ಲಖನೌ:ಮಕ್ಕಳ ಕಳ್ಳತನ ಹೆಚ್ಚಾಗುತ್ತಿದೆ ಎಂದು ಹೆದರಿದ ಅಪ್ಪ ಅಮ್ಮ, ತಮ್ಮ ಮಗನ ಕಾಲುಗಳನ್ನು ಚೈನ್​ನಿಂದ ಕಟ್ಟಿ ಕೆಲಸಕ್ಕೆ ಹೋಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢ್​ನಲ್ಲಿ ನಡೆದಿದೆ.
ಅಲಿಗಢ್​ನ ಖೇಡಾ ಪೊಲೀಸ್ ಠಾಣೆ ಪ್ರದೇಶದ ಕ್ವಾರ್ಸಿ ಬೈಪಾಸ್‌ನಲ್ಲಿರುವ ಸರೋಜ್​ ನಗರದ ಸ್ಲಂ ಏರಿಯಾದಲ್ಲಿ ಇಂತಹ ಘಟನೆ ನಡೆದಿದೆ. ಹೆಚ್ಚು ಕಮ್ಮಾರರು ಇರುವ ಈ ಪ್ರದೇಶದಲ್ಲಿ ಪೋಷಕರು ತಮ್ಮ ಮಗನ ಕಾಲಿಗೆ ಚೈನ್​ ಹಾಕಿ ಕಟ್ಟಿ ಬೀಗ ಹಾಕಿಕೊಂಡು ಹೋಗಿರುವ ದೃಶ್ಯ ಕಂಡುಬಂದಿದೆ. ಮಕ್ಕಳ ಕಳ್ಳರಿಂದ ಮಗನನ್ನು ರಕ್ಷಿಸಲು ಈ ರೀತಿ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ನಮ್ಮ ಮನೆಯ ಹತ್ತಿರದಲ್ಲೇ ಇರುವ ಶಿವಾನಿ ಹೆಸರಿನ ಬಾಲಕಿಯನ್ನು ಜೂನ್​ 22ರಂದು ಮಕ್ಕಳ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಈ ವಿಚಾರದಲ್ಲಿ ನಾವೆಲ್ಲರೂ ಸೇರಿ ಪೊಲೀಸ್ ದೂರನ್ನೂ ನೀಡಿದ್ದೇವೆ. ಆದರೆ ಇದುವರೆಗೂ ಶಿವಾನಿಯನ್ನು ಪೊಲೀಸರು ಹುಡುಕಿಲ್ಲ. ಇತ್ತೀಚೆಗೆ ಈ ರೀತಿ ಮಕ್ಕಳ ಕಳ್ಳತನವಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೇ ಕಾರಣಕ್ಕೆ ನಾವು ನಮ್ಮ ಮಗನಿಗೆ ಚೈನ್​ನಲ್ಲಿ ಬಂಧಿಸಿದ್ದೆವು. ನಾವಿಬ್ಬರೂ ಕೆಲಸ ಮಾಡುವಾಗ ಅವನು ಸುರಕ್ಷಿತವಾಗಿರಲಿ ಎನ್ನುವುದು ನಮ್ಮ ಉದ್ದೇಶವಾಗಿತ್ತು ಎಂದು ಬಾಲಕನ ತಂದೆ ತಾಯಿ ತಿಳಿಸಿದ್ದಾರೆ. (ಏಜೆನ್ಸೀಸ್)
ಗಂಡ ಸ್ಕ್ಯಾನಿಂಗ್​ಗೆ ಕರೆದುಕೊಂಡು ಹೋಗಲಿಲ್ಲವೆಂದು ನೇಣಿಗೆ ಕೊರಳೊಡ್ಡಿದ 7 ತಿಂಗಳ ಗರ್ಭಿಣಿ!

ಎಂಎಸ್​ಡಿ ಬರ್ತ್​ಡೇ ಸ್ಪೆಷಲ್: ಈ ಫೋಟೋದಲ್ಲಿ ಧೋನಿ ಎಲ್ಲಿದ್ದಾರೆ ಹುಡುಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
