ಮುಂಬೈ:ಇತ್ತೀಚೆಗಷ್ಟೇ ಪೊಲೀಸರಿಂದ ಬಂಧಿತನಾಗಿರುವ ಭೂಗತ ಪಾತಕಿ ದಾವೂದ್​ ಇಬ್ರಾಹಿಂನ ಆಪ್ತನಾಗಿದ್ದ ಇಜಾಜ್​ ಲಕ್ಡಾವಾಲಾ ಕೆಲವು ಪ್ರಮುಖ ಮಾಹಿತಿಗಳನ್ನು ವಿಚಾರಣೆ ವೇಳೆ ನೀಡಿದ್ದಾನೆ.
ಮುಂಬೈ ದಾಳಿಯ ಮಾಸ್ಟರ್​ ಮೈಂಡ್​, ಲಷ್ಕರ್​ ಇ ತೊಯ್ಬಾ ಉಗ್ರಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬನಾದ ಹಫೀಜ್​ ಸೈಯದ್​​ಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಣಕಾಸು ಸಹಕಾರ ಸೇರಿ ಹಲವು ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದ ಎಂಬ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ದಾವೂದ್​ ಇಬ್ರಾಹಿಂನನ್ನು ಭೇಟಿ ಮಾಡಲು ಆತನ ಕರಾಚಿಯಲ್ಲಿರುವ ಮನೆಗೆ ಪಾಕಿಸ್ತಾನ ಸೇನೆಯ ಪ್ರಮುಖ ಉನ್ನತಾಧಿಕಾರಿಗಳು ಬರುತ್ತಿದ್ದರು. ಹಫೀಜ್​ ಸೈಯದ್​ ಸೇರಿ ಹಲವರಿಗೆ ದಾವೂದ್​ ಹಣಕಾಸು ಸಹಕಾರ ನೀಡುತ್ತಿದ್ದ. ಅಷ್ಟೇ ಅಲ್ಲದೆ ಅನೇಕ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದ ಎಂಬುದು ಅವರಿಂದಲೇ ನನಗೆ ತಿಳಿದಿದೆ ಎಂದು ಇಜಾಜ್​ ಹೇಳಿದ್ದಾನೆ.
ದಾವೂದ್​ ಬೋಗಸ್​ ಕಂಪನಿಗಳ ದೊಡ್ಡ ಜಾಲವನ್ನೇ ಹೊಂದಿದ್ದ. ಮುಂಬೈ, ಬೆಂಗಳೂರು, ದುಬೈ, ಲಂಡನ್​ಗಳಲ್ಲಿ ವಿವಿಧ ರಿಯಲ್ ಎಸ್ಟೇಟ್​ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದ ಎಂದು ಮಾಹಿತಿ ನೀಡಿದ್ದಾನೆ.ಕಾನೂನು ಬಾಹಿರ ಉದ್ಯಮಗಳಿಂದಲೇ ದಾವೂದ್​ಗೆ ಹೆಚ್ಚಿನ ಪ್ರಮಾಣದ ಆದಾಯ ಬರುತ್ತಿತ್ತು. ಆ ಹಣದಲ್ಲಿ ಹೆಚ್ಚಿನ ಪಾಲನ್ನು ಭಯೋತ್ಪಾದನಾ ಸಂಘಟನೆಗಳಿಗಾಗಿ ಕೆಲಸ ಮಾಡುತ್ತಿರುವ ಎನ್​ಜಿಒಗಳಿಗೆ ನೀಡುತ್ತಿದ್ದ ಎಂದು ಹೇಳಿದ್ದಾನೆ.
ದಾವೂದ್​ಗೆ ನೇಪಾಳ ಹಾಗೂ ಬಾಂಗ್ಲಾದೇಶದಲ್ಲಿ ಬಲಿಷ್ಠ ನೆಲೆಯಿದೆ. ಗಡಿಯಾಚೆಗೆ ಮಾದಕ ವಸ್ತು ಸಾಗಣೆ ಮತ್ತು ನಕಲಿ ಕರೆನ್ಸಿ ಅಕ್ರಮ ಮಾರಾಟಗಳಿಗೆ ಈ ನೆಲೆಗಳೇ ಮೂಲ ಎಂದು ಹೇಳಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
