ನವದೆಹಲಿ:ಬಾಲಿವುಡ್​ನ ಖ್ಯಾತ ನಟ ಅಕ್ಷಯ್​ ಕುಮಾರ್​ ನಟನೆಯ ಹೌಸ್​ಫುಲ್​-4 ಚಿತ್ರದ ಬಾಲಾ, ಬಾಲಾ… ಹಾಡು ಸೂಪರ್​ ಹಿಟ್​ ಆಗಿದೆ. ಈ ಹಾಡು ಸಣ್ಣ ಮಕ್ಕಳಾದಿಯಾಗಿ ಎಲ್ಲರಿಗೂ ಇಷ್ಟವಾಗುತ್ತಿದೆ. ಕೆಲವರು ಈ ಹಾಡಿಗೆ ಹೆಜ್ಜೆ ಹಾಕಿ ತಮ್ಮದೇ ಆದ ಶೈಲಿಯಲ್ಲಿ ನರ್ತಿಸಿ ನಲಿಯುತ್ತಿದ್ದಾರೆ.
ಇದೀಗ ಈ ಹಾಡು ಆಸ್ಟ್ರೇಲಿಯಾದ ಜನಪ್ರಿಯ ಆಟಗಾರ ಡೇವಿಡ್​ ವಾರ್ನರ್ ಅವರ ಪುತ್ರಿಯರನ್ನೂ ಸೆಳೆದಿದೆ. ಆದ್ದರಿಂದ ಅವರು ಈ ಹಾಡನ್ನು ಹಾಕಿಕೊಂಡು ಅಕ್ಷಯ್​ ಕುಮಾರ್​ ಶೈಲಿಯಲ್ಲೇ ನರ್ತಿಸಿ, ನಲಿಯುತ್ತಿದ್ದಾರೆ.
ಇದನ್ನೂ ಓದಿ:ಕಮಲ್​ ಹಾಸನ್​ ಚಿತ್ರಕ್ಕಾಗಿ ಖ್ಯಾತ ನಟಿಯರು ಮಾಡ್ತಾರಾ ಈ ತ್ಯಾಗ?
ತಮ್ಮ ಪುತ್ರಿಯರು ಈ ಹಾಡಿಗೆ ಹೆಜ್ಜೆ ಹಾಕುತ್ತಿರುವ ದೃಶ್ಯವನ್ನು ವಿಡಿಯೋ ಚಿತ್ರೀಕರಿಸಿಕೊಂಡಿರುವ ವಾರ್ನರ್​, ಅದನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದಾರೆ. ನಿಮ್ಮ ಪುತ್ರಿಯರು ಅವರದ್ದೇ ಆದ ಶೈಲಿಯಲ್ಲಿ ಬಾಲಾ ಡಾನ್ಸ್​ ಮಾಡುವಾಗ ಎಂಬ ಶೀರ್ಷಿಕೆಯನ್ನು ಇದಕ್ಕೆ ಕೊಟ್ಟಿದ್ದಾರೆ.
ಹೌಸ್​ಫುಲ್​-4 ಸಿನಿಮಾವನ್ನು ನಾಡಿಯಾಡ್​ವಾಲಾ ಗ್ರ್ಯಾಂಡ್​ಸನ್​ ನಿರ್ಮಿಸಿದ್ದು, ಫಾಕ್ಸ್​ ಸ್ಟಾರ್​ ಸ್ಟುಡಿಯೋಸ್​ ಇದರ ಸಹನಿರ್ಮಾಪಕರಾಗಿದ್ದಾರೆ. ಅಕ್ಷಯ್​ ಕುಮಾರ್​ ಅಲ್ಲದೆ, ರಿತೇಶ್​ ದೇಶ್​ಮುಖ್​, ಬಾಬಿ ಡಿಯೋಲ್​, ಕೃತಿ ಸನನ್​, ಪೂಜಾ ಹೆಗಡೆ, ಕೃತಿ ಖರಬಂದಾ ಮತ್ತು ಚುಂಕಿ ಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
ತಮಿಳಿನ ಕಾಂಟ್ರವರ್ಸಿ ಹೀರೋ ಜತೆ ತ್ರಿಷಾ ಕೃಷ್ಣನ್​ ಮದುವೆ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 12 =
Remember me
