ಚೆನ್ನೈ:ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರ ತಿಮಯಾತ್ರೆಗೆ ಮೇಲ್ಜಾತಿಯ ಮುಖಂಡರು ದಾರಿ ಬಿಡದೆ ಅಡ್ಡಿಪಡಿಸಿದ ಘಟನೆ ತಮಿಳುನಾಡಿದ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ಶೂಲಗಿರಿಯ ಕೀಳತೇರು ನಿವಾಸಿ ಅರುಣ್​ತತಿಯಾರ್(SC) ಸಮುದಾಯಕ್ಕೆ ಸೇರಿದ್ದ ಲಕ್ಷಮ್ಮ(65) ಎಂಬುವವರು ಮೃತಪಟ್ಟಿದ್ದರು. ಕುಟುಂಬಸ್ಥರು ಅವರ ಅಂತ್ಯಸಂಸ್ಕಾರವನ್ನು ಪೂರ್ವಜರ ಊರಾದ ಕೃಷ್ಣಂಪಾಳ್ಯದಲ್ಲಿ ನಡೆಸಲು ನಿರ್ಧರಿಸುತ್ತಾರೆ.
ಲಕ್ಷಮ್ಮನವರ ಅಂತಿಯಾತ್ರೆಯೂ ಕೃಷ್ಣಂಪಾಳ್ಯದಲ್ಲಿ ಬರುತ್ತಿದ್ದ ವೇಳೆ ವಾರ್ಗ ಮಧ್ಯೆ ವನ್ನಿಯಾರ್​ ಸಮುದಾಯದ ಮುಖಂಡರು ಮೆರವಣಿಗೆಯನ್ನು ತಡೆದಿದ್ದಾರೆ. ಈ ಕುರಿತು ಲಕ್ಷಮ್ಮ ಕುಟುಂಬಸ್ಥರು ಪ್ರಶ್ನಿಸಿದಾಗ ಸ್ಮಶಾನಕ್ಕೆ ಹೋಗುವ ಮಾರ್ಗ ಮಧ್ಯೆ ಕೃಷಿ ಭೂಮಿ ಇದ್ದು, ಹಾಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಕುಪಿತಗೊಂಡ ಲಕ್ಷಮ್ಮ ಕುಟುಂಬಸ್ಥರು ಹೊಸೂರು ಕೃಷ್ಣಗಿರಿ ಹೆದ್ದಾರಿಯ ಬೇರಿಗೈ-ಶೂಲಗಿರಿ ರಸ್ತೆ ನಡುವೆ ಮೃತದೇಹವನ್ನಿಟ್ಟು ಪ್ರತಿಭಟಿಸಲು ಶುರು ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್​ ಪನ್ನೀರ್​ಸೆಲ್ವಿ ಉಭಯ ಸಮುದಾಯದ ಮುಖಂಡರ ಜೊತೆ ಶಾಂತಿ ಸಭೆ ನಡೆಸಿದ್ದರು.
ಇದನ್ನೂ ಓದಿ:VIDEO| ಹಾಡಹಗಲೇ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ತಹಶೀಲ್ದಾರ್​ ಮಾತುಕತೆ ನಡೆಸಿದರ ಹೊರತ್ತಾಗಿಯೂ ದಾರಿ ಮಾಡಿ ಕೊಡಲು ವನ್ನಿಯಾರ್​ ಸಮುದಾಯದ ಮುಖಂಡರು ನಿರಾಕರಿಸುತ್ತಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನವೇ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸರೋಜ್​ ಕುಮಾರ್​ ಠಾಕೂರ್​ ಉಭಯ ಸಮುದಾಯದವರ ಜೊತೆ ಮಾತುಕತೆ ನಡೆಸಿದ ನಂತರ ಪೊಲೀಸರ ಸಮ್ಮುಖದಲ್ಲಿ ಲಕ್ಷಮ್ಮನವರ ಅಂತ್ಯೆಕ್ರಿಯೆ ನಡೆಯಿತ್ತು.
ಈ ಕುರಿತು ಮಾತನಾಡಿದ ಲಕ್ಷಣನ್​ ಎಂಬುವವರು ಪೊಲೀಸರು ಸಮ್ಮುಖದಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ಬಾರಿಯೂ ಈಗೆ ಆಗಿದ್ದು, ಇದು ಪುನರಾವರ್ತನೆಯಾಗುತ್ತಿದೆ. ಅಂತ್ಯಸಂಸ್ಕಾರ ನಡೆಸುವುದಕ್ಕು ಇಷ್ಟು ಅಡಚಣೆ ಮಾಡುತ್ತಿರುವುದು ಸರಿಯಾದ ನಡೆಯಲ್ಲ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
