ನವದೆಹಲಿ :ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ನಿನ್ನೆ ‘ಸಿಂಗಾಪೂರ್​ನಲ್ಲಿ​ ಮಕ್ಕಳ ಮೇಲೆ ಪರಿಣಾಮ ಉಂಟುಮಾಡುವ ಹೊಸ ಕರೊನಾ ವೈರಸ್​ ರೂಪಾಂತರಿ ಹುಟ್ಟಿದೆ. ಅದಕ್ಕಾಗಿ ಭಾರತ-ಸಿಂಗೂಪೂರ್​ಗಳ ನಡುವೆ ವಿಮಾನ ಸಂಚಾರ ರದ್ದು ಮಾಡಬೇಕು’ ಎಂದು ಹೇಳಿದ ಟ್ವೀಟ್​ನ ಬಗ್ಗೆ ಸಿಂಗಾಪೂರ್​ ಭಾರೀ ಅಸಮಾಧಾನ ವ್ಯಕ್ತಪಡಿಸಿದೆ. ಇಂದು ಸಿಂಗಾಪೂರ್​ನಲ್ಲಿರುವ ಭಾರತದ ಹೈಕಮಿಷನರ್​ಅನ್ನು ಕರೆಸಿ ಈ ಬಗ್ಗೆ ತೀವ್ರ ಆಕ್ಷೇಪ ಸೂಚಿಸಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಾಗ್ಚಿ, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತದ ಹೈಕಮಿಷನರ್​, ಕೇಜ್ರಿವಾಲ್​ ಅವರಿಗೆ ಕರೊನಾ ರೂಪಾಂತರಿಗಳ ಬಗ್ಗೆ ಅಥವಾ ನಾಗರಿಕ ವಿಮಾನ ಸಂಚಾರದ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿರುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ, ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಅವರು ಕೂಡ “ದೆಹಲಿ ಸಿಎಂ ಕೇಜ್ರಿವಾಲ್ ಅವರು ಭಾರತದ ಪರವಾಗಿ ಮಾತನಾಡುತ್ತಿಲ್ಲ” ಎಂದು ಟ್ವೀಟ್​ ಮಾಡಿ ಉಭಯ ರಾಷ್ಟ್ರಗಳ ನಡುವಣ ಸಂಬಂಧಗಳಿಗೆ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ.
However, irresponsible comments from those who should know better can damage long-standing partnerships.
So, let me clarify- Delhi CM does not speak for India.
— Dr. S. Jaishankar (@DrSJaishankar)May 19, 2021

ಸಚಿವ ಜೈಶಂಕರ್​ ಅವರು, “ಸಿಂಗಾಪೂರ್ ಮತ್ತು ಭಾರತ ಕರೊನಾ ವಿರುದ್ಧದ ಹೋರಾಟದಲ್ಲಿ ಜೋಡಿದಾರರು. ಭಾರತಕ್ಕೆ ಲಾಜಿಸ್ಟಿಕ್ಸ್​ ಹಬ್​ ಆಗಿ ಮತ್ತು ಆಕ್ಸಿಜನ್ ಪೂರೈಕೆದಾರನಾಗಿ ಸಿಂಗಾಪೂರ್ ವಹಿಸಿರುವ ಪಾತ್ರವನ್ನು ನಾವು ಪ್ರಶಂಸಿಸುತ್ತೇವೆ. ಮಿಲಿಟರಿ ಏರ್​ಕ್ರಾಫ್ಟ್​ಅನ್ನು ನಮ್ಮ ಸಹಾಯಕ್ಕಾಗಿ ಬಳಸುತ್ತಿರುವ ಸಿಂಗಾಪೂರ್​ನ ಹೆಜ್ಜೆಯು ನಮ್ಮ ವಿಶಿಷ್ಟವಾದ ಸಂಬಂಧದ ಬಗ್ಗೆ ಹೇಳುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕೈ ಕತ್ತರಿಸಿ ಟ್ಯಾಬ್ಲೆಟ್, ಹಣ ಕಸಿದುಹೋದ ದುಷ್ಕರ್ಮಿಗಳು
ಜೊತೆಗೆ, “ಆದಾಗ್ಯೂ ಈ ಬಗ್ಗೆ ಸರಿಯಾಗಿ ತಿಳಿದಿರಬೇಕಾದವರಿಂದ ಬರುವ ಬೇಜವಾಬ್ದಾರಿಯುತ ಹೇಳಿಕೆಗಳು ನಮ್ಮ ದೀರ್ಘಕಾಲೀನ ಸಂಬಂಧವನ್ನು ಹಾಳು ಮಾಡಬಲ್ಲದು. ಅದಕ್ಕಾಗಿ, ದೆಹಲಿ ಸಿಎಂ ಭಾರತದ ಪರವಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಲಿಚ್ಛಿಸುತ್ತೇನೆ” ಎಂದೂ ಬರೆದಿದ್ದಾರೆ.
Thanks@DrSJaishankarlet’s focus on resolving the situation in our respective countries and helping one another. Nobody is safe until everyone is safe.https://t.co/2ofAZbGw9k
— Vivian Balakrishnan (@VivianBala)May 19, 2021

ಇದಕ್ಕೆ ಸಿಂಗಾಪೂರ್ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಅವರು “ಥ್ಯಾಂಕ್ಸ್​” ಹೇಳಿದ್ದು, “ನಮ್ಮ ನಮ್ಮ ದೇಶಗಳಲ್ಲಿರುವ ಸನ್ನಿವೇಶಗಳನ್ನು ಪರಿಹರಿಸಿಕೊಂಡು ಒಬ್ಬರಿಗೊಬ್ಬರು ಸಹಾಯ ಮಾಡುವತ್ತ ಗಮನ ಹರಿಸೋಣ. ಪ್ರತಿಯೊಬ್ಬರೂ ಸುರಕ್ಷಿತವಾಗುವವರೆಗೆ ಯಾರೂ ಸುರಕ್ಷಿತರಲ್ಲ” ಎಂದು ಟ್ವೀಟ್​ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.(ಏಜೆನ್ಸೀಸ್)
VIDEO | ಸಂಗೀತ ನುಡಿಸುವ ಘೇಂಡಾಮೃಗ ನೋಡಿದ್ದೀರಾ ? ಇದೋ ಇಲ್ಲಿದೆ…

ಭಾರತ ಮೂಲದ ವಿಜ್ಞಾನಿಗೆ ಮಿಲೇನಿಯಮ್ ಟೆಕ್ನಾಲಜಿ ಬಹುಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − six =
Remember me
