ಜೈಪುರ:ಬಾಲ್ಯ ವಿವಾಹ ತಡೆಯಲು ರಾಜಸ್ಥಾನ ಸರ್ಕಾರ ಹೊಸ ಯೋಜನೆಯೊಂದನ್ನು ಆರಂಭಿಸಿದ್ದು, ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಜನ್ಮದಿನವನ್ನೂ ನಮೂದಿಸಬೇಕು ಎಂದು ಆದೇಶಿಸಿದೆ.
ಆಹ್ವಾನ ಪತ್ರಿಕೆ ಮುದ್ರಿಸುವ ಮುದ್ರಣಾಲಯಗಳಿಗೆ ವಧು-ವರರ ಜನನ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಿದೆ. ಮೇ 14ರ ಅಕ್ಷಯ ತೃತೀಯ ಮತ್ತು ಮೇ 26ರ ಪೀಪಲ ಪೂರ್ಣಿಮಾ ದಿನಗಳು ವಿವಾಹಕ್ಕೆ ಶುಭ ಮುಹೂರ್ತ ವಾಗಿದ್ದು, ಸಾಮೂಹಿಕ ವಿವಾಹಗಳ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ನಡೆಯುತ್ತವೆ.
ಈ ವೇಳೆ ಬಾಲ್ಯ ವಿವಾಹಗಳು ಆಗುತ್ತವೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. ಬಾಲ್ಯ ವಿವಾಹ ನಡೆದರೆ ಅದಕ್ಕೆ ಪಾಲಕರು, ಆಯೋಜಕರು, ಮದುವೆಗೆ ಬಂದವರೂ ಹೊಣೆಗಾರರಾಗುತ್ತಾರೆ. ಬಾಣಸಿಗರು, ವಾದ್ಯಗಾರರು, ಪುರೋಹಿತರು, ಟೆಂಟ್ ಮಾಲೀಕರು ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ರೋಮಿಯೋಗಳನ್ನು ಸಹ ನಾವು ಇಷ್ಟಪಡುತ್ತೇವೆ! ಸಿಎಂ ಯೋಗಿ​ ಹೇಳಿಕೆಗೆ ಟಿಎಂಸಿ ಸಂಸದೆಯ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 3 =
Remember me
