ನವದೆಹಲಿ:ದೇಶಾದ್ಯಂತ ಕೃಷಿಕರು ಹೆಚ್ಚಾಗಿ ಬಳಸುವ ಡೈ ಅಮೋನಿಯಮ್​ ಾಸ್ಫೇಟ್​ (ಡಿಎಪಿ) ರಸಗೊಬ್ಬರದ ಸಬ್ಸಿಡಿಯನ್ನು ಪ್ರತಿಬ್ಯಾಗ್​ಗೆ 700 ರೂಪಾಯಿ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.ಜಾಗತಿಕ ಬೆಲೆ ಏರಿಕೆಯ ಹೊರತಾಗಿಯೂ ರೈತರಿಗೆ ಹಳೆಯ ದರದಲ್ಲೇ ಡಿಎಪಿ ರಸಗೊಬ್ಬರ ಪೂರೈಸುವ ಉದ್ದೇಶದೊಂದಿಗೆ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 14,775 ಕೋಟಿ ರೂಪಾಯಿ ಹೊರೆ ಬೀಳಲಿದೆ. ಡಿಎಪಿ ರಸಗೊಬ್ಬರದ ಸಬ್ಸಿಡಿಯನ್ನು ಶೇಕಡ 140 ಏರಿಸುವ ತೀರ್ಮಾನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ಕಳೆದ ತಿಂಗಳು ತೆಗೆದುಕೊಂಡಿತ್ತು.
ಕೃಷಿಕರು 50 ಕಿಲೋದ ಡಿಎಪಿ ರಸಗೊಬ್ಬರವನ್ನು ಈ ವರ್ಷವೂ ಹಳೆಯದರವಾದ 1,200 ರೂಪಾಯಿಯಲ್ಲೇ ಖರೀದಿಸಬಹುದು. ಇವರ ನೈಜ ದರ ಕಳೆದ ವರ್ಷ 1,700 ರೂಪಾಯಿ ಇತ್ತು. ಆಗ ಸರ್ಕಾರ 500 ರೂಪಾಯಿ ಸಬ್ಸಿಡಿ ನೀಡಲು ನಿರ್ಧರಿಸಿತ್ತು. ಈಗ ಡಿಎಪಿಯ ನಿಜ ಬೆಲೆ 2,400 ರೂಪಾಯಿ ಆಗಿದೆ. ಹೀಗಾಗಿ ಸರ್ಕಾರ ಮತ್ತೆ 700 ರೂಪಾಯಿ ಏರಿಸಿದ ಕಾರಣ ಸಬ್ಸಿಡಿ 1,200 ರೂಪಾಯಿ ಆಗಿದೆ. ಯೂರಿಯಾಕ್ಕೂ ಸರ್ಕಾರ ಗರಿಷ್ಠ ಮಾರಾಟ ಬೆಲೆ ನಿಗದಿ ಮಾಡಿದೆ. ಇದಕ್ಕೂ ಪ್ರತಿ ಬ್ಯಾಗ್​ಗೆ 900 ರೂಪಾಯಿ ಸಬ್ಸಿಡಿ ನೀಡುತ್ತಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್​ಸುಖ್​ ಮಾಂಡವೀಯ ತಿಳಿಸಿದ್ದಾರೆ.
ಆಳ ಸಾಗರ ಅನ್ವೇಷಣೆಗೆ ಸಮ್ಮತಿಸಂಪನ್ಮೂಲಗಳಿಗಾಗಿ ಆಳ ಸಾಗರ ಅನ್ವೇಷಿಸುವ “ಡೀಪ್​ ಓಷಿಯನ್​ ಮಿಷನ್​’ ಆರಂಭಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ. ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆಗಾಗಿ ಆಳ ಸಮುದ್ರ ತಂತ್ರಜ್ಞಾನ ಅಭಿವೃದ್ಧಿಪಡಿಸುವುದಕ್ಕೂ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ ಎಂದು ಸಚಿವ ಪ್ರಕಾಶ್​ ಜಾವಡೇಕರ್​ ತಿಳಿಸಿದ್ದಾರೆ. ಇದು ಬ್ಲೂ ಇಕಾನಮಿಗೆ ಪೂರಕವಾದುದು ಮತ್ತು ಭಾರತವನ್ನು ಹೊಸ ಯುಗದತ್ತ ಕೊಂಡೊಯ್ಯಲಿರುವ ಯೋಜನೆ. ಸಾಗರದಲ್ಲಿ 6,000 ಮೀಟರ್​ ಆಳದಲ್ಲಿ ಖನಿಜ ಅಧ್ಯಯನ ನಡೆಯಲಿದೆ. ಸಾಗರದಾಳದ ಜೀವ ವೈವಿಧ್ಯ ಮತ್ತು ಹವಾಮಾನ ವೈಪರೀತ್ಯದ ಕುರಿತೂ ಇಲ್ಲಿ ಗಮನಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಪಿಆ್ಯಂಡ್​ಕೆಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿಾಸ್ಫಟಿಕ್​ ಮತ್ತು ಪೊಟಾಸಿಕ್​ (ಪಿ ಆ್ಯಂಡ್​ ಕೆ) ರಸಗೊಬ್ಬರಗಳಿಗೆ ನ್ಯೂಟ್ರಿಯೆಂಟ್ಸ್​ ಬೇಸ್ಡ್​ ಸಬ್ಸಿಡಿ (ಎನ್​ಬಿಎಸ್​)ಯನ್ನು 2021&22ನೇ ಸಾಲಿನಲ್ಲಿ ನೀಡುವುದಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಇದರಂತೆ, ಪ್ರತಿ ಕಿಲೋದ ಸಬ್ಸಿಡಿ ದರ ಹೀಗಿರಲಿದೆ & ಎನ್​(ನೈಟ್ರೋಜನ್​) 18.789 ರೂ., ಪಿ(ಾಸ್ಫರಸ್​) 45.323 ರೂ., ಕೆ (ಪೊಟಾಶ್​) 10.116 ರೂ., ಎಸ್​ (ಸಲ್ಫರ್​ ) 2.374 ರೂಪಾಯಿ.
ಆರನೇ ದೇಶ ಭಾರತಅಮೆರಿಕ, ರಷ್ಯಾ, ್ರಾನ್ಸ್​, ಜಪಾನ್​, ಚೀನಾ ನಂತರ ಸುಧಾರಿತ ಮರೈನ್​ ಸ್ಟೇಷನ್​ ಸ್ಥಾಪಿಸುತ್ತಿರುವ ದೇಶ ಭಾರತವಾಗಲಿದೆ. ನಮ್ಮ ಎಂಎಸ್​ಎಂಇ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಇದು ಅತ್ಯುತ್ತಮ ಅವಕಾಶಗಳನ್ನು ತೆರೆದುಕೊಡಲಿದೆ. ಸ್ವಾವಲಂಬಿ ಭಾರತದ ಕನಸು ಸಾಕಾರಗೊಳಿಸುವುದಕ್ಕೂ ಇದು ಪೂರಕವಾಗಿದೆ ಎಂದು ಸಚಿವ ಜಾವಡೇಕರ್​ ಹೇಳಿದರು. ಹಂತ ಹಂತವಾಗಿ ಐದು ವರ್ಷಗಳಲ್ಲಿ 4,077 ಕೋಟಿ ರೂ. ವಿನಿಯೋಗಿಸಲಿದ್ದು, ಇದು ಭೂವಿಜ್ಞಾನಗಳ ಸಚಿವಾಲಯದ ಅಧೀನದಲ್ಲಿ ನಡೆಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + eighteen =
Remember me
