ಕೋಲ್ಕತ:ಮಗಳೇ ಅಪ್ಪನಿಗೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿರುವ ಭಯಾನಕ ಘಟನೆ ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ನಡೆದಿದೆ. ಅಪ್ಪನಿಂದ ಸಾಕಷ್ಟು ನೊಂದಿದ್ದ ಮಗಳು ಅದೇ ಕಾರಣಕ್ಕೆ ಬೆಂಕಿ ಹಚ್ಚಿರುವುದಾಗಿ ಹೇಳಲಾಗಿದೆ.
ಕ್ರಿಸ್ಟೋಫರ್ ರಸ್ತೆ ಬಳಿಯ ಪಾರ್ಕ್ ಸರ್ಕಸ್​ನ ನಿವಾಸಿಯಾಗಿರುವ 22 ವರ್ಷದ ಹೆಣ್ಣು ಮಗಳು ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾಳೆ. ಆಕೆ ಭಾನುವಾರದಂದು ತನ್ನ 54 ವರ್ಷದ ತಂದೆಯನ್ನು ಕರೆದುಕೊಂಡು ರೆಸ್ಟೋರೆಂಟ್​ ಒಂದರಲ್ಲಿ ರಾತ್ರಿಯ ಊಟ ಮಾಡಲು ತೆರಳಿದ್ದಾಳೆ. ಊಟ ಮುಗಿಸಿ ವಾಪಾಸಾಗುವಾಗ ಆತನಿಗೆ ಕಂಠ ಪೂರ್ತಿ ಕುಡಿಸಿದ್ದಾಳೆ. ನಂತರ ಹೂಗ್ಲಿ ನದಿ ದಡಕ್ಕೆ ಕರೆದೊಯ್ದು, ಅಲ್ಲಿದ್ದ ಬೆಂಚಿನ ಮೇಲೆ ಕೂರಿಸಿಕೊಂಡು ಮಾತನಾಡಿಸಲಾರಂಭಿಸಿದ್ದಾಳೆ.ಮೊದಲೇ ಮದ್ಯದ ಅಮಲಿನಲ್ಲಿದ್ದ ತಂದೆ ಸ್ವಲ್ಪ ಹೊತ್ತಿನಲ್ಲಿ ನಿದ್ರೆಗೆ ಜಾರಿದ್ದಾನೆ. ಅದಾದ ನಂತರ ಆತನ ಮೇಲೆ ಸೀಮೆ ಎಣ್ಣೆ ಸುರಿದ ಮಗಳು, ಬೆಂಕಿ ಹಚ್ಚಿದ್ದಾಳೆ. ನಂತರ ಅಲ್ಲಿಂದ ಮನೆಗೆ ಬಂದಿದ್ದಾಳೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಸಿಸಿಟಿವಿ ದೃಶ್ಯಾವಳಿ ಕಂಡ ಪೊಲೀಸರು ನೇರವಾಗಿ ಮಗಳ ಬಳಿ ಹೋಗಿ ವಿಚಾರಣೆ ನಡೆಸಿದ್ದಾರೆ. ಆಗ ಆಕೆ ನಿಜಾಂಶ ಬಾಯಿ ಬಿಟ್ಟಿದ್ದಾಳೆ. ನನ್ನ ಅಮ್ಮ ನಾನು ಚಿಕ್ಕವಳಿದ್ದಾಗಲೇ ತೀರಿಕೊಂಡರು. ಅಂದಿನಿಂದ ನನ್ನ ತಂದೆ ನನ್ನನ್ನು ಅತ್ಯಂತ ಹೀನಾಯವಾಗಿ ನೋಡಿಕೊಂಡಿದ್ದ. ಮಾನಸಿಕ ಹಿಂಸೆ ಕೊಡುತ್ತಿದ್ದ. ನನಗೆ ಮದುವೆಯಾದ ಮೇಲೆ ಆ ತೊಂದರೆ ತಪ್ಪಿತ್ತು. ಆದರೆ ಮದುವೆ ಮುರಿದುಬಿದ್ದು ಮತ್ತೆ ತವರು ಮನೆ ಸೇರಿದೆ. ಆಗ ಮತ್ತೆ ತಂದೆ ಅದೇ ಹಿಂಸೆ ಕೊಡಲು ಆರಂಭಿಸಿದೆ. ಅದೇ ನೋವಿನಿಂದ ನಾನು ಅವನನ್ನು ಕೊಲ್ಲುವ ನಿರ್ಧಾರ ಮಾಡಿದೆ ಎಂದು ಮಗಳು ಹೇಳಿಕೊಂಡಿದ್ದಾಳೆ. ಆಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)
ಆಮೆಗಳ ದಿಕ್ಕು ತಪ್ಪಿಸುವ ವಿದ್ಯುತ್ ದೀಪಗಳು! ಎಲ್ಲ ಆಮೆಗಳು ಒಂದೇ ದಿನ ಮೊಟ್ಟೆ ಇಡೋದಕ್ಕೆ ಕಾರಣವಿದು…!

ವಧು ವರರ ಬಟ್ಟೆ ಬಿಚ್ಚುವುದು ಇಲ್ಲಿನ ಸಂಪ್ರದಾಯ! ಈ ದೇಶದ ಯುವಜನತೆಗೆ ಮದುವೆಯೇ ಶಾಪವಂತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 4 =
Remember me
