ನವದೆಹಲಿ:ಮುಂದಿನ ಐದು ವರ್ಷಗಳು ಮಾರ್ಗಸೂಚಿ ಎಂದೇ ಬಿಂಬಿತವಾಗಿರುವ ಕೇಂದ್ರ ಬಜೆಟ್​​ ಮಂಡನೆಗೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಬಜೆಟ್​ ಮಂಡನೆಗೆ ಔಪಚಾರಿಕ ಒಪ್ಪಿಗೆ ಪಡೆದರು.
ಭೇಟಿಯ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿರ್ಮಲಾ ಸೀತಾರಾಮನ್​ ಅವರಿಗೆ ಸಿಹಿ ಮೊಸರು ಶುಭ ಕೋರಿದರು. ಈ ವೇಳೆ ವೇಳೆ ಹಣಕಾಸು ಸಚಿವಾಲಯದ ಹಲವಾರು ಹಿರಿಯ ಅಧಿಕಾರಿಗಳು ರಾಷ್ಟ್ರಪತಿ ಭವನದಲ್ಲಿ ಉಪಸ್ಥಿತರಿದ್ದರು.
#WATCH| Finance Minister Nirmala Sitharaman meets President Droupadi Murmu at Rashtrapati Bhavan, ahead of the Budget presentation at 11am in Parliament.
(Source: DD News)pic.twitter.com/VdsKg5bSLG
— ANI (@ANI)July 23, 2024

ರಾಷ್ಟ್ರಪತಿಗಳ ಒಪ್ಪಿಗೆ ಬಳಿಕ ಸಂಸತ್ತಿನ ಕಡೆ ತೆರಳಲಿರುವ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆಗೂ ಮುನ್ನ ಸಂಪುಟ ಸಭೆಯಲ್ಲಿ ಬಜೆಟ್​ಗೆ ಅನುಮೋದನೆ ಪಡೆಯಲಿದ್ದಾರೆ. ಇದಾದ ನಂತರ ಬೆಳಗ್ಗೆ 11 ಗಂಟೆಗೆ ಬಜೆಟ್​ ಮಂಡನೆ ಆರಂಭಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11ನೇ ಪೂರ್ಣ ಪ್ರಮಾಣದ ಬಜೆಟ್​ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್​ ಅವರು ಮಂಡಿಸುತ್ತಿರುವ 6ನೇ ಬಜೆಟ್​ ಆಗಿದೆ. ಈ ಬಾರಿಯು ಸೂಟ್​ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆಯಾಗಲಿದೆ. ​​ ಕಳೆದ ಬಾರಿಯಂತೆ “ಬಹಿ ಖಾತಾ” ಸಂಪ್ರದಾಯವನ್ನು ಬದಿಗಿಟ್ಟು ಟ್ಯಾಬ್​ ಮೂಲಕ ಆಯವ್ಯಯ ಮಂಡನೆ ಮಾಡಲಿದ್ದಾರೆ.
ಮುಂಬೈ ಇಂಡಿಯನ್ಸ್​ ತಂಡಕ್ಕೆ ಕಾದಿದೆ ಬಿಗ್​ ಶಾಕ್​: ಗುಡ್​ಬೈ ಹೇಳಲಿದ್ದಾರೆ ಇಬ್ಬರು ಸ್ಟಾರ್​ ಆಟಗಾರರು!

ಆ ಒಂದು ಕಾರಣಕ್ಕೆ ನಾನು ಸಿನಿಮಾಗಳಲ್ಲಿ ಅರ್ಧಂಬರ್ಧ ಬಟ್ಟೆ ತೊಡುವುದಿಲ್ಲ ಎಂದ ನಟಿ ಐಶ್ವರ್ಯಾ ರಾಜೇಶ್​!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:3 × 1 =
Remember me
