ಗಾಜಿಯಾಬಾದ್​:ಉತ್ತರ ಪ್ರದೇಶದ ಗಾಜಿಯಾಬಾದ್​ ಪೊಲೀಸರು ಮಂಗಳವಾರ ಡ್ಯಾನ್ಸಿಂಗ್​ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಕಾರಿನ ಮಾಲಿಕನಿಗೆ 41,500 ರೂಪಾಯಿ ದಂಡವನ್ನು ವಿಧಿಸಿದ್ದಾರೆ.
ಕೆಲವು ಮಂದಿ ಜೋರಾಗಿ ಮ್ಯೂಸಿಕ್​ ಹಾಕಿಕೊಂಡು ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆಂದು ಸ್ಥಳೀಯರು ನೀಡಿದ ದೂರು ಸ್ವೀಕರಿಸಿದ ಬಳಿಕ ಪೊಲೀಸರು ತಕ್ಷಣ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಒಬ್ಬಳನ್ನೇ ಪ್ರೀತಿಸಿದ ಬೆಸ್ಟ್​ ಫ್ರೆಂಡ್ಸ್​: ಲವ್​ ಸಕ್ಸಸ್​ ಆಗಿದ್ಹೇಗೆ? ಮೂವರ ಇಂಟೆಸ್ಟಿಂಗ್​ ಕಹಾನಿ ಇದು!
ಕಾರಿನ ಮಾಲಿಕನನ್ನು ನಸುಮ್​ ಅಹ್ಮದ್​ ಎಂದು ಗುರುತಿಸಲಾಗಿದೆ. ರಸ್ತೆಯಲ್ಲೇ ತನ್ನ ಕಾರಿನಲ್ಲಿ ಜೋರಾಗಿ ಮ್ಯೂಸಿಕ್​ ಹಾಕಿಕೊಂಡು ಸಾಗುತ್ತಿದ್ದ. ವಿಶೇಷವಾಗಿ ತನ್ನ ಕಾರನ್ನು ಡ್ಯಾನ್ಸಿಂಗ್​ ಕಾರಿನ ರೀತಿ ಮಾರ್ಪಾಡು ಮಾಡಿಕೊಂಡು ಜೋರಾದ ಮ್ಯೂಸಿಕ್​ ಹಾಕಿಕೊಂಡು ಅಕ್ಕಪಕ್ಕದವರಿಗೆ ತೊಂದರೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಂದಹಾಗೆ ಎಸ್​ಯುವಿ ಕಾರಿನ ಮಾಲಿಕ ದೆಹಲಿಯ ನಿವಾಸಿ.
ಈ ಬಗ್ಗೆ ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು ವಾಹನವನ್ನು ಸೀಜ್​ ಮಾಡಲಾಗಿದ್ದು, ದಂಡವನ್ನು ವಿಧಿಸಲಾಗಿದೆ. ಯಾರಾದರೂ ವಾಹನವನ್ನು ಸ್ಟಿಕರ್​ಗಳ ಮೂಲಕ ಮಾರ್ಪಾಡು ಮಾಡಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿ:ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ

ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

ಪತ್ನಿ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಾಲ್​ಗರ್ಲ್​ ಎಂದು ಪ್ರಚಾರ ಮಾಡಿದ ಪತಿ..!

ಕಣ್ಣು ಬಿಟ್ಟುಕೊಂಡು ಸೀನಿದ್ರೆ ಏನಾಗಲಿದೆ ಎಂದು ನೋಡುವ ಕುತೂಹಲ: ಸೀನಿದವನಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − one =
Remember me
