ಕರ್ನೂಲ್​:ಅಂತರ್ಜಾತಿ ಮದುವೆಯಾದ 30 ವರ್ಷದ ದಲಿತ ಫಿಸಿಯೋಥೆರಪಿಸ್ಟ್ ಪತ್ನಿಯ ಕುಟುಂಬವರಿಂದಲೇ ಬರ್ಬರವಾಗಿ ಕೊಲೆಯಾಗಿರುವ ದುರ್ಘಟನೆ​ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ ಅದೊನಿ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಮೃತನನ್ನು ಆ್ಯಡಮ್​ ಸ್ಮಿತ್​ ಎಂದು ಗುರುತಿಸಲಾಗಿದೆ. ಹೈದರಾಬಾದಿನಲ್ಲಿ ಆರ್ಯ ಸಮಾಜದಲ್ಲಿ ಮಹೇಶ್ವರಿ ಎಂಬ ಯುವತಿಯನ್ನು ಸ್ಮಿತ್​ 6 ತಿಂಗಳ ಹಿಂದೆ ಮದುವೆಯಾಗಿದ್ದರು. ಇಬ್ಬರು ಸಹ ಬೇರೆ ಬೇರೆ ಸಮುದಾಯದವರಾಗಿದ್ದರು. ಯುವಕ ದಲಿತನಾಗಿದ್ದರಿಂದ ಯುವತಿ ಮನೆಯವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ.
ಇದನ್ನೂ ಓದಿ:ಹುಡುಗನಾಗಿದ್ದರೂ, ಹುಡುಗರನ್ನು ಕಂಡರೆ ಏನೇನೋ ಆಸೆ ಹುಟ್ಟುತ್ತಿದೆ: ಪ್ಲೀಸ್​ ಪರಿಹಾರ ಹೇಳಿ…
ವಿರೋಧದ ನಡುವೆಯೂ ಮದುವೆಯಾಗಿದ್ದ ಹೊಸ ಜೋಡಿ ಕೆಲವು ತಿಂಗಳಿಂದ ಅದೊನಿ ಪಟ್ಟಣದ ಕೃಷ್ತಪ್ಪ ನಗರದಲ್ಲಿ ವಾಸವಿದ್ದರು. ತಮ್ಮ ಮಾತನ್ನು ಧಿಕ್ಕರಿಸಿ ಯುವಕನನ್ನು ಮಹೇಶ್ವರಿ ಮದುವೆಯಾಗಿದ್ದರಿಂದ ಆಕೆಯ ಕುಟುಂಬದ ಯಾರೋಬ್ಬರು ಮಾತನಾಡಿಸುತ್ತಿರಲಿಲ್ಲ.
ನವಜೋಡಿಯ ವೈವಾಹಿಕ ಜೀವನದ ಬಂಡಿ ಯಶಸ್ಸಿನ ಪಥದಲ್ಲಿ ಸಾಗುತ್ತಿರುವಾಗಲೇ ದುರಂತ ದಿನವೊಂದು ಮಹೇಶ್ವರಿಗೆ ಕಾದಿತ್ತು. ಸ್ಮಿತ್​ ಕೆಲಸ ಮುಗಿಸಿ ಮನೆಗೆ ಮರಳುವಾಗ ಬೈಕ್​ ಅಡ್ಡಹಾಕಿದ ಕೆಲವು ದುಷ್ಕರ್ಮಿಗಳು ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದ್ದಾರೆ. ಬಂಡೆಯಿಂದ ಸ್ಮಿತ್​ ತಲೆಯನ್ನು ಜಜ್ಜಿ ಅಲ್ಲಿಂದ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ:ನನ್ನ ಶವ ಮಾರಿಕೊಂಡು ವಿದ್ಯುತ್​ ಬಿಲ್​ ಕಟ್ಟಿಕೊಳ್ಳಿ! ಪ್ರಧಾನಿಗೆ ಡೆತ್​ ನೋಟ್​ ಬರೆದು ಆತ್ಮಹತ್ಯೆ ಮಾಡಿಕೊಂಡ ಯುವಕ
ಕೊಲೆಗೆ ತಮ್ಮ ಮನೆಯವರೇ ಕಾರಣ ಎಂದು ಸ್ಮಿತ್​ ಪತ್ನಿ ಮಹೇಶ್ವರಿ ದೂರಿದ್ದಾಳೆ. ಅಲ್ಲದೆ, ತಮ್ಮ ಮದುವೆಗೆ ಮನೆಯವರು ಒಪ್ಪಿರಲಿಲ್ಲ ಎಂದು ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೊಲೆ ಸಂಬಂಧಿಸಿದ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ತಾನಾಡಿದ ಒಂದೇ ಮಾತಿಗೆ ಸಂಬಂಧಿಯಿಂದಲೇ ಬರ್ಬರ ಹತ್ಯೆಯಾದ ಸುಂದರಿ: ಬೆಚ್ಚಿಬೀಳಿಸುತ್ತೇ ಕೊಲೆಗಾರನ ಕ್ರೌರ್ಯ!

ಸ್ನೇಹಿತನ ಕೊಂದು ಶವದ ಜತೆ ಊರೆಲ್ಲಾ ಸುತ್ತಾಡಿದ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಲ್ಲಿ ನಕಲಿ ಖಾತೆ: ಮಹಿಳೆಯರೇ ಟಾರ್ಗೆಟ್, ಅಶ್ಲೀಲ ಚಾಟಿಂಗ್ ವೈರಲ್​!​

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:20 − four =
Remember me
