ನವದೆಹಲಿ:2023ರಲ್ಲಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಭಾರತೀಯ ಸೇನೆಯ ಹಲವು ಟೆಂಟ್‌ಗಳಲ್ಲಿ ಸಂಭವಿಸಿದ ಬೆಂಕಿಯನ್ನು ನಿಯಂತ್ರಿಸಿ ಭಾರತೀಯ ಸೈನಿಕರನ್ನು ಪ್ರಾಣಾಪಾಯದಿಂದ ರಕ್ಷಿಸಿದ ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್​ಗೆ ಕೆಲ ದಿನಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು  ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದರು. ಇದೀಗ ಈ ವಿಚಾರ ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದು, ನೆಕ್ಸ್ಟ್​ ಆಫ್​ ಕಿನ್​ ನಿಯಮದಡಿ ಮರುಪರಿಶೀಲಿಸುವಂತೆ ಅಂಶುಮಾನ್​ ಪೋಷಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ದಲ್ಪತ್ ಗ್ರಾಮದ ನಿವಾಸಿಯಾದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರು ತನ್ನ ಜೀವವನ್ನು ತ್ಯಾಗ ಮಾಡುವ ಮೂಲಕ ನಾಲ್ವರು ಸೈನಿಕರ ಜೀವವನ್ನು ಉಳಿಸಿದ್ದರು. ಕೀರ್ತಿ ಚಕ್ರವು ಅಂಶುಮಾನ್ ಅವರ ಕುಟುಂಬಕ್ಕೆ ನೀಡಲಾದ ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ. ಇದೀಗ ಈ ಪ್ರಶಸ್ತಿ ನೀಡಿರುವ ಬಗ್ಗೆ ಮರುಪರಿಶೀಲಿಸುವಂತೆ ಅಂಶುಮಾನ್​ ಪೋಷಕರು ಒತ್ತಾಯಿಸಿದ್ದಾರೆ.
We have habit of making heros which is sometimes not good, When martyred captain Anshuman Singh got Keerti Chakra and everyone was sharing the sad story of his wife but no one, not a single one was talking about the pain of his parents of losing their brave son.Now parents of…pic.twitter.com/VQYVQOLW2K
ಇದನ್ನೂ ಓದಿ:ಬಾಂಬರ್​ಗಳಿಗೆ ತಮಿಳುನಾಡಿನಲ್ಲಿ ಟ್ರೈನಿಂಗ್​ ನೀಡಲಾಗಿತ್ತು ಎಂಬುದು ನಿಮಗೆ ಹೇಗೆ ಗೊತ್ತು?; ಕೇಂದ್ರ ಸಚಿವೆ ಶೋಭಾ ವಿರುದ್ಧ ಮದ್ರಾಸ್​ ಹೈಕೋರ್ಟ್ ಗರಂ
ಈ ಕುರಿತು ಮಾತನಾಡಿರುವ ಅಂಶುಮಾನ್​ ಪೋಷಕರಾದ ರವಿ ಪ್ರತಾಪ್​ ಸಿಂಗ್​ ಹಾಗೂ ಮಂಜು ಸಿಂಗ್​, ಮಗ ಮೃತಪಟ್ಟ ಬಳಿಕ ಸೊಸೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. ಆಕೆ ಮನೆಯ ವಿಳಾಸವನ್ನು ಬದಲಾಯಿಸಿದ್ದು, ಆಕೆ ನಮ್ಮೊಂದಿಗೆ ವಾಸಿಸುತ್ತಿಲ್ಲ. ಮಗನ ಸ್ಮರಣಿಕೆಯನ್ನು ಸೊಸೆಗೆ ನೀಡಲಾಗಿದೆ. ಆತನ ನೆನಪಿಗೆ ನಮ್ಮೊಂದಿಗೆ ಯಾವುದೇ ಕುರುಹುಗಳಿಲ್ಲ. ಸರ್ಕಾರ ಈ ಬಗ್ಗೆ ಮರುಪರಿಶೀಲಿಸಬೇಕು ಎಂದು ವಿನಂತಿಸಿದ್ದಾರೆ.
ಅಂಶುಮಾನ್​ ಪೋಷಕರು ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ನೆಕ್ಸ್ಟ್​ ಆಫ್​ ಕೀನ್​ ನಿಯಮದಲ್ಲಿ ಬದಲಾವಣೆ ತರಲು ಸರ್ಕಾರದ ಮೇಲೆ ಒತ್ತೆ ಹೇರುವಂತೆ ಅವರು ಆಗ್ರಹಿಸಿದ್ದಾರೆ.
ಒಬ್ಬ ವ್ಯಕ್ತಿಯು ಸೈನ್ಯಕ್ಕೆ ಸೇರಿದಾಗ, ಅವನ ಹೆತ್ತವರು ಅಥವಾ ಪೋಷಕರ ಹೆಸರುಗಳನ್ನು ನೆಕ್ಸ್ಟ್​ ಆಫ್​ ಕೀನ್​ನಲ್ಲಿ ದಾಖಲಿಸಲಾಗುತ್ತದೆ. ಅದಾಗ್ಯೂ ಕೆಡೆಟ್​ ಅಥವಾ ಅಧಿಕಾರಿ ಮದುವೆಯಾದಾಗ ಅವರ ಪತ್ನಿಯ ಹೆಸರನ್ನು ನೆಕ್ಸ್ಟ್​ ಆಫ್​ ಕೀನ್​ನಲ್ಲಿ ದಾಖಲಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + ten =
Remember me
