ನವದೆಹಲಿ:ಕರೊನಾ ಸೋಂಕಿನ ಏರಿಕೆ ಭಾರತದಲ್ಲಿ ಸತತವಾಗಿ ಮುಂದುವರಿದಿದ್ದು ಬುಧವಾರ 1,94,720 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಮಂಗಳವಾರ ವರದಿಯಾದ ಕೇಸ್​ಗಿಂತ ಶೇಕಡ 15.8ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೈನಿಕ ಪಾಸಿಟಿವಿಟಿ ದರ ಶೇಕಡ 11.5 ಆಗಿದೆ. ದೇಶದಲ್ಲಿ ಇದುವರೆಗೆ ಒಮಿಕ್ರಾನ್ ತಳಿಯ 4,868 ಕೇಸ್​ಗಳು ಪತ್ತೆಯಾಗಿವೆ. ಮಹಾಮಾರಿಯ ಮೂರನೇ ಅಲೆಯಲ್ಲಿ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕನಿಷ್ಠ 120 ಜಿಲ್ಲೆಗಳಲ್ಲಿ ಶೇಕಡ 10ರಷ್ಟು ಸಾಪ್ತಾಹಿಕ ಪಾಸಿಟಿವಿಟಿ ದರ ದಾಖಲಾಗಿದೆ. ದೇಶದಾದ್ಯಂತ ಇದುವರೆಗೆ 153 ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದ್ದು ಆಯ್ದ ವಿಭಾಗಗಳಿಗೆ 3ನೇ ಡೋಸ್ ನೀಡುವ ಅಭಿಯಾನವೂ ಆರಂಭವಾಗಿದೆ. ಅಲ್ಲದೆ 15-18 ವಯೋಮಿತಿಯ ಮಕ್ಕಳಿಗೂ ಲಸಿಕೆ ಹಾಕಲಾಗುತ್ತಿದೆ. ಇಷ್ಟೆಲ್ಲ ಆದರೂ ಒಮಿಕ್ರಾನ್ ಹಾವಳಿಯನ್ನು ತಡೆಯಲು ಆಗುತ್ತಿಲ್ಲ. ಪ್ರತಿಯೊಬ್ಬರಿಗೂ ಸೋಂಕು ತಗಲುವ ಅಪಾಯವಿದೆ ಎಂದು ಸರ್ಕಾರಿ ತಜ್ಞರೊಬ್ಬರು ಹೇಳಿದ್ದಾರೆ.
ಕೋವಿಡ್ ಮಹಾಮಾರಿ ನಾಗಾಲೋಟದಿಂದ ಮುಂದುವರಿದಿರುವುದರಿಂದ ಬಿಕ್ಕಟ್ಟನ್ನು ಎದುರಿಸಲು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆಯನ್ನು ಖಾತರಿಗೊಳಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ತಕ್ಷಣವೇ ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳುವಂತೆ ಬುಧವಾರ ಬರೆದಿರುವ ಪತ್ರದಲ್ಲಿ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚಿಸಿದ್ದಾರೆ. ಕನಿಷ್ಠ 48 ಗಂಟೆ ಕಾಲ ಮೆಡಿಕಲ್ ಆಕ್ಸಿಜನ್ ಲಭ್ಯತೆ ಖಾತರಿಪಡಿಸಲು ಸಂಬಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಸಚಿವಾಲಯ ಸೂಚಿಸಿದೆ. ಆಕ್ಸಿಜನ್ ನಿಯಂತ್ರಣ ರೂಂಗಳನ್ನು ಪುನಶ್ಚೇತನಗೊಳಿಸುವಂತೆಯೂ ಕೋರಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಂಥ ಕ್ರಮ ತುರ್ತು ಅಗತ್ಯ ಎಂದು ರಾಜೇಶ್ ಭೂಷಣ್ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ. ಆಕ್ಸಿಜನ್​ಗೆ ಬೇಡಿಕೆ ತೀರಾ ಹೆಚ್ಚಾದರೆ ಖಾಸಗಿ ಕ್ಷೇತ್ರದ ಸೇವೆ ಬಳಸಿಕೊಳ್ಳುವುದನ್ನೂ ಪರಿಶೀಲಿಸುವಂತೆಯೂ ಅವರು ಸಲಹೆ ಮಾಡಿದ್ದಾರೆ.
ಸಮಾಧಾನ ತಂದ ಒಮಿಕ್ರಾನ್:ಒಮಿಕ್ರಾನ್ ಪ್ರಭೇದವು ಕರೊನಾವನ್ನು ಮಹಾಮಾರಿ (ಪಾಂಡೆಮಿಕ್) ಹಂತದಿಂದ ಸ್ಥಳೀಯ ರೋಗದ (ಎಂಡೆಮಿಕ್) ಹಂತಕ್ಕೆ ಒಯ್ಯುತ್ತಿದೆ ಎಂದು ಐರೋಪ್ಯ ಒಕ್ಕೂಟದ ಔಷಧ ನಿಯಂತ್ರಣ ಸಂಸ್ಥೆಯ (ಇಎಂಎ) ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯಕ್ಕೆ ಮಹಾಮಾರಿ ಯಾದರೂ ಮನುಕುಲ ಕರೊನಾ ಸೋಂಕಿನೊಂದಿಗೆ ಜೀವಿಸಬಹುದು ಎಂದವರು ಹೇಳಿದ್ದಾರೆ.
ಇಸ್ರೇಲ್​ನತ್ತ ಎಲ್ಲರ ಚಿತ್ತ:ಕರೊನಾ ಕಟ್ಟಿಹಾಕಲು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿರುವಾಗಲೇ ಇಸ್ರೇಲ್​ನಲ್ಲಿ ಒಮಿಕ್ರಾನ್​ನಿಂದಾಗಿ ಸೋಂಕಿನಲ್ಲಿ ಭಾರಿ ಏರಿಕೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಹಿಂದಿನ ದಾಖಲೆ ಮುರಿದು ಮಂಗಳವಾರ ಒಂದೇ ದಿನ 37,000ಕ್ಕೂ ಅಧಿಕ ಕೇಸ್​ಗಳು ದೃಢಪಟ್ಟಿವೆ. ಲಾಕ್​ಡೌನ್, ಕಟ್ಟುನಿಟ್ಟಿನ ಕ್ರಮಗಳನ್ನು ಮರು ಜಾರಿ ಮಾಡಲು ಇಸ್ರೇಲ್ ಸರ್ಕಾರ ಇನ್ನೂ ಮುಂದಾಗಿಲ್ಲ.
ಬೂಸ್ಟರ್ ಡೋಸ್​ಗೆ ಅತೃಪ್ತಿ:ಸಾರ್ವಜನಿಕರಿಗೆ ಲಸಿಕೆಯ ನಾಲ್ಕನೇ ಡೋಸ್ ನೀಡುವುದಕ್ಕೂ ಇಎಂಎ ಅತೃಪ್ತಿ ವ್ಯಕ್ತಪಡಿಸಿದೆ. ಪದೇ ಪದೇ ಬೂಸ್ಟರ್ ಡೋಸ್ ನೀಡಿಕೆ ಒಳ್ಳೆಯದಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್​ಒ)ಯೂ ಇತ್ತೀಚೆಗೆ ಹೇಳಿದೆ.
ಬಿಜೆಪಿ ಕಚೇರಿಯ 42 ಸಿಬ್ಬಂದಿಗೆ ಪಾಸಿಟಿವ್:ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯ 42 ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಸೋಮವಾರ ಸಾಮೂಹಿಕ ಪರೀಕ್ಷೆ ನಡೆಸಲಾಗಿದ್ದು 42 ಮಂದಿಯ ಫಲಿತಾಂಶ ಪಾಸಿಟಿವ್ ಬಂದಿದೆ. ಮಿಂಟೊ ರಸ್ತೆಯಲ್ಲಿರುವ ಕಚೇರಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಸೋಂಕಿತ ಸಿಬ್ಬಂದಿಯಲ್ಲಿ ಬಹುತೇಕರು ಸ್ವಚ್ಛತಾ ಕಾರ್ವಿುಕರಾಗಿದ್ದಾರೆ. ಎಲ್ಲರಿಗೂ ಸ್ವಯಂ-ಐಸೋಲೇಶನ್​ಗೆ ಸಲಹೆ ಮಾಡಲಾಗಿದೆ.
ನಿರ್ಬಂಧ ತೆರವಿಗೆ ದೆಹಲಿ ಒಲವು:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2-3 ದಿನದೊಳಗೆ ಕೋವಿಡ್ ಪ್ರಕರಣಗಳು ಕಡಿಮೆಯಾದರೆ ಈಗ ಜಾರಿಯಲ್ಲಿರುವ ನಿರ್ಬಂಧಗಳನ್ನು ವಾಪಸ್ ಪಡೆಯಲಾಗುತ್ತದೆಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಬುಧವಾರ ಹೇಳಿದ್ದಾರೆ. ದೆಹಲಿಯ ಪಾಸಿಟಿವಿಟಿ ದರ ಶೇಕಡ 25ನ್ನು ದಾಟಿದ್ದು ಕಳೆದ 7 ತಿಂಗಳಲ್ಲೇ ಅತ್ಯಧಿಕ ದರವಾಗಿದೆ. ಸೋಂಕು ಪ್ರಕರಣಗಳು ಉತ್ತುಂಗಕ್ಕೆ ತಲುಪಿದೆಯೇ ಎನ್ನುವುದಕ್ಕೆ ಪಾಸಿಟಿವಿಟಿ ದರ ಮಾನದಂಡ ಆಗಲಾರದು ಎಂದು ಜೈನ್ ಹೇಳಿದ್ದಾರೆ. ದೆಹಲಿಯಲ್ಲಿ ಕೇಸ್​ಗಳು ಸ್ಥಿರವಾಗಿದ್ದು ಸದ್ಯವೇ ಇಳಿಯುವ ಸೂಚನೆಯಿದೆ ಎಂದಿದ್ದಾರೆ. ಮುಂಬೈಯಲ್ಲಿ ಪ್ರಕರಣಗಳು ಇಳಿಮುಖವಾಗುತ್ತಿದ್ದು ದೆಹಲಿಯಲ್ಲೂ ಅದೇ ಪ್ರವೃತ್ತಿ ಕಾಣಬಹುದು ಎಂದಿದ್ದಾರೆ.
ಅಮರಿಂದರ್ ಸಿಂಗ್​ಗೆ ಕರೊನಾ:ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್​ಗೆ ಕರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ತಾವು ಪಾಸಿಟಿವ್ ಆಗಿದ್ದು ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆಗೆ ಒಳಪಡಬೇಕೆಂದು 79 ವರ್ಷದ ಸಿಂಗ್ ಬುಧವಾರ ಟ್ವೀಟ್​ನಲ್ಲಿ ಮನವಿ ಮಾಡಿದ್ದಾರೆ. ಸಿಂಗ್ ಪತ್ನಿ ಹಾಗೂ ಪಾಟಿಯಾಲಾದ ಕಾಂಗ್ರೆಸ್ ಎಂಪಿ ಪ್ರಣೀತ್ ಕೌರ್ ಕೂಡ ಕೆಲ ದಿನಗಳ ಹಿಂದೆ ಕರೊನಾ ಪಾಸಿಟಿವ್ ಆಗಿದ್ದರು.
ಮುಂಬೈಯಲ್ಲಿ ಸೋಂಕು ಇಳಿಮುಖ?:ದೇಶದ ಆರ್ಥಿಕ ರಾಜಧಾನಿ ಮುಂಬೈ ಮಹಾನಗರದಲ್ಲಿ ಸೋಂಕಿನ ದೈನಿಕ ಕೇಸ್​ಗಳು ಇಳಿಮುಖವಾಗುತ್ತಿದ್ದು ಕೋವಿಡ್-ಒಮಿಕ್ರಾನ್ ಅಲೆ ಈಗಾಗಲೇ ‘ಕಡಿಮೆಯಾಗಿರಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸತತ ನಾಲ್ಕನೇ ದಿನವಾದ ಮಂಗಳವಾರವೂ ನಿತ್ಯದ ಕೇಸ್ ಕಡಿಮೆಯಾದ್ದರಿಂದ ಅವರು ಈ ನಿರ್ಣಯಕ್ಕೆ ಬಂದಿದ್ದಾರೆ.
ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ; ಕೊಲೆಯಾಗಿ ಹೋದ ತಾಲೂಕು ಪಂಚಾಯತ್ ಉಪಾಧ್ಯಕ್ಷನ ಸಹೋದರ

ಇದು ಹಾಟೆಸ್ಟ್ ಸೀರೆ!; ಇದನ್ನು ಬೆಂಕಿಪೊಟ್ಟಣದೊಳಗಿಟ್ಟು ಒಯ್ಯಬಹುದು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + three =
Remember me
