ಲಂಡನ್:ಕರೊನಾ ವೈರಸ್​ನ ಒಮಿಕ್ರಾನ್​ಗಿಂತಲೂ ಹೆಚ್ಚು ಮಾರಕವಾದ ರೂಪಾಂತರಿ ಮುಂದಿನೆರಡು ವರ್ಷದಲ್ಲಿ ಕಾಡಲಿದೆ ಎಂದು ಬ್ರಿಟನ್​ನ ಸಾಂಕ್ರಾಮಿಕ ರೋಗತಜ್ಞರು ಎಚ್ಚರಿಸಿದ್ದಾರೆ. ಇಂಥದ್ದೊಂದು ಮಾರಕವಾದ ವೈರಸ್ ಪ್ರಭೇದ ದಾಂಗುಡಿಯಿಡುವ ‘ಸಂಭಾವ್ಯತೆ ಹೆಚ್ಚಾಗಿದೆ’ ಎಂದು ಇಂಗ್ಲೆಂಡ್​ನ ಮುಖ್ಯ ವೈದ್ಯಾಧಿಕಾರಿ ಕ್ರಿಸ್ ವಿಟ್ಟಿ ಹೇಳಿದ್ದಾರೆ. ಸಾಂಕ್ರಾಮಿಕತೆಗೆ ಸಂಬಂಧಿಸಿ ನಾವೂ ಇನ್ನೂ ದೂರ ಸಾಗಬೇಕಾಗಿದೆ. ಯಾಕೆಂದರೆ ‘ಇನ್ನಷ್ಟು ಅಚ್ಚರಿಯ’ ವೈರಾಣುಗಳು ಉದ್ಭವಿಸಬಹುದು ಎಂದು ವಿಟ್ಟಿ ಹೇಳಿದ್ದಾರೆ. ಫ್ಲೂ ರೀತಿಯಲ್ಲೇ ಸಾವಿನ ಅಪಾಯ ಒಟ್ಟಿರುವ ವೈರಸ್, ಜೀವನ ಪರ್ಯಂತ ನಮ್ಮ ಜೊತೆಯಲ್ಲೇ ಇರಲಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕದಲ್ಲಿ ಹೊಸ ತಳಿ ದಾಳಿ ಸಂಭವ:ಜಗತ್ತಿನ ಹಲವು ಭಾಗಗಳಲ್ಲಿ ಕರೊನಾ ಸೋಂಕಿನ ಪ್ರಮಾಣ ಏರುತ್ತಿರುವುದರ ನಡುವೆ, ಅಮೆರಿಕದಲ್ಲಿ ವೈರಸ್​ನ ಹೊಸ ತಳಿಯೊಂದು ದಾಳಿ ಮಾಡುವ ಸಂಭವವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸ ರೂಪಾಂತರಿ ಯಾವಾಗ ಪತ್ತೆಯಾಗಬಹುದೆಂದು ಇನ್ನೂ ತಿಳಿದಿಲ್ಲ ಎಂದವರು ಹೇಳಿದ್ದಾರೆ.
1,685 ಹೊಸ ಕೇಸ್:ಭಾರತದಲ್ಲಿ ಶುಕ್ರವಾರ ಕೋವಿಡ್ ಸೋಂಕಿನ 1,685 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 4,30,16,372ಕ್ಕೆ ಏರಿದೆ. 83 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 5,16,755ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿನ ಚೇತರಿಕೆ ದರ ಶೇಕಡ 98.75 ಆಗಿದೆ. ದೈನಿಕ ಪಾಸಿಟಿವಿಟಿ ದರ ಶೇ. 0.24 ಹಾಗೂ ಸಾಪ್ತಾಹಿಕ ದರ ಶೇ. 0.33 ಆಗಿದೆ. ದೇಶದಲ್ಲಿ ಕೋವಿಡ್-ತಡೆ ಲಸಿಕೆ ನೀಡಿಕೆ ಪ್ರಮಾಣ 182.55 ಕೋಟಿ ಡೋಸ್ ದಾಟಿದೆ.
ರಾಮ್​ಗೋಪಾಲ್ ವರ್ಮಾ ಜತೆ ಅಂಡರ್​ವರ್ಲ್ಡ್​​ನಲ್ಲಿ ಉಪೇಂದ್ರ; ಯಾರದು ‘R’?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fourteen =
Remember me
