ನವದೆಹಲಿ:ಕೋವಿಡ್-19 ಮಹಾಸೋಂಕಿನ ಕುರಿತು ದೇಶದಲ್ಲಿ ನಡೆಸಿದ ಪರೀಕ್ಷೆಗಳ ದತ್ತಾಂಶಗಳು ಮಾರಾಟಕ್ಕೆ ಲಭ್ಯವಿದೆ ಎಂದು ದುಷ್ಕರ್ವಿುಯೊಬ್ಬ ಹೇಳಿಕೊಂಡಿರುವುದು ಸಂಚಲನವನ್ನು ಸೃಷ್ಟಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ (ಐಸಿಎಂಆರ್) ಕೋವಿಡ್ ಕುರಿತಂತೆ 81.5 ಕೋಟಿ ಭಾರತೀಯರ ದತ್ತಾಂಶ (ಡೇಟಾ) ಸಂಗ್ರಹವಿದೆ.
ಡೇಟಾ ಸೋರಿಕೆ ನಿಜವೇ ಆದಲ್ಲಿ ಅದು ಭಾರತದ ಅತಿ ದೊಡ್ಡ ದತ್ತಾಂಶ ಸೋರಿಕೆ ಪ್ರಕರಣ ಆಗಲಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಇದರ ತನಿಖೆ ನಡೆಸುವ ಸಾಧ್ಯತೆಯಿದೆ. ಐಸಿಎಂಆರ್ ಅಧಿಕೃತವಾಗಿ ದೂರು ಸಲ್ಲಿಸಿದ ತಕ್ಷಣವೇ ಸಿಬಿಐ ಕಾರ್ಯಾಚರಣೆಗೆ ಇಳಿಯಲಿದೆ.
ಎಕ್ಸ್​ನಲ್ಲಿ ಖಾತೆ ಹೊಂದಿರುವ ವ್ಯಕ್ತಿಯೊಬ್ಬ ಡಾರ್ಕ್ ವೆಬ್​ನಲ್ಲಿ ಭಾರತೀಯರ ಡೇಟಾ ಲಭ್ಯತೆ ಕುರಿತು ಜಾಹೀರಾತು ನೀಡಿದ್ದಾನೆ. ಅದರಲ್ಲಿ 81.5 ಕೋಟಿ ಭಾರತೀಯರ ಆಧಾರ್ ಮತ್ತು ಪಾಸ್​ಪೋರ್ಟ್ ಮಾಹಿತಿಗಳಲ್ಲದೆ ಹೆಸರು, ಫೋನ್ ಸಂಖ್ಯೆ ಮತ್ತು ವಿಳಾಸಗಳು ಕೂಡ ಇವೆ. ಐಸಿಎಂಆರ್​ನಲ್ಲಿರುವ ಕೋವಿಡ್-19 ಪರೀಕ್ಷಾ ವಿವರದಿಂದ ಈ ಡೇಟಾವನ್ನು ಕದ್ದಿರುವುದಾಗಿ ದುಷ್ಕರ್ವಿು ಹೇಳಿಕೊಂಡಿದ್ದಾನೆ.
ಇನ್ನೊಂದೆರಡು ವರ್ಷ ಅತಿಯಾಗಿ ಕೆಲಸ ಮಾಡಬೇಡಿ: ಆರೋಗ್ಯ ಸಚಿವರ ಸಲಹೆ!

ಆಕೆ ಇನ್ನಿಲ್ಲ ಎಂಬುದನ್ನು ಖಚಿತಪಡಿಸಿದ ಇಸ್ರೇಲ್​; ಆಕೆಯನ್ನು ಹಮಾಸ್ ಉಗ್ರರು ಅದೇನೇನು ಮಾಡಿದ್ದರೆಂದರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
