ಮಹಾರಾಷ್ಟ್ರ:ಕಳೆದ ಡಿಸೆಂಬರ್​ನಲ್ಲಿ ಮಹಿಳೆಯೊಬ್ಬಳ ಕೊಲೆಗೆ ಸಂಬಂಧಿಸಿದಂತೆ ಕಲಾಚೌಕಿ ಪೊಲೀಸರು ಆಕೆಯ ಮಗಳನ್ನು ಬಂಧಿಸಿದ್ದಾರೆ. ವೀಣಾ(55) ಮಗಳಿಂದ ಹತ್ಯೆಗೀಡಾದ ಮಹಿಳೆ. ರಿಂಪಲ್ ಜೈನ್(24) ಕೊಲೆ ಆರೋಪಿಯಾಗಿದ್ದು, ತಾಯಿಯನ್ನೇ ಹತ್ಯೆ ಮಾಡಿದ್ದಾಳೆ.
ತಾಯಿಯನ್ನು ಹತ್ಯೆ ಮಾಡಿದ ಬಳಿಕ ರಿಂಪಲ್ ಜೈನ್, ಮೃತದೇಹವನ್ನು ಹಲವು ತುಂಡುಗಳನ್ನಾಗಿ ಕತ್ತರಿಸಿ, ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಾಳೆ. ಶವ ಕೊಳೆತು ವಾಸನೆ ಬರಬಾರದೆಂದು 200ಕ್ಕೂ ಅಧಿಕ ಸುಗಂಧದ್ರವ್ಯ ಹಾಗೂ ರೂಂ ಪ್ರಶ್ನರ್​ಗಳನ್ನು ಬಳಸಿದ್ದಾಳೆ. ತನ್ನ ಕೃತ್ಯದ ಬಗ್ಗೆ ಯಾರಿಗೂ ಅನುಮಾನ ಬರಬಾರದೆಂದು ರಿಂಪಲ್, ತನ್ನ ಮನೆಯ ನೆರೆಹೊರೆಯ ಮಂದಿಯೊಂದಿಗೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮೊದಲ ಬಾರಿಗೆ ಪತ್ನಿಯ ಮುಖ ಬಹಿರಂಗ ಪಡಿಸಿದ ಕ್ರಿಕೆಟಿಗ ಇರ್ಫಾನ್ ಪಠಾಣ್; ಫೋಟೋ ವೈರಲ್
ಕಳೆದ ಮಂಗಳವಾರ ರಾತ್ರಿ ರಿಂಪಲ್ ಜೈನ್​ಳ ಸೋದರ ಸಂಬಂಧಿ ಹಣ ಕೊಡಲು ಬಂದಾಗ, ತಾಯಿ ಎಲ್ಲಿದ್ದಾಳೆ ಎಂದು ವಿಚಾರಿಸಿದ್ದಾರೆ. ಈ ವೇಳೆ ತಾಯಿ ಕಾನ್ಪುರಕ್ಕೆ ಹೋಗಿರುವಾಗಿ ತಿಳಿಸಿದ್ದಾಳೆ. ಆದರೆ ಅನುಮಾನ ಬಂದ ಸಂಬಂಧಿ ಮನೆಗೆ ಹಿಂತಿರುಗಿ, ತನ್ನ ಮಗನಲ್ಲಿ ಹೇಳಿದ್ದಾರೆ. ಬಳಿಕೆ ಇಬ್ಬರು ರಿಂಪಲ್ ಮನೆಗೆ ಬಂದಾಗ ಬಾಗಿಲು ತೆರೆಯಲು ನಿರಾಕರಿಸಿದ್ದಾಳೆ. ಕೊನೆಗೆ ನೆರೆಮಂದಿಯ ಸಹಾಯದೊಂದಿಗೆ ಮನೆ ಪ್ರವೇಶಿಸಿದಾಗ ಕೊಳೆತ ವಾಸನೆ ಬರುತ್ತಿರುವುದು ಗೊತ್ತಾಗಿದೆ. ಮನೆಯನ್ನು ಪರಿಶೀಲಿಸಿದಾಗ ವೀಣಾ ಕೊಲೆಯಾಗಿ ಹೋಗಿರುವುದು ಬೆಳಕಿಗೆ ಬಂದಿದೆ.
ಕೂಡಲೇ ವೀಣಾ ಕೊಲೆಯಾಗಿರುವ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ವಿವಿಧೆಡೆ ಮೃತದೇಹದ ಕತ್ತರಿಸಿದ ಭಾಗಗಳು ಪತ್ತೆಯಾಗಿದೆ. ಟೈಲ್ಸ್​ ಕತ್ತರಿಸುವ ಯಂತ್ರದಿಂದ ರಿಂಪಲ್ ತನ್ನ ತಾಯಿಯ ಮೃತದೇಹವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)
ಇದನ್ನೂ ಓದಿ:ಅವಕಾಶ ಸಿಕ್ಕರೆ ದೀಪಿಕಾ ಪಡುಕೋಣೆ ಅವರ ಕಪಾಟಿಗೆ ಕನ್ನ ಹಾಕುತ್ತೇನೆ! ರಶ್ಮಿಕಾ ಹೀಗೆನ್ನಲು ಕಾರಣವೇನು?
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − two =
Remember me
