ಲಕ್ನೋ:ಸಾಮಾನ್ಯವಾಗಿ ಕುಟುಂಬಗಳಲ್ಲಿ ಅತ್ತೆ ಮತ್ತು ಸೊಸೆಯ ನಡುವಿನ ಜಗಳದ ಸುದ್ದಿಗಳು ಮುನ್ನೆಲೆಗೆ ಬರುತ್ತವೆ. ಕೆಲವೆಡೆ ಈ ಜಗಳಕ್ಕೆ ವರದಕ್ಷಿಣೆ ಕಾರಣವಾದರೆ ಮತ್ತೆ ಕೆಲವೆಡೆ ಬೇರೆಯದ್ದೇ ಕಾರಣ. ಆದರೆ ಅತ್ತೆ ಮತ್ತು ಸೊಸೆಯ ನಡುವಿನ ಜಗಳಕ್ಕೆ ಉತ್ತರ ಪ್ರದೇಶದ ಲಕ್ನೋದಿಂದ ವಿಶಿಷ್ಟ ಕಾರಣವೊಂದು ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ:ಆಂಧ್ರದ ಹುಡುಗ, ತೈವಾನ್ ಹುಡುಗಿ: ಗಡಿ ಮೀರಿದ ಪ್ರೀತಿ, ಅದ್ಧೂರಿ ಮದುವೆ..
ಹೊಸ ಸೊಸೆಯ ಚೇಷ್ಟೆಯಿಂದ ಸಿಟ್ಟಾದ ಅತ್ತೆ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರಪ್ರದೇಶದ ಲಕ್ನೋ ಬಳಿ ನಡೆದಿದ್ದು, ಎಲ್ಲರ ಹೆಸರುಗಳನ್ನು ಗುಪ್ತವಾಗಿಡಲಾಗಿದೆ. ಇಲ್ಲಿನ ಮಹಿಳೆಯೊಬ್ಬಳು ತನ್ನ ಮಗನಿಗೆ 5 ತಿಂಗಳಿಗೆ ಮದುವೆಯಾಗಿದೆ. ಸೊಸೆಯು ಆಕೆ ಮನೆಯಲ್ಲಿಯೇ ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳುತ್ತಾಳೆ. ಅಲ್ಲದೇ ಕುಟುಂಬಸ್ಥರಿಗೆ ‘ಯಾರ್'(ಸ್ನೇಹಿತ) ಎಂಬ ಪದವನ್ನು ಸಂಭಾಷಣೆಯಲ್ಲಿ ಬಳಸುತ್ತಾಳೆ. ಇದರಿಂದಾಗಿ ಪಕ್ಕದ ಮನೆಯವರು ನಮ್ಮ ಮನೆಗೆ ಬರಲು ಹಿಂಜರಿಯುತ್ತಿದ್ದಾರೆ ಎಂದು ದೂರಿದ್ದಾಳೆ.
ಈ ವೇಳೆ ಸೊಸೆಯ ತಾನು ಇನ್ನು ಮುಂದೆ ಕುಟುಂಬಸ್ಥರಿಗೆ ‘ಯಾರ್’​ ಎಂದು ಕರೆಯುವುದಿಲ್ಲ, ಮನೆಯಲ್ಲಿ ಗುಟ್ಕಾ ತಿಂದು ಅಲ್ಲಿ ಇಲ್ಲಿ ಉಗುಳುವುದನ್ನು ಬಿಡುತ್ತೇನೆ ಎಂದು ಹೇಳಿದ್ದಾಳೆ. ಈ ವೇಳೆ ಸೊಸೆ ತಾನು ಗುಟ್ಕಾ ತಿನ್ನುವುದನ್ನು ಮಾತ್ರ ಬಿಡುವುದಿಲ್ಲ ಎಂದು ಅಧಿಕಾರಿಗಳ ಮುಂದೆ ತಿಳಿಸಿದ್ದಾಳೆ. ಕೊನೆಗೆ ಎರಡೂ ಕಡೆಯವರನ್ನು ದೂರುಗಳನ್ನು ಆಲಿಸಿದ ನಂತರ ಅಧಿಕಾರಿಗಳು ಎರಡು ಕಡೆಯವರಿಗೆ ಸಮಾಧಾನ ಹೇಳಿ, ಈ ಬಗ್ಗೆ ಮತ್ತೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − 8 =
Remember me
