ಚೆನ್ನೈ:ಈ ಮಹಿಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಆದರೆ ವಿಚಿತ್ರ ಎಂದರೆ ಯಾವುದೇ ಸಭೆ ನಡೆಯಲಿ ಅವರು ನೆಲದ ಮೇಲೆ ಒಂದು ಬದಿಗೆ ಕೂರಬೇಕು..ಉಳಿದ ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರೆಲ್ಲ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ. ಇದಕ್ಕೆ ಕಾರಣ ಆಕೆಯ ಜಾತಿ !
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ತುಂಬ ವೈರಲ್​ ಆಗುತ್ತಿದೆ. ಅದರಲ್ಲಿ ಮಹಿಳೆಯೋರ್ವಳು ನೆಲದ ಮೇಲೆ ಕುಳಿತಿದ್ದರೆ, ಮತ್ತೊಂದಷ್ಟು ಜನ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಬಹುದು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಲಿತ ಮಹಿಳೆ ಎಂಬ ಕಾರಣಕ್ಕೆ ಹೀಗೆ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.
ತಮಿಳುನಾಡಿನ ಕಡಲೋರ್​​ನ ಥರ್ಕು ತಿಟ್ಟೈ ಗ್ರಾಮ ಪಂಚಾಯಿತಿಯಲ್ಲಿ ಘಟನೆ ನಡೆದಿದೆ. ಈ ಗ್ರಾಪಂ ಅಧ್ಯಕ್ಷೆ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದವರು. ಇದೊಂದು ಪರಿಶಿಷ್ಟ ಜಾತಿ. ಮೀಸಲಾತಿ ಆಧಾರದ ಮೇಲೆ ಕಳೆದ ವರ್ಷವಷ್ಟೇ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.ಇದನ್ನೂ ಓದಿ:ಅಕ್ಟೋಬರ್​ 16ಕ್ಕೆ ಚಿರು ಅಭಿನಯದ ‘ಶಿವಾರ್ಜುನ’ ಮರುಬಿಡುಗಡೆ
ತನಗೆ ಆಗುತ್ತಿರುವ ಕಿರುಕುಳದ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ನಾನು ಎಸ್​ಸಿ ಎಂಬ ಕಾರಣಕ್ಕೆ ಗ್ರಾಪಂ ಉಪಾಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಲು ನನಗೆ ಬಿಡುವುದಿಲ್ಲ. ಧ್ವಜಾರೋಹಣ ಮಾಡಲೂ ಬಿಡುವುದಿಲ್ಲ. ಇದಕ್ಕೆಲ್ಲ ತನ್ನ ತಂದೆಯನ್ನು ಕರೆಸುತ್ತಾರೆ. ಅಧ್ಯಕ್ಷೆಯಾಗಿ ನೇಮಕಗೊಂಡಾಗಿನಿಂದಲೂ ಮೇಲ್ವರ್ಗದವರೊಂದಿಗೆ ಹೊಂದಿಕೊಂಡೇ ಬರುತ್ತಿದ್ದೇನೆ. ಆದರೆ ಇತ್ತೀಚೆಗೆ ಅತಿರೇಕಕ್ಕೆ ಹೋಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಇದನ್ನೂ ಓದಿ:12ರಂದು ಹೈಕೋರ್ಟ್​ಗೆ ಹಾಜರಾಗಬೇಕಿದೆ ಹಾಥರಸ್ ಸಂತ್ರಸ್ತೆಯ ಕುಟುಂಬ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಚಂದ್ರಶೇಖರ್​ ಚಂದ್ರ ಶೇಖರ್ ಸಖಾಮುರಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ ನೋಡಿ ನಾವೂ ಕೂಡ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆದಷ್ಟು ಶೀಘ್ರವೇ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದಿದ್ದಾರೆ. ಅದಾಗಲೇ, ಗ್ರಾಪಂ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗಿದ್ದು, ಉಪಾಧ್ಯಕ್ಷನಿಗೆ ಶೋಕಾಸ್ ನೋಟಿಸ್​ ನೀಡಲಾಗಿದೆ. (ಏಜೆನ್ಸೀಸ್​)
ಮಟಮಟ ಮಧ್ಯಾಹ್ನ ಒಂದೇ ಕುಟುಂಬದ ಮೂರು ಮಕ್ಕಳ ಪ್ರಾಣ ಹೊತ್ತೊಯ್ದ ಜವರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 4 =
Remember me
