ಉತ್ತರಪ್ರದೇಶದ:ವೃದ್ಧರೊಬ್ಬರು ಬಿಸಿಬಿಸಿ ಚಹಾ ನೀಡದೆ ಇರುವ ಸೊಸೆ ವಿಚಾರವಾಗಿ ಕೋಪಗೊಂಡು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಬಂದಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಂದಾ ಜಿಲ್ಲೆಯ ಕಮಾಸಿನ್ ಪೊಲೀಸ್ ಠಾಣೆ ವ್ಯಾಪ್ತಿಯ ಆದೌರಾ ಗ್ರಾಮದಲ್ಲಿ ನಡೆದಿದೆ.
ನಡೆದಿದ್ದೇನು?:ಅವಧ್ ಕಿಶೋರ್ ಮೃತ. ವೃದ್ಧ ತನ್ನ ಸೊಸೆಗೆ ಸಂಜೆ ಚಹಾವನ್ನು ಕೇಳಿದನು.ಸೊಸೆ ಚಹಾ ನೀಡಲು ಸ್ವಲ್ಪ ತಡವಾಯಿತು.ಆಮೇಲೆ ಏನಾಯ್ತೋ ವೃದ್ಧನಿಗೆ  ಸಿಟ್ಟು ಜಾಸ್ತಿ ಆಯಿತು. ತನ್ನ ಸೊಸೆ ಸಂಜೆ ಚಹಾ ಕೇಳಿದ ತಕ್ಷಣ ಕೊಟ್ಟಿಲ್ಲ ಎಂದು ಮಾವಕೋಪಗೊಂಡ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕಿರುಚಾಟ ಕೇಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ತಕ್ಷಣ ಸ್ಪಂದಿಸಿ ಬಾಗಿಲು ತೆರೆದು ಒಳಗೆ ಹೋಗಿ ಬೆಂಕಿ ನಂದಿಸಿ ವೃದ್ಧನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವೃದ್ಧೆಯೊಬ್ಬರ ಆತ್ಮಹತ್ಯೆಯಿಂದ ಕುಟುಂಬದಲ್ಲಿ ಗೊಂದಲ ಉಂಟಾಗಿದ್ದು, ಹಳ್ಳಿಯಲ್ಲೂ ನೀರವ ಮೌನ ಆವರಿಸಿದೆ.
ಕುಟುಂಬಸ್ಥರು ಮಾತನಾಡಿ, ಕುಟುಂಬದ ಕೆಲವರು ಜಾತ್ರೆ ನೋಡಲು ನಗರಕ್ಕೆ ತೆರಳಿದ್ದರು. ಮನೆಯಲ್ಲಿ ವೃದ್ಧರು ಒಬ್ಬರೇ ಇದ್ದರು. ಅವರು ಬಹಳ ದಿನದಿಂದ ಒತ್ತಡದಲ್ಲಿದ್ದರು. ತಮ್ಮ ಮಗಳು ಮತ್ತು ಸೊಸೆಗೆ ಸಂಜೆ ಚಹಾವನ್ನು ಕೇಳಿದರು. ಚಹಾ ನೀಡಲು ವಿಳಂಬವಾಯಿತು. ಈ ವಿಚಾರದಲ್ಲಿ ಅವರಿಗೆ ಕೋಪ ಬಂತು. ಮನೆಯಲ್ಲಿದ್ದವರೊಂದಿಗೆ ವೃದ್ಧನೂ ವಾಗ್ವಾದಕ್ಕೆ ಇಳಿದಿದ್ದಾನೆ. ಇದಾದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಬಾಬೇರು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ. ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
VIDEO | ಹೈ ಹೀಲ್ಡ್‌ ಶೂ ಧರಿಸಿ ನಡೆದ ಪುರುಷರು; ಕಾರಣವೇನು ಗೊತ್ತಾ?
VIDEO | ಹೈ ಹೀಲ್ಡ್‌ ಶೂ ಧರಿಸಿ ನಡೆದ ಪುರುಷರು; ಕಾರಣವೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 7 =
Remember me
