ಮುಂಬೈ:ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ಅವರಿಗೆ ಡಾನ್​ ದಾವೂದ್​ ಇಬ್ರಾಹಿಂನೊಂದಿಗೆ ನಂಟಿತ್ತು. ದಾವೂದ್​ ಭಂಟನಾದ ರಿಯಾಜ್​ ಭಾಟಿಯೊಂದಿಗೆ ಹಣ ವಸೂಲಿ ದಂಧೆ ನಡೆಸುತ್ತಿದ್ದರು ಎಂದು ಎನ್​​ಸಿಪಿ ನಾಯಕ ಹಾಗೂ ರಾಜ್ಯದ ಹಾಲಿ ಸಚಿವ ನವಾಬ್​ ಮಲಿಕ್​ ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆ ಮುಂಬೈನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಮಲಿಕ್​​, ಫಡ್ನವಿಸ್​ರ ಸತ್ಯವನ್ನು ಬಹಿರಂಗಪಡಿಸುವ ತಮ್ಮ ‘ಹೈಡ್ರೋಜನ್​ ಬಾಂಬ್​’ ಸಿಡಿಸಿದ್ದು ಹೀಗೆ. ಫಡ್ನವಿಸ್​ ಮುಖ್ಯಮಂತ್ರಿಯಾಗಿದ್ದ ವೇಳೆ ಅನುಮಾನಾಸ್ಪದ ಪಾಕಿಸ್ತಾನಿ ನಂಟುಗಳುಳ್ಳ ಜನರಿಗೆ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಿದ್ದರು ಎಂದು ಆರೋಪಿಸಿದರು.
ಇದನ್ನೂ ಓದಿ:ಜೈಲಿಂದ ಹೊರ ಬಂದ ಶ್ರೀಕಿ: ಬಿಟ್​ ಕಾಯಿನ್​ ಪ್ರಕರಣವೇ ಬೋಗಸ್, ಪೊಲೀಸರು ಹೇಳುತ್ತಿರುವುದು ಸುಳ್ಳು…
ಮಹಾರಾಷ್ಟ್ರದಲ್ಲಿ ನಕಲಿ ನೋಟುಗಳ ದಂಧೆಗಳು ಆರಂಭವಾಗಲು ಕಾರಣ ಫಡ್ನವಿಸ್​; ನೋಟು ಅಮಾನ್ಯೀಕರಣದ ನಂತರ ಒಂದು ವರ್ಷದ ಕಾಲ ರಾಜ್ಯದಲ್ಲಿ ಯಾವುದೇ ಕೇಸುಗಳನ್ನು ದಾಖಲಿಸದೆ ಅನುಕೂಲ ಮಾಡಿಕೊಟ್ಟಿದ್ದರು. ಹಲವು ಕ್ರಿಮಿನಲ್​​ಗಳನ್ನು ಉಳಿಸಲು ಆಗ ಡಿಆರ್​ಐ ಅಧಿಕಾರಿಯಾಗಿದ್ದ ಈಗಿನ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಸಹಾಯ ಪಡೆದಿದ್ದರು ಎಂದು ಮಲಿಕ್​ ಆರೋಪಿಸಿದರು.
ಸಚಿವ ಮಲಿಕ್​ರ ಈ ಆರೋಪಗಳು ನಿನ್ನೆಯ ಫಡ್ನವಿಸ್​ ಅವರ ಆರೋಪಗಳಿಗೆ ಉತ್ತರವಾಗಿ ಬಂದಿವೆ. ಮಲಿಕ್​​ಗೆ 1993ರ ಮುಂಬೈ ಬಾಂಬ್​ ಸ್ಫೋಟ ಪ್ರಕರಣದ ಅಪರಾಧಿಗಳೊಂದಿಗೆ ಬಿಸಿನೆಸ್​ ವ್ಯವಹಾರಗಳಿವೆ ಎಂದು ಫಡ್ನವಿಸ್​ ಆರೋಪಿಸಿದ್ದರು. ಇಂದಿನ ಮಲಿಕ್​​ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಫಡ್ನವಿಸ್​, ಇದು ಬಾಂಬ್​ ಇರಲಿ, ಒಂದು ಸುರುಸುರುಬತ್ತಿಯೂ ಅಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಪೊಲೀಸ್​ ಠಾಣೆಯಲ್ಲಿ ಸಾವಪ್ಪಿದ ಯುವಕ; ‘ನಿರ್ಲಕ್ಷ್ಯ’ಕ್ಕಾಗಿ ಐವರು ಸಸ್ಪೆಂಡ್​

ಒಂಟಿ ಮನೆಯಲ್ಲಿ ಗುಂಡಿ ತೋಡಿ ಪೂಜೆ; ವಾಮಾಚಾರ ನಡೆಸುತ್ತಿದ್ದ 12 ಜನರ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + eight =
Remember me
