ನವದೆಹಲಿ:ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ. ಶೇ. 3 ತುಟ್ಟಿಭತ್ಯೆ (ಡಿಎ) ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಇದು ಜುಲೈ 1ರಿಂದ ಅನ್ವಯ ಆಗಲಿದ್ದು, ಡಿಎ ಪ್ರಮಾಣ ಶೇ. 28ರಿಂದ ಶೇ. 31ಕ್ಕೆ ಏರಿಕೆ ಆಗಲಿದೆ. ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿಆರ್) ದೊರೆಯಲಿದೆ. 7ನೇ ವೇತನ ಆಯೋಗದ ಶಿಫಾರಸಿಗೆ ಅನುಗುಣವಾಗಿ ಈ ಏರಿಕೆ ಮಾಡಲಾಗಿದೆ. ಈ ನಿರ್ಧಾರದಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಆರ್ಥಿಕ ಅನುಕೂಲ ದೊರೆಯಲಿದೆ. ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 9,488.70 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ.
ಗತಿಶಕ್ತಿಗೆ ಸಮ್ಮತಿ:ಪ್ರಧಾನಿ ನರೇಂದ್ರ ಮೋದಿ ಅ. 13ರಂದು ಚಾಲನೆ ನೀಡಿದ ನೂರು ಲಕ್ಷ ಕೋಟಿ ರೂಪಾಯಿ ಅನುದಾನ ಮೊತ್ತದ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾ್ಯನ್​ಗೆ (ಎನ್​ಎಂಪಿ) ಸಂಪುಟ ಒಪ್ಪಿಗೆ ನೀಡಿದೆ. ಸಾರಿಗೆ ವ್ಯವಸ್ಥೆಯಲ್ಲಿನ ಅಡಚಣೆ ನಿವಾರಿಸಲು ವಿವಿಧ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಯೋಜನೆ ಇದಾಗಿದ್ದು, ಇದರಿಂದ ಸರಕು ಸಾಗಣೆ ತಡೆರಹಿತವಾಗಲಿದೆ. ಎನ್​ಎಂಪಿ ಮೇಲೆ ಮೂರು ಹಂತದಲ್ಲಿ ನಿಗಾ ಇರಲಿದ್ದು, ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯ ಉನ್ನತಾಧಿಕಾರದ ಕಾರ್ಯದರ್ಶಿಗಳ ಗುಂಪು (ಇಜಿಒಎಸ್), ಮಲ್ಟಿಮಾಡಲ್ ನೆಟ್​ವರ್ಕ್ ಪ್ಲಾ್ಯನಿಂಗ್ ಗುಂಪು (ಎನ್​ಪಿಜಿ), ತಾಂತ್ರಿಕ ಬೆಂಬಲ ಘಟಕ (ಟಿಎಸ್​ಯುು) ಈ ಹೊಣೆಯನ್ನು ನಿರ್ವಹಿಸಲಿವೆ.
ದೇಶದ ಶೇ. 95 ಮಂದಿಗೆ ಪೆಟ್ರೋಲ್ ಅಗತ್ಯವೇ ಇಲ್ಲ!; ಹೀಗಂದಿದ್ದು ಯಾರು ಗೊತ್ತೇ?

ಯುವತಿಯನ್ನು ಪ್ರೀತಿಸುತ್ತಿದ್ದಾತನ ಎದೆಗೇ ಚಾಕು ಚುಚ್ಚಿದ್ರು; ಆಕೆಯನ್ನು ಭೇಟಿ ಮಾಡ್ಬೇಡ ಅಂದ್ರೂ ಮಾಡಿದ್ದಕ್ಕೆ ಇರಿದಿದ್ದವರ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + one =
Remember me
