ಲಖನೌ:ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ತಂದೆಯ ಆಸೆಯನ್ನು ಈಡೇರಿಸಿದ ಪುತ್ರಿಯರು, ರೋಗಿಗಳಿದ್ದ ಕೊಠಡಿಯಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಉತ್ತರಪ್ರದೇಶದ ಲಖನೌದಲ್ಲಿ ನಡೆದಿದೆ. ಸದ್ಯ ಮದುವೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿವೆ.
ಇದನ್ನೂ ಓದಿ:ಯುಟಿಟಿ 2024 ಗಾಗಿ ಫ್ರಾಂಚೈಸಿಗಳು ಉಳಿಸಿಕೊಳ್ಳಲಿರುವ ಅಗ್ರ ಭಾರತೀಯ ತಾರೆಯರಲ್ಲಿ ಶರತ್ ಕಮಲ್, ಮಣಿಕಾ ಬಾತ್ರಾ
ಬಹುದಿನಗಳಿಂದ ತಮ್ಮ ಪುತ್ರಿಯರ ವಿವಾಹ ನೋಡಬೇಕೆಂದು ಬಯಸಿದ್ದ ತಂದೆ, ಕಳೆದ ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಪಾಲಾಗಿದ್ದರು. ಈ ವೇಳೆ ತಾನು ಬದುಕುಳಿಯೋದು ಅನುಮಾನ ಎಂದು ತಿಳಿದು, ತನ್ನ ಇಬ್ಬರು ಪುತ್ರಿಯರ ಬಳಿ ತಮ್ಮ ಮಹಾದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಅರಿತ ಹೆಣ್ಣುಮಕ್ಕಳು, ಅಪ್ಪನ ಮಾತನ್ನು ಮೀರದೆ, ಐಸಿಯು ಕೊಠಡಿಯಲ್ಲಿಯೇ ಸರಳವಾಗಿ ಮದುವೆಯಾಗಿದ್ದಾರೆ.
लखनऊ के एरा हॉस्पिटल के ICU में हुई अनोखी शादी..आईसीयू के अंदर गूंजा कबूल है.. कबूल
एरा हॉस्पिटल के ICU में मौ.इकबाल बीमारी से जूझ रहे हैं। बचने की उम्मीद कम है.. ऐसे मे अपनी आँखों के सामने बेटियों के निकाह की तमन्ना को पूरा करने की बात रखी। डॉक्टरों ने निकाह पढ़ाने वाले मौलाना…pic.twitter.com/iSSsC48rRZ
— TRUE STORY (@TrueStoryUP)June 15, 2024

ತಂದೆ ಜುನೈದ್ ಮಿಯಾನ್ ಅವರ ಆಸೆಯನ್ನು ಈಡೇರಿಸಿದ ಪುತ್ರಿಯರು, ಐಸಿಯು ಕೊಠಡಿಯಲ್ಲಿದ್ದ ಇತರೆ ರೋಗಿಗಳಿಗೆ ಯಾವುದೇ ರೀತಿಯಲ್ಲಿಯೂ ತೊಂದರೆ ಮಾಡದೆ, ಸರಳ ಉಡುಗೆ ತೊಟ್ಟು, ಹಾರ ಬದಲಾಯಿಸಿಕೊಂಡಿದ್ದಾರೆ. ಮದುವೆಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಸಾಕ್ಷಿಯಾಗಿರುವುದು ವೈರಲ್ ಆದ ದೃಶ್ಯಗಳಲ್ಲಿ ಕಂಡುಬಂದಿವೆ.
ಇದನ್ನೂ ಓದಿ:ಚಾಮರಾಜೇಂದ್ರ ಮೃಗಾಲಯ- ಯುವ ಸಂಘಟನೆಗೆ ಅರ್ಜಿ ಆಹ್ವಾನ
ವಿಶ್ವ ಅಪ್ಪಂದಿರ ದಿನದಂದೇ ಈ ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯ ಬಹುದಿನದ ಆಸೆಯನ್ನು ಈಡೇರಿಸಿರುವುದು ಇದೀಗ ನೆಟ್ಟಿಗರ ಮನ ಸ್ಪರ್ಶಿಸಿದ್ದು, ನಿಮ್ಮ ತ್ಯಾಗ, ಪ್ರೀತಿಗೆ ನಮ್ಮದೊಂದು ಸಲಾಂ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).
ಚಿತ್ರರಂಗದಲ್ಲಿ ‘ಸಾರಥಿ’ಗಿರುತ್ತ ಉಳಿವು​? ಮುಂದಿನ ಚಿತ್ರಗಳ ಕಥೆಯೇನು? ಹೀಗಿದೆ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
