ಹೈದರಾಬಾದ್​:ತಮ್ಮ ಮನೆಯಲ್ಲಿ ಸಾಕಲಾಗಿದ್ದ ಮೇಕೆಗಳನ್ನು ಕದ್ದಿದ್ದಾರೆ ಎಂದು ಶಂಕೆಯ ಮೇರೆಗೆ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಯುವಕರನ್ನು ಅಮಾನುಷವಾಗಿ ಥಳಿಸಿರುವ ಘಟನೆ ತೆಲಂಗಾಣದ ಮಂಚಿರಿಯಾಲ್​ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು ಕೊಮುರಾಜುಲು ರಾಮುಲು, ಸ್ವರೂಪ ಮತ್ತು ಶ್ರೀನಿವಾಸ್​ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ಸಂತ್ರಸ್ತರಾದ ತೇಜ ಹಾಗೂ ಚಿಲುಮುಲ ಕಿರಣ್​ ಇಬ್ಬರು ಕುರಿಗಾಹಿ ಕೆಲಸ ಮಾಡುತ್ತಿದ್ದು, ರಾಮುಲು ಅವರು ಸಾಕಿದ್ದ ಮೇಕೆ ಕಾಣೆಯಾಗಿದೆ. ಶಂಕೆಯ ಮೇರೆಗೆ ತೇಜ ಹಾಗೂ ಕಿರಣ್​ನನ್ನು ತಮ್ಮ ಮನೆಗೆ ಕರೆಸಿ ಏಕಾಏಕಿ ಅವರನ್ನು ದನದ ಕೊಟ್ಟಿಗೆಯಲ್ಲಿ ಉಲ್ಟಾ ನೇತು ಹಾಕಿ ರಾಮುಲು ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
Two youth hung upside down over smoke pile, beaten in#Telanganaover suspicion of#GoatTheft, in#Mandamarri#Mancheria; They were subsequently let off & lodged police complaint; Accused were booked under prevention of atrocities against#SC/ST Act@ndtv@ndtvindia#DalitTorturepic.twitter.com/02b2rEburV
ಇದನ್ನೂ ಓದಿ:ಸಹೋದರಿಯರ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದ ದುರುಳರು; ಬಿಜೆಪಿ ನಾಯಕನ ಪುತ್ರ ಸೇರಿದಂತೆ 10 ಮಂದಿ ಅರೆಸ್ಟ್​
ಬಂಧಿತ ಆರೋಪಿಗಳು ಹಲ್ಲೆ ನಡೆಸುವ ವೇಳೆ ಸಂತ್ರಸ್ತರಿಬ್ಬರ ಮೇಲೆ ಖಾರದಪುಡಿ ಎರಚಿ ಮೆಣಸಿನಕಾಯಿಯ ಹೊಗೆಯನ್ನು ಹಾಕಿ ನಿಜವನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ಇದಲ್ಲದೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಿ ವಿಕೃತಿ ಮೆರೆದಿದ್ದಾರೆ.
ಘಟನೆ ಸಂಬಂಧ ಬಂಧಿತ ಆರೋಪಿಗಳ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಯತ್ನ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ಧಾರೆ.
ಹಲ್ಲೆ ಪ್ರಕರಣವು ತೆಲಂಗಾಣ ರಾಜಕೀಯದಲ್ಲಿ ಗದ್ದಲವನ್ನು ಎಬ್ಬಿಸಿದ್ದು, ಆಡಳಿತರೂಢ ಬಿಆರ್​ಎಸ್​ ಹಾಗೂ ವಿಪಕ್ಷಗಳಾದ ಬಿಜೆಪಿ, ಕಾಂಗ್ರೆಸ್​ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ. ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ಈ ಪ್ರಕರಣ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 12 =
Remember me
