ಹೆಂಡತಿ ಮಕ್ಕಳನ್ನು ನೋಡಲೆಂದೇ 30 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಮನೆಯೆದುರು ಬಂದು ನಿಂತಿದ್ದಾನೆ ದಿನಗೂಲಿ ಕಾರ್ಮಿಕ. ತನ್ನ ಸಂಪಾದನೆಯಲ್ಲ ಖರ್ಚಾದರೂ ತನ್ನವರನ್ನು ಸೇರಿಕೊಳ್ಳುತ್ತೇನಲ್ಲ ಸಂತೋಷವನ್ನಷ್ಟೇ ಆತ ಬಯಸಿದ್ದ. ಆದರೆ, ಆದದ್ದೇ ಬೇರೆ…ನೆರೆಹೊರೆಯವರೆಲ್ಲ ಗುಂಪಾಗಿ ಸೇರಿ (ವ್ಯಕ್ತಿಗತ ಅಂತರವನ್ನೂ ಕಾಯ್ದುಕೊಳ್ಳದೇ) ಮನೆಯೊಳಗೆ ನೀನು ಬರಕೂಡದು ಎನ್ನುತ್ತಿದ್ದಾರೆ. ಪತ್ನಿಯೂ ಮನೆಯಿಂದ ಹೊರಗಿರು ಎನ್ನುತ್ತಿದ್ದಾಳೆ. ಈ ಭಾಗ್ಯಕ್ಕಾಗಿ ತಾನು ಅಷ್ಟು ದೂರದಿಂದ ಬರಬೇಕಿತ್ತೇ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಿದ್ದಾನೆ.
ಇದನ್ನೂ ಓದಿ;ರೈಲು ಪ್ರಯಾಣಿಕರೇ ಗಮನಿಸಿ.. ಊಟ, ಹೊದಿಕೆ ನೀವೇ ವ್ಯವಸ್ಥೆ ಮಾಡಿಕೊಳ್ಳಿ
ಆತನ ಹೆಸರು ಗೋಬಿಂದ್​ ದೇಬನಾಥ್​. ತ್ರಿಪುರಾದ ಅಗರ್ತಲಾ ನಿವಾಸಿ. ಲಾಕ್​ಡೌನ್​ ಘೋಷಣೆಯಾಗುವ ಕೆಲ ದಿನಗಳ ಮುಂಚೆ ತಂದೆಯೊಡನೆ ಅಸ್ಸಾಂನಲ್ಲಿದ್ದ ಸೋದರಳಿಯನ ಮನೆಗೆ ಹೋಗಿದ್ದ. ಎರಡನೇ ಹಂತದ ಲಾಕ್​ಡೌನ್​ ವಿಸ್ತರಣೆಯಾದಾಗ ಆತನಿಗೆ ಅಲ್ಲಿರಲು ಆಗಲಿಲ್ಲ. ಹೇಗಾದರೂ ಮಾಡಿ ಮನೆ ಸೇರಿಕೊಳ್ಳಬೇಕೆಂಬ ಆಸೆಯಿಂದ ಅಲ್ಲಿಂದ ಹೊರಟ.
ಸರ್ಕಾರವೇ ಅವಕಾಶ ನೀಡಿದಂತೆ, ಕಾರ್​ ಬುಕ್​ ಮಾಡಿಕೊಂಡು ಅಗರ್ತಲಾ ಗಡಿಭಾಗದವರೆಗೂ ಬಂದ. ಇದಕ್ಕಾಗಿ ಆತ 30 ಸಾವಿರ ರೂ.ಗಳನ್ನು ಖರ್ಚು ಮಾಡಿದ್ದ. ಗಡಿಭಾಗದಲ್ಲಿ ತ್ರಿಪುರ ಅಧಿಕಾರಿಗಳು ಅವನನ್ನು ಕ್ವಾರಂಟೈನ್​ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಆತನನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇಲ್ಲವೆಂದು ಗೊತ್ತಾಗಿದೆ. ಆಮೇಲೆ ಪೊಲೀಸರೇ ಅವನನ್ನು ಜಾಯ್​ನಗರದಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅವನನ್ನು ಮನೆಗೆ ಸೇರಿಸಿಕೊಳ್ಳಲು ಯಾರೂ ಸಿದ್ಧರಿರಲಿಲ್ಲ. 14 ದಿನಗಳ ಕ್ವಾರಂಟೈನ್​ ಮುಗಿಸಿದ ಬಳಿಕವಷ್ಟೇ ಆತನನ್ನು ಮನೆಗೆ ಕರೆತನ್ನಿ ಎನ್ನುತ್ತಿದ್ದಾರೆ.
ಇದನ್ನೂ ಓದಿ;2.6 ಲಕ್ಷ ವಿದ್ಯಾರ್ಥಿಗಳಿಂದ 7,255 ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ನಡೀತಿರೋದೇನು?
ಕಡುಬಡವರಿಗಾಗಿ ಕಟ್ಟಿದ ವಸತಿ ಸಮುಚ್ಚಯದಲ್ಲಿ ಪತ್ನಿ ಜತೆ ಆತ ವಾಸವಾಗಿದ್ದ. ಇಲ್ಲಿ ಯಾರಿಗೂ ಒಂದು ವೇಳೆ ಸೋಂಕು ಕಾಣಿಸಿಕೊಂಡಲ್ಲಿ, ದಿನಗೂಲಿ, ಮನೆಗೆಲಸ ಮಾಡುವ ಜನರಿರುವ ಈ ಪ್ರದೇಶದಲ್ಲಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದ ಎಂಬುದು ಅವರ ವಾದ. ಹೀಗಾಗಿ ಗೋಬಿಂದ್​ನನ್ನು ಮನೆಗೆ ಬಿಡಲು ಬಂದ ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ಅಡ್ಡಗಟ್ಟಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಗೋಬಿಂದ್​ನನ್ನು ಜಿಲ್ಲಾಡಳಿತ ಕ್ವಾರಂಟೈನ್​ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ.
ಸೋಂಕು ವ್ಯಾಪಿಸದಂತೆ ತಡೆಗಟ್ಟಲು ಮನೆಯಲ್ಲಿಯೇ ಇರಿ, ಅನಗತ್ಯವಾಗಿ ಸುತ್ತಾಡಬೇಡಿ ಎಂದು ಸರ್ಕಾರ ಮನವಿ ಮಾಡುತ್ತಲೇ ಇದೆ. ಇದನ್ನು ಅಲಕ್ಷಿಸುವ ಜನರು, ಕೋವಿಡ್​ ತಮಗೆ ಕಂಟಕವಾಗಲಿದೆ ಎಂಬುದು ಅರಿವಾಗುತ್ತಲೇ ತಮ್ಮವರನ್ನೂ ದೂರಮಾಡುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಪಶ್ಚಿಮ ತ್ರಿಪುರಾದ ಆರೋಗ್ಯಾಧಿಕಾರಿ ಡಾ. ಸಂಗೀತಾ ಚಕ್ರವರ್ತಿ ಹೇಳುತ್ತಾರೆ. ಒಟ್ಟಿನಲ್ಲಿ ಕಾಯಿಲೆ ಭೀತಿ ಮತ್ತೊಂದು ರೀತಿಯಲ್ಲಿ ಸಾಮಾಜಿಕ ತಲ್ಲಣಗಳನ್ನು ಹುಟ್ಟುಹಾಕುತ್ತಿದೆ.
ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
