ಅಯೋಧ್ಯೆ:ಇಲ್ಲಿನ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸುವ ಬಾಲರಾಮನ ಮೂರ್ತಿ ಯಾವುದೆಂಬುದು ಜನವರಿ 22ರಂದು ಮಂದಿರದ ಪವಿತ್ರೀಕರಣ ಕಾರ್ಯ ನಡೆಯುವ ಮಧ್ಯಾಹ್ನ 12.20ಕ್ಕಷ್ಟೇ ಗೊತ್ತಾಗಲಿದೆ ಎಂದು “ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಕೆತ್ತಲಾಗಿರುವ ಮೂರು ಮೂರ್ತಿಗಳಲ್ಲಿ ಒಂದನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರೂ ವಿಗ್ರಹಗಳ ಭಾವಚಿತ್ರ ಅಥವಾ ವಿಡಿಯೋಗ್ರಹಣವನ್ನು ನಿಷೇಧಿಸಿರುವುದರಿಂದ ಆಯ್ಕೆಯಾದ ವಿಗ್ರಹದ ಅಧಿಕೃತ ಪ್ರಕಟಣೆಯಿಂದ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಮೂರ್ತಿಯನ್ನು ಕೆತ್ತಲು ಬಿಳಿ ಅಮೃತಶಿಲೆಯನ್ನು ಬಳಸಲಾಗಿದೆಯೇ ಅಥವಾ ಕಪ್ಪು ಗ್ರಾನೈಟ್​ ಬಳಸಲಾಗಿದೆಯೇ ಎನ್ನುವುದಷ್ಟೇ ಅಧಿಕೃತ ಪ್ರಕಟಣೆಯಿಂದ ಗೊತ್ತಾಗುತ್ತದೆ.
ಜನವರಿ 17ರ ಪ್ರಸ್ತಾಪಿತ ನಗರ ಯಾತ್ರೆಯ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದೂ ಮೂಲಗಳು ಹೇಳಿವೆ. ಜನಜಂಗುಳಿಯನ್ನು ತಡೆಯುವುದಕ್ಕಾಗಿ ಮುಂಜಾನೆಯೇ ನಗರ ಯಾತ್ರೆಯನ್ನು ನಡೆಸುವುದು ಉತ್ತಮವೆಂಬುದು ರಾಮ ಮಂದಿರ ಟ್ರಸ್ಟ್​ ಸದಸ್ಯರ ಅಭಿಪ್ರಾಯವಾಗಿದೆ ಎಂದು ಮೂಲಗಳು ಹೇಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
