ಲಖನೌ :ಬಿಜೆಪಿ ಸಂಸದರಾಗಿರುವ ಕೌಶಲ್ ಕಿಶೋರ್ ಮತ್ತು ಶಾಸಕಿ ಜೈದೇವಿ ಅವರ ಸೊಸೆ ಅಂಕಿತಾ ಸಂಸದರ ಮನೆಯ ಮುಂದೆಯೇ ನಿಂತು ನಾಡಿ ಕತ್ತರಿಸಿಕೊಂಡು ಆತ್ಮಹತ್ಯೆಯ ಪ್ರಯತ್ನ ನಡೆಸಿದ್ದಾರೆ. ತನ್ನ ಗಂಡನಾದ ಆಯುಷ್​, ಮನೆಯವರ ಒತ್ತಡಕ್ಕೆ ಮಣಿದು ತನ್ನನ್ನು ತೊರೆಯುತ್ತಿರುವ ಕಾರಣಕ್ಕೆ ಈ ಕ್ರಮ ಕೈಗೊಂಡಿರುವುದಾಗಿ ಅಂಕಿತಾ ಹೇಳಿಕೆ ನೀಡಿದ್ದಾರೆ.
ಉತ್ತರಪ್ರದೇಶದ ಲಖನೌ ಜಿಲ್ಲೆಯ ಮೋಹನ್​ಲಾಲ್​ಗಂಜ್​ನ ಸಂಸದರಾಗಿರುವ ಕೌಶಲ್ ಕಿಶೋರ್ ಪುತ್ರ ಆಯುಷ್ ಮನೆಯವರ ಇಚ್ಛೆಯ ವಿರುದ್ಧ ಹೋಗಿ ಕಳೆದ ವರ್ಷ ಪ್ರೇಮ ವಿವಾಹವಾಗಿದ್ದರು. ಆ ನಂತರ ಆಯುಷ್​ನೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸಂಸದ ಕಿಶೋರ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆಯುಷ್ ಮತ್ತು ಅಂಕಿತಾ ಲಖನೌನ ಮಂಡಿಯನ್ ಮೊಹಲ್ಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಮೇಲ್ಮನೆಯಲ್ಲಿ ಬಿಟ್ಟು ಬಿಡದೆ ಕಾಡಿದ ಸಿಡಿ ಪ್ರಕರಣ: ಸದಸ್ಯರ ಮಾತು ಕಡತಕ್ಕೆ ಹೋಗದಂತೆ ತಡೆದ ಸಭಾಪತಿ!
ಮಾರ್ಚ್ 3 ರಂದು ಆಯುಷ್​ ಮೇಲೆ ಗುಂಡಿನ ದಾಳಿ ನಡೆದಿದ್ದು, ತನಿಖೆಯ ನಂತರ ಪೊಲೀಸರು ಸ್ವತಃ ಆಯುಷ್​ ಈ ದಾಳಿಯ ನಾಟಕವಾಡಿಸಿದ್ದ ಎಂದು ವರದಿ ನೀಡಿದ್ದರು. ನಂತರ ತಲೆ ಮರೆಸಿಕೊಂಡಿದ್ದ ಆಯುಷ್​ ನಿನ್ನೆ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದ. ಈ ನಡುವೆ ಅಂಕಿತಾರ ಬಗ್ಗೆ ತಮ್ಮ ಅಭಿಪ್ರಾಯ ಬದಲಾಗಿದ್ದು, ಅವರನ್ನು ಬಿಟ್ಟುಬಿಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ವಿಡಿಯೋ ಸಹ ಬಿಡುಗಡೆ ಮಾಡಿದ್ದ.
ಇದಕ್ಕೆ ಉತ್ತರವಾಗಿ ಅಂಕಿತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ‘ಮನೆಯವರ ಒತ್ತಡಕ್ಕೆ ಮಣಿದು ಆಯುಷ್ ನನ್ನನ್ನು ತೊರೆಯುತ್ತಿದ್ದಾನೆ, ಇನ್ನು ನಾನು ಬದುಕಿ ಪ್ರಯೋಜನವಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳಲಿದ್ದು, ನನ್ನ ಗಂಡ, ಅತ್ತೆ-ಮಾವ ಮತ್ತು ಆಯುಷ್​​ನ ಸೋದರರೇ ನನ್ನ ಸಾವಿಗೆ ಜವಾಬ್ದಾರರು’ ಎಂದು ಹೇಳಿದ್ದರು ಎನ್ನಲಾಗಿದೆ.
ಇದನ್ನೂ ಓದಿ:“ಪೆಟ್ಟು ಬಿದ್ದ ಹುಲಿ ಹೆಚ್ಚು ಅಪಾಯಕಾರಿ” : ಮಮತಾ ಬ್ಯಾನರ್ಜಿ ಎಚ್ಚರಿಕೆ
ಈ ವಿಡಿಯೋ ವೈರಲ್ ಆದ ಬಳಿಕ ಲಖನೌ ಪೊಲೀಸರು ಅಂಕಿತಾಳನ್ನು ಹುಡುಕಲು ಆರಂಭಿಸಿದ್ದರು. ನಿನ್ನೆ ರಾತ್ರಿ ಸಂಸದರ ಮನೆಯ ಹೊರಗೆ ತನ್ನ ಮಣಿಕಟ್ಟಿನ ರಕ್ತನಾಡಿಯನ್ನು ಕತ್ತರಿಸಿಕೊಂಡ ಅಂಕಿತಾಳನ್ನು ಆಸ್ಪತ್ರೆಗೆ ದಾಖಲಿಸಿದರು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಅಂಕಿತಾ, ‘ಆಯುಷ್​ ಎಲ್ಲಿದ್ದಾನೆ ಎಂದು ತಿಳಿಯಲು ಸಂಸದರ ಮನೆಗೆ ಹೋದೆ. ಆದರೆ ಮನೆಯವರ್ಯಾರೂ ನನ್ನನ್ನು ಗುರುತಿಸುತ್ತಲೂ ಇಲ್ಲ. ಅವರ ಮನೆಯ ಮುಂದೆ ಮೂರು ಗಂಟೆ ಕಾಲ ನಿಂತಿದ್ದೆ. ಆಯುಷ್​ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ನಾಡಿ ಕತ್ತರಿಸಿಕೊಂಡೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

ಕ್ರಿಕೆಟ್ ಆಟಗಾರನಂತೆ ಮೈದಾನಕ್ಕೆ ಹೋಗುತ್ತಿದ್ದ… ಆದರೆ ಮಾಡುತ್ತಿದ್ದುದು ಬೇರೆಯೇ ಕೆಲಸ !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 2 =
Remember me
