ಅಹಮದಾಬಾದ್​:ದಿನಗೂಲಿ ಕೆಲಸ ಮಾಡಿಕೊಂಡು ಎರಡು ಮಕ್ಕಳನ್ನು ಸಾಕಿಕೊಂಡು, ಗಂಡನೊಂದಿಗೆ ಸಂತೋಷದಿಂದ ಜೀವನ ಕಳೆಯುತ್ತಿದ್ದ ಮಹಿಳೆಯೊಬ್ಬಳನ್ನು ಮೂವರು ಪಾಪಿಗಳು ಗ್ಯಾಂಗ್​ ರೇಪ್​ ಮಾಡಿ ಕೊಲೆ ಮಾಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.
25 ವರ್ಷದ ಮಹಿಳೆ ಮತ್ತು ಆಕೆಯ ಗಂಡ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಏಪ್ರಿಲ್​ 17ರಂದು ಕೂಡ ಮಹಿಳೆ ಕೆಲಸಕ್ಕೆ ಹೊರಟಿದ್ದಾಳೆ. ಈ ಸಮಯದಲ್ಲಿ ದಾರಿ ಮಧ್ಯೆ ಅಡ್ಡಗಟ್ಟಿದ ಮೂರು ಕಾಮುಕರು ಆಕೆಯನ್ನು ಹತ್ತಿರದ ಪಾಳು ಬಂಗಲೆಯೊಂದಕ್ಕೆ ಎಳೆದೊಯ್ದಿದ್ದಾರೆ. ಅಲ್ಲಿ ಆಕೆಗೆ ಡ್ರಗ್ಸ್​ ಕೊಟ್ಟು, ಗ್ಯಾಂಗ್​ ರೇಪ್​ ಮಾಡಲಾಗಿದೆ. ಅದಾದ ನಂತರ ಆಕೆಯನ್ನು ಕೊಲೆ ಮಾಡಿ, ಹೆಣವನ್ನು ಹತ್ತಿರದಲ್ಲೇ ಎಸೆದ ಪಾಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಏಪ್ರಿಲ್​ 18ರಂದು ಮಹಿಳೆಯ ಮೃತದೇಹ ಪತ್ತೆಯಾಗಿದೆ. ಅದನ್ನು ಮರಣೋತ್ತರ ಪರೀಕ್ಷೆ ಮಾಡಿದಾಗ ಆಕೆಯ ಮೇಲೆ ಗ್ಯಾಂಗ್​ ರೇಪ್​ ಆಗಿರುವುದು ದೃಢವಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)
ಕರೊನಾ ವಾರ್ಡ್​ನಲ್ಲಿ ಜೋರಾಗಿ ಮಾತನಾಡಬೇಡ ಎಂದಿದ್ದಕ್ಕೆ ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ!

ಟಿಕ್​ಟಾಕ್​ ಸ್ಟಾರ್​ ಫನ್​ ಬಕೆಟ್​ ಭಾರ್ಗವನ ಬಗ್ಗೆ ಶಾಕಿಂಗ್​ ಸಂಗತಿಗಳನ್ನು ಬಿಚ್ಚಿಟ್ಟ ಯುವತಿ..!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − eighteen =
Remember me
