ರಾಂಚಿ (ಜಾರ್ಖಂಡ):ಆಡುಗಳನ್ನು ಕೊಂದಿರುವುದಾಗಿ ಆರೋಪಿಸಿ ದಲಿತ ಸಮುದಾಯದ ಇಬ್ಬರು ಯುವಕರನ್ನು ಮರಕ್ಕೆ ಕಟ್ಟಿಹಾಕಿ ಅವರಿಂದ ಎಂಜಲು ನೆಕ್ಕಿಸಿರುವ ಘಟನೆ ರಾಂಚಿಯ ಗಿರಿದ್‌ ಜಿಲ್ಲೆಯ ಗಗರ್‌ದಿಹಾ ಗ್ರಾಮದಲ್ಲಿ ನಡೆದಿದೆ.
ಯುವಕರನ್ನು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿರುವ ಗ್ರಾಮಸ್ಥರು ನಂತರ ತಾವು ಎಂಜಲು ಉಗಿದು ಅದನ್ನು ನೆಕ್ಕಿಸಿರುವ ಅಮಾನವೀಯ ಘಟನೆ ಇದಾಗಿದೆ. ತಮ್ಮ ತಪ್ಪು ಇಲ್ಲದಿದ್ದರೂ ಈ ರೀತಿ ತಮ್ಮನ್ನು ಥಳಿಸಿರುವುದು ಮಾತ್ರವಲ್ಲದೇ ಆಡಿನ ಮಾಲೀಕನಿಗೆ 60 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಪಂಚಾಯಿತಿ ಆದೇಶಿಸಿರುವುದಾಗಿ ಯುವಕರು ಹೇಳಿದ್ದಾರೆ.
ತಮ್ಮ ಮೇಲೆ ಯಾದವ ಸಮುದಾಯದವರು ಹಲ್ಲೆ ನಡೆಸಿದ್ದಾರೆ. ಆದರೆ ಆಡನ್ನು ಕೊಂದಿದ್ದು ನಾವಲ್ಲ. ವಿನಾಕಾರಣ ನಮಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಯುವಕರು ಹೇಳಿದ್ದಾರೆ.
ಇದನ್ನೂ ಓದಿ:ದೇವರ ಪೂಜೆಗಾಗಿ ಹೊಲಕ್ಕೆ ತೆರಳಿದ್ದ ಅಪ್ರಾಪ್ತೆಗೆ ಮೃತ್ಯುವಾದ ಯುವಕ: ಪಾಲಕರ ಗಂಭೀರ ಆರೋಪ
ಘಟನೆ ಕುರಿತು ವಿವರಿಸಿರುವ ಯುವಕರು, ಸೋಮವಾರ ನಮ್ಮ ಹೊಲಕ್ಕೆ ಕೆಲವು ಆಡುಗಳು ಬಂದಿದ್ದವು. ನಾವು ದೊಣ್ಣೆಯಿಂದ ಹೊಡೆದು ಅದನ್ನು ಹೊರಕ್ಕೆ ಅಟ್ಟಿದ್ದೆವು ಅಷ್ಟೇ. ಆದರೆ ಅದೇ ವೇಳೆ ನಾವು ಆಡುಗಳನ್ನು ಅಟ್ಟಿಸುತ್ತಿರುವುದನ್ನು ಕಂಡ ಅದರ ಮಾಲೀಕ ನಮ್ಮನ್ನೂ ಜತೆಗೆ ಕರೆದೊಯ್ದು ಆಡುಗಳ ಕತ್ತು ಸೀಳಿ ನಮ್ಮ ಆವರಣಕ್ಕೆ ಎಸೆದಿದ್ದಾನೆ. ತಾನೇ ಆಡನ್ನು ಸಾಯಿಸಿದ್ದರೂ ನಾವು ಕೊಂದಿದ್ದಾಗಿ ಆರೋಪ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.
ಮಾರನೆಯ ದಿನ ಅಂದರೆ ಮಂಗಳವಾರ ನನ್ನನ್ನು ಹಾಗೂ ಶಂಕರ್ ಕುಮಾರ್ ದಾಸ್ ಎಂಬಾತನನ್ನು ನಮ್ಮ ಮನೆಗಳಿಂದ ಎಳೆದೊಯ್ದು ಮರಕ್ಕೆ ಕಟ್ಟಿಹಾಕಿ ಮುಖ್ಯರ ಸಮ್ಮುಖದಲ್ಲಿ ಹಲ್ಲೆ ಮಾಡಲಾಗಿದೆ. ನೂರಾರು ಮಂದಿಯ ಸಮ್ಮುಖದಲ್ಲಿ ಎಂಜಲು ನೆಕ್ಕುವಂತೆ ಬಲವಂತಪಡಿಸಸಲಾಗಿದೆ ಎಂದು ಸಂತ್ರಸ್ತ ಪ್ರೇಮಾನಂದ್ ಕುಮಾರ್ ದಾಸ್ ಹೇಳಿದ್ದಾರೆ. ಆಡು ಕೊಂದ ಆರೋಪಕ್ಕಾಗಿ 60 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಅದನ್ನು ಪಾವತಿಸಿದ ಬಳಿಕವಷ್ಟೇ ಬಿಡುಗಡೆ ಮಾಡಿದ್ದಾರೆ ಎಂದು ದೂರಲಾಗಿದೆ.
ಆಡುಗಳ ಕತ್ತು ಸೀಳಿದಂತೆ ನಿಮ್ಮ ಕುತ್ತಿಗೆಯನ್ನೂ ಸೀಳುತ್ತೇವೆ ಎಂದು ಯಾದವ ಸಮುದಾಯದವರು ಬೆದರಿಕೆ ಹಾಕಿದ್ದಾರೆ ಎಂದು ಕೂಡ ಪ್ರೇಮಾನಂದ ಆರೋಪಿಸಿದ್ದಾರೆ.
ಲೈಂಗಿಕ ಕಿರುಕುಳದ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಂಡು ಬಾ: ಹೈಕೋರ್ಟ್‌ನಿಂದ ಕುತೂಹಲದ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − five =
Remember me
