 ಲಕ್ಷ ಕೇಂದ್ರ ಸರ್ಕಾರದ ನೌಕರರು ಮತ್ತು 60 ಲಕ್ಷ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಯರ್​ನೆಸ್​ ಅಲೊಯೆನ್ಸ್(ಡಿಎ)​ ಮತ್ತು ಡಿಯರ್​ನೆಸ್​ ರಿಲೀಫ್(ಡಿಆರ್​) ಬೆನೆಫಿಟ್ಟನ್ನು ಪುನಃ ನೀಡಲು ಆರಂಭಿಸಲಾಗುವುದು ಎನ್ನಲಾಗಿದೆ.
2020 ರ ಜನವರಿಯಿಂದ ಈಚೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಪರಿಷ್ಕರಿಸಲಾಗಿರಲಿಲ್ಲ. ಇದೀಗ ಜನವರಿ 1, 2020 ರಿಂದ ಜನವರಿ 1, 2021 ರವರೆಗಿನ ಡಿಎ ಬಾಕಿ ಮೊತ್ತವನ್ನು ನೌಕರರಿಗೆ 3 ಕಂತುಗಳಲ್ಲಿ ಪಾವತಿಸಲಾಗುವುದು. 7ನೇ ಪೇ ಕಮಿಷನ್​ ಶಿಫಾರಸ್ಸಿನ ಆಧಾರದಲ್ಲಿ ಲೆಕ್ಕ ಹಾಕಿ ಡಿಎ ಮೊತ್ತವನ್ನು ಪಾವತಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ:ಸ್ಟುಪಿಡ್‌ ಇಂಡಿಯನ್‌, ನೀನೂ ಕರಿಯಳು, ನಿನ್ನ ಹೃದಯನೂ ಕಪ್ಪು ಎಂದು ಜೈಲು ಸೇರಿದ ಸಿಂಗಪುರದ ಮಹಿಳೆ!
ಡಿಎ ಮೊತ್ತವನ್ನು ತಿಳಿಯಲು ನೌಕರರು 7ನೇ ವೇತನ ಆಯೋಗದ ಸಂಬಳ ಮತ್ತು ಪಿಂಚಣಿಯ ಮ್ಯಾಟ್ರಿಕ್ಸ್​ಅನ್ನು ಪರಿಶೀಲಿಸಬೇಕು. ಹಾಲಿ ಇರುವ ಶೇ. 17 ರ ಡಿಎ, ಶೇ. 28 ರವರೆಗೆ ಏರಿಕೆಯಾಗಲಿದೆ. ಹಾಗಾಗಿ ಜುಲೈ ತಿಂಗಳಿಂದ ಮಾಸಿಕ ಡಿಎ ಬೇಸಿಕ್ ಸ್ಯಾಲರಿಯ ಶೇ.11 ರಷ್ಟು ಏರಿಕೆಯಾಗಲಿದೆ ಎಂದು ನಾಷನಲ್ ಕೌನ್ಸಿಲ್​ ಆಫ್​ ಜೆಸಿಎಂನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರ ಹೇಳಿದ್ದಾರೆ.(ಏಜೆನ್ಸೀಸ್)
ಬಿಟ್ಟುಬಿಡಿ ಎಂದರೂ ಕೇಳದೆ ಮತ್ತಿನಲ್ಲಿದ್ದವನನ್ನು ಯದ್ವಾತದ್ವಾ ಥಳಿಸಿದ್ದ ಪಿಎಸ್​ಐ ಬಂಧನ

ಐಎಂಎ ದೂರುಗಳ ವಿರುದ್ಧ ಸುಪ್ರೀಂ ಮೊರೆ ಹೋದ ಬಾಬಾ ರಾಮ್​​ದೇವ್​

ಐಎಂಎ ದೂರುಗಳ ವಿರುದ್ಧ ಸುಪ್ರೀಂ ಮೊರೆ ಹೋದ ಬಾಬಾ ರಾಮ್​​ದೇವ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twenty =
Remember me
