ನವದೆಹಲಿ:ಉದ್ಯಮಿಯೊಬ್ಬರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆ ಕೊಲೆಯ ಹಿಂದೆ ಉದ್ಯಮಿಯ ಪುತ್ರಿಯೇ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಮಾತ್ರವಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನೂ ಒಳಗೊಂಡಂತೆ ನಾಲ್ವರನ್ನು ಬಂಧಿಸಿದ್ದಾರೆ.
ಜಾರ್ಖಂಡ್​ನ ಸೆರೈಕಲ-ಖರ್ಸ್ವನ್ ಜಿಲ್ಲೆಯ ಕನ್ಹಯ್ಯ ಸಿಂಗ್ ಎಂಬ ಉದ್ಯಮಿಯನ್ನು ಅಪರಿಚಿತರು ಹರಿಓಂನಗರ್ ಪ್ರದೇಶದಲ್ಲಿ ಜೂ. 29ರಂದು ಗುಂಡಿಟ್ಟು ಸಾಯಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಉದ್ಯಮಿಯ ಪುತ್ರಿ, 20 ವರ್ಷದ ಅಪರ್ಣ ಸಿಂಗ್, ಆಕೆಯ ಪ್ರಿಯಕರ ರಾಜ್​ವೀರ್ ಸಿಂಗ್, ಶೂಟರ್ ನಿಖಿಲ್ ಗುಪ್ತ ಮತ್ತು ಆತನ ಸಹಚರ ಸೌರಭ್​ ಕಿಸ್ಕು ಅವರನ್ನು ಬಂಧಿಸಿದ್ದಾಗಿ ಎಸ್​ಪಿ ಆನಂದ್​ ಪ್ರಕಾಶ್ ತಿಳಿಸಿದ್ದಾರೆ.
ಅಪರ್ಣ ಹಾಗೂ ರಾಜ್​ವೀರ್ ಪ್ರೀತಿಗೆ ಕನ್ಹಯ್ಯ ಸಿಂಗ್ ವಿರೋಧವಿದ್ದು, ಇವರಿಬ್ಬರ ಪ್ರೇಮಪ್ರಕರಣ ತಿಳಿದ ಮೇಲೆ ಅವರು ಮಗಳಿಗೆ ಬೇರೆ ಮದುವೆ ಮಾಡಲು ಹುಡುಗನನ್ನು ನೋಡಲಾರಂಭಿಸಿದ್ದರು. ಆದರೆ ಹಠಕ್ಕೆ ಬಿದ್ದಿದ್ದ ಮಗಳು ಪ್ರಿಯಕರನನ್ನು ಬಿಡಲಾಗದೆ ತಂದೆಯ ಹತ್ಯೆಗೆ ಸಂಚು ಹೂಡಿದ್ದಳು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಪ್ರೇಮಿಗಳು ಮೂರು ವರ್ಷದಿಂದ ಕನ್ಹಯ್ಯ ಅವರ ಕೊಲೆಗೆ ಯೋಜನೆ ಹಾಕಿಕೊಳ್ಳುತ್ತಲೇ ಬಂದಿದ್ದು, ಜೂ. 20ರಂದು ಪಾಟ್ನಾದಲ್ಲಿ ಕೊಲೆಗೆ ಮುಂದಾಗಿದ್ದರೂ ಅದು ಸಾಧ್ಯವಾಗಿರಲಿಲ್ಲ. ತಂದೆ ಅಲ್ಲಿರುವ ಕುರಿತು ಮಗಳು ವಾಟ್ಸ್​ಆ್ಯಪ್ ಮೂಲಕ ಲೊಕೇಶನ್ ಕಳಿಸಿದ್ದಳು. ಆದರೆ ಕೊಲೆ ಮಾಡುವ ಪ್ರಯತ್ನ ಫಲಿಸಿರಲಿಲ್ಲ.
ಇನ್ನು ಈ ಕೊಲೆಗೆ ಮಗಳು ಐದು ದಿನಗಳ ಹಿಂದೆಯೇ ಪ್ಲ್ಯಾನ್​ ಮಾಡಿ ಓಕೆ ಮಾಡಿದ್ದು, ಸುಪಾರಿ ಹಣದ ಬದಲಿಗೆ ಅಪ್ಪ ಗಿಫ್ಟ್​ ಕೊಟ್ಟಿದ್ದ ವಜ್ರದುಂಗುರವನ್ನೇ ಶೂಟರ್​ಗೆ ಕೊಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಪಕ್ಕ ನಿಂತಿದ್ದ ಕಾರಿನ ಮೇಲೇ ಮಗುಚಿ ಬಿದ್ದ ಲಾರಿ, ಕಾರಲ್ಲಿದ್ದ ವ್ಯಕ್ತಿ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 4 =
Remember me
