ರಾಜಸ್ಥಾನ:ರಾಜಸ್ಥಾನ ಹೈಕೋರ್ಟ್‌ ಆವರಣದಲ್ಲಿ ಇರುವ ಮನುವಿನ ಪ್ರತಿಮೆಯನ್ನು ತೆರವುಗೊಳಿಸುವಂತೆ ಕೋರಿ 600ಕ್ಕೂ ಹೆಚ್ಚು ದಲಿತ ಕಾರ್ಯಕರ್ತರು, ವಿದ್ವಾಂಸರು, ಶಿಕ್ಷಕರು ಮತ್ತು ಪತ್ರಕರ್ತರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಮನುವಿನ ಪ್ರತಿಮೆಯು ಭಾರತೀಯ ಸಂವಿಧಾನಕ್ಕೆ, ಮಹಿಳೆಯರು ಮತ್ತು ಸಮಾನತೆ ಹಾಗೂ ನ್ಯಾಯವನ್ನು ನಂಬುವವರಿಗೆ ಮಾಡುತ್ತಿರುವ ಅನ್ಯಾಯ. ಆದ್ದರಿಂದ ಕೂಡಲೇ ಈ ಪ್ರತಿಮೆಯನ್ನು ತೆಗೆದುಹಾಕಬೇಕು ಎಂದು ನವಸರ್ಜನ್ ಟ್ರಸ್ಟ್‌ನ ದಲಿತ ಹಕ್ಕುಗಳ ಸಂಘಟನೆಯ ಸಂಸ್ಥಾಪಕ ಮಾರ್ಟಿನ್ ಮ್ಯಾಕ್ವಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಆಗಸ್ಟ್ 15ರೊಳಗೆ ಪ್ರತಿಮೆಯನ್ನು ತೆರವುಗೊಳಿಸಿದ್ದರೆ ಪ್ರತಿಭಟನೆಗೆ ಕರೆ ಕೊಡುವುದಾಗಿ ಹೇಳಿದ್ದಾರೆ.
ಈ ಪ್ರತಿಮೆಯು ದಲಿತರು ಮತ್ತು ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ಪ್ರತಿರೂಪವಾಗಿದೆ. ಜಾತಿಯ ಆಧಾರದ ಮೇಲೆ ತಾರತಮ್ಯ ಪದ್ಧತಿಗಳನ್ನು ಬಿಂಬಿಸುವ ಸಂಕೇತವಾಗಿದೆ. ಮನುಸ್ಮೃತಿಯ ಪಠ್ಯದಿಂದ ಅನೇಕರ ಜೀವನವು ಹಾಳಾಗುತ್ತಿದೆ. ಇದು ಎಲ್ಲರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಪ್ರತಿಮೆ ಇಲ್ಲಿ ಇರಬಾರದು ಎಂದು ಮ್ಯಾಕ್ವಾನ್‌ ತಿಳಿಸಿದ್ದಾರೆ.
ಇದನ್ನೂ ಓದಿ:ಹೆಣ್ಣಾಗಿ ಮದುವೆಯಾದಳು… ಕ್ಯಾನ್ಸರ್​ಗೆ ತುತ್ತಾಗಿ ಗಂಡಾದಳು…!
ಭಾರತೀಯ ಸಂವಿಧಾನಕ್ಕೆ ಮನುವಿನ ಕಾನೂನು ಸಂಪೂರ್ಣ ವಿರುದ್ಧದಿಂದ ಕೂಡಿದೆ. ಸಮಾನತೆ ಮತ್ತು ಭ್ರಾತೃತ್ವ, ಸಾಮಾಜಿಕ ನ್ಯಾಯ ಮತ್ತು ಸ್ವಾತಂತ್ರ್ಯವನ್ನು ಭಾರತೀಯ ಸಂವಿಧಾನ ಎತ್ತಿಹಿಡಿಯುತ್ತದೆ. ಆದರೆ ಮನುವಿನ ಕಾನೂನು ಇದಕಕೆ ವ್ಯತಿರಿಕ್ತವಾಗಿದೆ. ಸಮಾನತೆ ಮತ್ತು ಸಾಮಾಜಿಕ ಪ್ರತ್ಯೇಕತೆಗಳನ್ನು ಇದು ಬಿಂಬಿಸುತ್ತದೆ. ಸಂವಿಧಾನ ನಮಗೆ ನೀಡಿರುವ ಅಮೂಲ್ಯವಾದ ಮೌಲ್ಯಗಳಿಂದ ಇದು ವಂಚನೆ ಮಾಡುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಪ್ರತಿಮೆಯನ್ನು ಮೊದಲ ಬಾರಿಗೆ ವಕೀಲರ ಸಂಘವು 1989 ರಲ್ಲಿ ಸ್ಥಾಪಿಸಿತು ಮತ್ತು ರಾಜಸ್ಥಾನದಲ್ಲಿ ಅಂದಿನ ಸರ್ಕಾರ ಇದಕ್ಕೆ ಅನುಮೋದನೆ ನೀಡಿತ್ತು. ಕಳೆದ 31 ವರ್ಷಗಳಲ್ಲಿ, ಪ್ರತಿಮೆಯನ್ನು ತೆಗೆದುಹಾಕುವ ಕುರಿತಂತೆ ಹಲವಾರು ಪ್ರತಿಭಟನೆಗಳು ನಡೆದಿವೆ, ಕಾನೂನು ಸಮರವೂ ಆಗಿಹೋಗಿವೆ.
2018ರಲ್ಲಿ, ಔರಂಗಾಬಾದ್‌ನ ಇಬ್ಬರು ದಲಿತ ಮಹಿಳೆಯರು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರು ಮನು ಪ್ರತಿಮೆಗೆ ಕಪ್ಪು ಬಣ್ಣ ಬಳಿದಿದ್ದು, ಅವರಿಬ್ಬರ ವಿರುದ್ಧವೂ ಪ್ರಕರಣ ನಡೆಯುತ್ತಿದೆ. ಅಂತೆಯೇ ದಲಿತ ಮಹಿಳೆಯರ ಮೇಲಿನ ಮೊಕದ್ದಮೆಯನ್ನು ಹಿಂಪಡೆಯುವಂತೆ ಅವರು ಆಗ್ರಹಿಸಿದ್ದಾರೆ.
ಆ್ಯಪ್‌ ಮೂಲಕ ಟಿ.ವಿ ಚಾನೆಲ್‌ ಆಯ್ಕೆ: ಟೆಲಿಕಾಂ ಪ್ರಾಧಿಕಾರದಿಂದ ಗುಡ್‌ ನ್ಯೂಸ್‌

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × two =
Remember me
