ಹೈದರಾಬಾದ್​:ತುಂಬಾ ಪ್ರೀತಿಯಿಂದ ಸಾಕು ಸಲುಹಿದ ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತಂದೆ ಆಕ್ರೊಶ ವ್ಯಕ್ತಪಡಿಸಿದ ರೀತಿ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಮಗಳು ಬದುಕಿರುವಾಗಲೇ ಆಕೆಯ ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ, ಕುಟುಂಬವೇ ಕಣ್ಣೀರಿಟ್ಟಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ.
ಈ ಘಟನೆ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ. ಇಷ್ಟವಿಲ್ಲದಿದ್ದರೂ ಮಗಳು ಚಿಲುವೆರಿ ಅನುಷಾ ಪ್ರೇಮ ವಿವಾಹವಾಗಿರುವುದು ತಂದೆ ಮತ್ತು ತಾಯಿಯ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮಗಳು ಜೀವಂತವಾಗಿರುವಾಗಲೇ ಮನೆಯ ಮುಂದೆ ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ, ಜನನ ಮತ್ತು ಮರಣದ ದಿನಾಂಕವನ್ನು ಬರೆಸಿ, ಫ್ಲೆಕ್ಸ್​ ಮುಂದೆ ಇಡೀ ಕುಟುಂಬ ಗೊಳೋ ಎಂದು ಅಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಇದಿಷ್ಟೇ ಅಲ್ಲದೆ, ಮಗಳಿಗೆ ಪಿಂಡ ಪ್ರದಾನ ಮಾಡಿರುವುದಾಗಿಯೂ ಸಂಬಂಧಿಕರಿಗೆ ತಿಳಿಸಿದ್ದಾರೆ. ಸದ್ಯ ಪಾಲಕರು ಕಣ್ಣೀರಿಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಮಗಳನ್ನು ಪ್ರೀತಿಯಿಂದ ಸಾಕಿದ ತಂದೆಗೆ ಇಂತಹ ಅನ್ಯಾಯ ಆಗಬಾರದಿತ್ತು. ಅವರ ಮನವೊಲಿಸಿ ಮದುವೆ ಮಾಡಿಕೊಳ್ಳಬೇಕಿತ್ತು. ಓಡಿ ಹೋಗುವ ಮೂಲಕ ತಂದೆ-ತಾಯಿಯ ತಲೆ ತಗ್ಗಿಸುವಂತೆ ಮಾಡಿದ ಮಗಳ ವಿರುದ್ಧ ಪಾಲಕರು ಪ್ರತಿಭಟಿಸಿದ ರೀತಿ ಸರಿಯಿದೆ ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ಯುವತಿಯ ನಡೆಯನ್ನು ಟೀಕಿಸುತ್ತಿದ್ದಾರೆ.
ఇష్టం లేని పెళ్లి చేసుకుందని కూతురి చావు ఫ్లెక్సీ కొట్టించిన తండ్రి
సిరిసిల్ల పట్టణంలో చిలువేరి మురళి కూతురు చిలువేరి అనూష ఒక అబ్బాయిని ప్రేమించి ఇంటి నుండి వెళ్ళిపోయి వివాహం చేసుకుంది.
కూతురు ఇష్టం లేని పెళ్లి చేసుకుందని చిలువేరి మురళి తన బిడ్డ చనిపోయింది అంటూ ఫ్లెక్సీ…pic.twitter.com/6ulb1dCIad
— Telugu Scribe (@TeluguScribe)April 8, 2024

ಅಂದಹಾಗೆ ಅನುಷಾ ತುಂಬಾ ದಿನಗಳಿಂದ ಪ್ರೀತಿ ಮಾಡುತ್ತಿದ್ದ ಯುವಕನ ಜತೆ ಇತ್ತೀಚೆಗಷ್ಟೇ ಓಡಿ ಹೋಗಿ ಮದುವೆಯಾಗಿದ್ದಾಳೆ. ಎಷ್ಟೇ ಹೇಳಿದರೂ ಕೇಳದೇ ಪ್ರಿಯಕರನ ಹಿಂದೆ ಹೋಗಿದ್ದು, ಈ ನೋವನ್ನು ಸಹಿಸಲಾರದೇ ತಂದೆ-ತಾಯಿ ಈ ರೀತಿಯಾಗಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಪಾಲಿಗೆ ಮಗಳು ಸತ್ತು ಹೋಗಿದ್ದಾಳೆ ಎಂದು ಭಾವಿಸಿ, ವಿಧಿವಿಧಾನ ಸಹ ನೆರವೇರಿಸಿದ್ದಾರೆ.(ಏಜೆನ್ಸೀಸ್​)
ಎಷ್ಟೇ ಬ್ಯುಸಿ ಇದ್ದರೂ ನಾನು 1 ಗಂಟೆಯಾದ್ರೂ..ಹೀಗೆ ಮಾಡ್ಲೆಬೇಕು ಎಂದ್ರು ಮಿಲ್ಕಿ ಬ್ಯೂಟಿ ತಮನ್ನಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 1 =
Remember me
