ದೆಹಲಿ:ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ವೈಯುಕ್ತಿಕ ಕರೆ ದಾಖಲೆಗಳು, ಸಂಪರ್ಕಗಳು, ಇತಿಹಾಸ ಮತ್ತು ಕ್ಯಾಮರಾವನ್ನು ಹ್ಯಾಕ್ ಮಾಡುವ ಮಾಲ್‌ವೇರ್ ಹರಡುತ್ತಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ.
ಡಾಮ್ ಎಂಬ ಈ ವೈರಸ್​ ಆಂಟಿ-ವೈರಸ್ ಪ್ರೋಗ್ರಾಂಗಳನ್ನು ಬೈಪಾಸ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳು(Third party apps and websites) ಅಥವಾ ವಿಶ್ವಾಸಾರ್ಹವಲ್ಲದ ವೆಬ್​ಸೈಟ್​​ ಮೂಲಗಳಿಂದ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳ ಮೂಲಕ ಆಂಡ್ರಾಯ್ಡ್ ಪೋನ್​ನ್ನು ಪ್ರವೇಶಿಸುತ್ತದೆ.
ಇದನ್ನೂ ಓದಿ:ಬಾಯಲ್ಲಿ ನೀರೂರಿಸಿದ ತರಹೇವಾರಿ ಹಲಸು, ಸಾವಯವ ಮೇಳ ಹಲಸಿನ ಹಬ್ಬದ ವೈಶಿಷ್ಟ್ಯ
ಫೋನ್ ಕರೆ ರೆಕಾರ್ಡಿಂಗ್‌, ಸಂಪರ್ಕಗಳನ್ನು ಹ್ಯಾಕ್ ಮಾಡುವುದು, ಕ್ಯಾಮರಾಗೆ ಅನಧಿಕೃತವಾಗಿ ಪ್ರವೇಶ ಪಡೆಯುವುದು, ಪಾಸ್‌ವರ್ಡ್‌ಗಳನ್ನು ಮಾರ್ಪಡಿಸುವುದು, ಸ್ಕ್ರೀನ್‌ಶಾಟ್‌ಗಳನ್ನು ಸೆರೆಹಿಡಿಯುವುದು, ಎಸ್‌ಎಂಎಸ್‌ಗಳನ್ನು ಕದಿಯುವುದು, ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು/ಅಪ್‌ಲೋಡ್ ಮಾಡುವುದು ಮತ್ತು ಕಮಾಂಡ್-ಕಂಟ್ರೋಲ್ ಸರ್ವರ್‌ಗೆ ರವಾನೆ ಮಾಡುವ ಸಾಮರ್ಥ್ಯವನ್ನು ವೈರಸ್​ ಹೊಂದಿದೆ ಎಂದು ಹೇಳಲಾಗಿದೆ.
ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಅವಿಶ್ವಾಸಾರ್ಹ ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡದಿರುವುದು, ಇಮೇಲ್‌ಗಳು ಮತ್ತು ಎಸ್‌ಎಂಎಸ್‌ಗಳಲ್ಲಿ ಒದಗಿಸಲಾದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವಾಗ ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + six =
Remember me
