ಬಿಹಾರ: ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ 9,000 ರೂ. ಸಾಲಕ್ಕೆ 1,500 ರೂ. ಬಡ್ಡಿಯನ್ನು ಪಾವತಿಸಲು ವಿಫಲವಾದ ಕಾರಣ ದಲಿತ ಮಹಿಳೆಯೊಬ್ಬಳ ಮೇಲೆ ಹಲ್ಲೆ ಮತ್ತೂ ವಿವಸ್ತ್ರಗೊಳಿಸಿ ಮೂತ್ರ ಕುಡಿಸಿದ ಘಟನೆಯೊಂದು ಭಾನುವಾರದಂದು ನಡೆದಿದೆ.
ಘಟನೆಯಲ್ಲಿ ಮಹಿಳೆಯ ತಲೆಗೆ ಗಾಯವಾಗಿದ್ದು, ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 2 ವರ್ಷದ ಹಿಂದೆ ದಲಿತ ಮಹಿಳೆಯ ಗಂಡ 9,000ರೂ ಸಾಲವನ್ನ ಪಡೆದುಕೊಂಡಿದ್ದರು.
ಆ ಹಣವನ್ನು ಕೆಲ ದಿನಗಳಲ್ಲೇ ವಾಪಸ್ ನೀಡಲಾಗಿತ್ತು. ಆದರೆ ಆ ಹಣಕ್ಕೆ ವಿಪರೀತ ಬಡ್ಡಿ ಹಾಕಿ ಪಾವತಿಸುವಂತೆ ಆಕೆಗೆ ಕಿರುಕುಳ ನೀಡಲಾಗಿತ್ತು. ಆದರೆ ಮನೆಯ ಬಡತನ, ತಾಪತ್ರಯದ ಕಾರಣ ಆಕೆಗೆ ಹಣ ಪಾವತಿಸಲು ಆಗಿರಲಿಲ್ಲ. ಆಗ ದುಡ್ಡು ಕೊಟ್ಟ ಆರೋಪಿಗಳು ಬಡ್ಡಿ ಮೇಲೆ ಬಡ್ಡಿ ಏರಿಸಿ ಹಣ ದುಪ್ಪಟ್ಟು ಪಾವತಿಸುವಂತೆ ಕಿರುಕುಳ ನೀಡಿದ್ದಾರೆ. ಆಕೆ ಪಾವತಿಸದಿದ್ದಾಗ ಆಕೆಯ ಮನೆಗೆ ಬಂದು ಹಲ್ಲೆಗೈದು ವಿವಸ್ತ್ರಗೊಳಿಸಿ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾರೆ.ಬಿಹಾರದ ರಾಜಧಾನಿ ಪಾಟ್ನಾದ ಖುಸ್ರುಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೊಸಿಂಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶನಿವಾರ ತಡರಾತ್ರಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ರೌಡಿಗಳು ಆಕೆಗೆ ಮೂತ್ರ ಕುಡಿಸಿದ್ದರು ಎಂದು ತಿಳಿದು ಬಂದಿದೆ. ಸದ್ಯ ಗಾಯಾಳು ಮಹಿಳೆ ಖುಸ್ರುಪುರ ಪಿಎಚ್‌ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಪ್ರಮೋದ್ ಕುಮಾರ್ ಸಿಂಗ್, ಆತನ ಪುತ್ರ ಪಿಯೂಷ್ ಕುಮಾರ್ ಸಮಯ್ ಮತ್ತು ಇತರ ಮೂರ್ನಾಲ್ಕು ಜನರ ವಿರುದ್ಧ ಸಂತ್ರಸ್ತ ಮಹಿಳೆ ಖುಸ್ರುಪುರ್ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆಯನ್ನು ಘಟನೆಯ ಬಗ್ಗೆ ವಿಚಾರಿಸಿದಾಗ, ಎರಡು ವರ್ಷಗಳ ಹಿಂದೆ ತನ್ನ ಪತಿ ಗ್ರಾಮದ ಪ್ರಮೋದ್ ಕುಮಾರ್ ಸಿಂಗ್ ಅವರಿಂದ 9000 ರೂ ಸಾಲ ಪಡೆದಿದ್ದರು, ಅದನ್ನು ಕಳೆದ ವರ್ಷವೇ ಮರುಪಾವತಿಸಿದ್ದರು. ಆದರೆ ಪ್ರಮೋದ್ ಸಿಂಗ್ ಬಡ್ಡಿ ಹಣ ನೀಡುವಂತೆ ನಿರಂತರವಾಗಿ ಬೇಡಿಕೆ ಇಡುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಪ್ರಮೋದ್ ಕುಮಾರ್ ಸಿಂಗ್ ಮತ್ತು ಆತನ ಬೆಂಬಲಿಗರು ತನ್ನ ಮನೆಗೆ ಬಂದು ಬಲವಂತವಾಗಿ ಎತ್ತಿಕೊಂಡು ಹೋಗಿ ತಮ್ಮ ಮನೆಗೆ ಕರೆದೊಯ್ದು ತೀವ್ರವಾಗಿ ಥಳಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆಶಾದೇವಿ ಆರೋಪಿಸಿದ್ದಾರೆ.
ಪುಂಡರು ಮಹಿಳೆಯನ್ನು ವಿವಸ್ತ್ರಗೊಳಿಸಿ ಮೂತ್ರ ಕುಡಿಸಿದ್ದಾರೆ ಎಂದು ಸಂತ್ರಸ್ತೆಯ ಸೋದರ ಮಾವ ಮತ್ತು ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಗ್ರಾಮದ ಪ್ರಮೋದ್ ಕುಮಾರ್ ಸಿಂಗ್ ಮತ್ತು ಅವರ ಮಗ ಪಿಯೂಷ್ ಕುಮಾರ್ ಆಶಾದೇವಿಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಪೂರ್ಣ ವಿಷಯದ ಬಗ್ಗೆ ಫತುಹಾ ಡಿಎಸ್ಪಿ ಸಿಯಾರಾಮ್ ಯಾದವ್ ಅವರನ್ನು ಕೇಳಿದಾಗ, ಹಲ್ಲೆಯ ಘಟನೆಯನ್ನು ಒಪ್ಪಿಕೊಳ್ಳುತ್ತಾ, ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೂತ್ರ ಕುಡಿಸಿದ ಆರೋಪವನ್ನು ನಿರಾಕರಿಸಿದ್ದಾರೆ.
ಸಂತ್ರಸ್ತ ಮಹಿಳೆ ತನ್ನ ಪರಿಚಯಸ್ಥರೊಬ್ಬರಿಗೆ 5-6 ವರ್ಷಗಳ ಹಿಂದೆ ಪ್ರಮೋದ್ ಕುಮಾರ್ ಸಿಂಗ್ ಎಂಬುವವರಿಂದ 6000 ರೂಪಾಯಿಗಳನ್ನು ಸಾಲವಾಗಿ ನೀಡಿದ್ದು, ಅದನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
