ನವದೆಹಲಿ:ಬ್ರಹ್ಮಪುತ್ರ ನದಿಗೆ ಟಿಬೆಟ್ ಭಾಗದಲ್ಲಿ ಬೃಹತ್ ಅಣೆಕಟ್ಟು ಕಟ್ಟಲು ಚೀನಾ ಮುಂದಾಗಿರುವ ಬೆನ್ನಿಗೆ ಭಾರತ ಕೂಡ ಅರುಣಾಚಲ ಪ್ರದೇಶದಲ್ಲಿ 10 ಗಿಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಸ್ಥಾವರ ನಿರ್ವಿುಸಲು ಚಿಂತನೆ ನಡೆಸಿದೆ.
ಬ್ರಹ್ಮಪುತ್ರ ನದಿ ಕಣಿವೆಯಲ್ಲಿ ಚೀನಾದ ಯೋಜನೆಗಳಿಂದ ಹಠಾತ್ ಪ್ರವಾಹ ಉಂಟಾಗಬಹುದು ಅಥವಾ ನೀರಿನ ಅಭಾವ ಉಂಟಾಗಬಹುದು ಎನ್ನುವುದು ಭಾರತೀಯ ಅಧಿಕಾರಿಗಳ ಕಳವಳವಾಗಿದೆ. ಇದರ ದುಷ್ಪರಿಣಾಮ ತಡೆಯಬೇಕಾದರೆ ಅರುಣಾಚಲ ಪ್ರದೇಶದಲ್ಲಿ ದೊಡ್ಡ ಅಣೆಕಟ್ಟು ನಿರ್ವಿುಸುವುದು ತುರ್ತು ಅಗತ್ಯವಾಗಿದೆ. ಈ ಸಂಬಂಧದ ಪ್ರಸ್ತಾಪನೆ ಸರ್ಕಾರದ ಉನ್ನತ ಮಟ್ಟದ ಪರಿಶೀಲನೆಯಲ್ಲಿದೆ ಎಂದು ಜಲ ಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿ ಟಿ.ಎಸ್. ಮೆಹ್ರಾ ಹೇಳಿದ್ದಾರೆ.
ಗಡಿ ಸಂಘರ್ಷದ ಕಾರಣ ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಬಾಂಧವ್ಯ ಹಳಸಿದೆ. ಈ ನಡುವೆ ನದಿಯ ಮೇಲ್ಭಾಗದಲ್ಲಿ ಅದರಕಲ್ಲೂ ಅರುಣಾಚಲ ಪ್ರದೇಶದ ಗಡಿಯಿಂದ ಕೆಲವು ಕಿ.ಮೀ. ದೂರದಲ್ಲೇ ಡ್ಯಾಂ ನಿರ್ವಿುಸುವ ಚೀನಾದ ಯೋಜನೆ ಉಭಯ ದೇಶಗಳ ಸಂಬಂಧವನ್ನು ಇನ್ನಷ್ಟು ಕೆಡಿಸುವ ಸಾಧ್ಯತೆಯಿದೆ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ 60 ಗಿಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಘಟಕ ನಿರ್ವಿುಸಲು ಚೀನಾ ಸರ್ಕಾರ ಚಿಂತಿಸುತ್ತಿದೆ ಎಂದು ಚೀನಿ ಮಾಧ್ಯಮಗಳು ವರದಿ ಮಾಡಿವೆ. ಬ್ರಹ್ಮಪುತ್ರ ನದಿಯನ್ನು ಚೀನಾದಲ್ಲಿ ಯಾರ್ಲುಂಗ್ ಜಾಂಗ್ಬೋ ಎಂದು ಕರೆಯಲಾಗುತ್ತದೆ. ಬ್ರಹ್ಮಪುತ್ರ ನದಿ ಟಿಬೆಟ್​ನಿಂದ ಅರುಣಾಚಲ ಪ್ರದೇಶ, ಮತ್ತು ಅಸ್ಸಾಂನಿಂದ ಬಾಂಗ್ಲಾದೇಶದ ವರೆಗೆ ಹರಿಯುತ್ತದೆ.
ಪೂರ್ವ ಲಡಾಖ್​ನಲ್ಲಿ ಭೌಗೋಳಿಕ ಅತಿಕ್ರಮಣ ನಡೆಸಿದ ನಂತರ ಇದೀಗ ಚೀನಾ ಜಲ ಸಮರಕ್ಕೆ ಮುಂದಾಗುತ್ತಿದೆ. ಇದಕ್ಕೆ ಭಾರತ ಕೂಡ ಪ್ರತಿತಂತ್ರ ರೂಪಿಸಬೇಕು.| ಬ್ರಹ್ಮ ಚೆಲ್ಲನಿಭಾರತ-ಚೀನಾ ಬಾಂಧವ್ಯದ ತಜ್ಞ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
