ರಾಯ್ಪುರ್​ :ಕರೊನಾ ನಿಯಮ ಉಲ್ಲಂಘಿಸಿದ ಯುವಕನೊಂದಿಗೆ ದುರ್ವ್ಯವಹಾರ ನಡೆಸಿದ ಛತ್ತೀಸಗಢದ ಸೂರಜ್​ಪುರದ ಜಿಲ್ಲಾಧಿಕಾರಿ ರಣಬೀರ್ ಶರ್ಮ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಭೂಪೇಶ್ ಬಘೇಲ್ ಅವರು ಈ ಆದೇಶ ಹೊರಡಿಸಿದ್ದಾರೆ. ಮತ್ತೊಬ್ಬ ಐಎಎಸ್​​ ಅಧಿಕಾರಿ ಗೌರವ್ ಕುಮಾರ್ ಸಿಂಗ್ ಅವರನ್ನು ಸೂರಜ್​ಪುರದ ಹೊಸ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.
ರಣಬೀರ್​​ ಶರ್ಮ ಅವರು, ಲಾಕ್​ಡೌನ್​ ನಡುವೆ ಕೆಲ ಔಷಧಿಗಳನ್ನು ತರಲು ಮನೆಯಿಂದ ಹೊರಬಂದಿದ್ದ ಎನ್ನಲಾದ ಯುವಕನ ಮೊಬೈಲ್​ ಪಡೆದು ಜೋರಾಗಿ ನೆಲಕ್ಕೆ ಎಸೆದು ಒಡೆದು ಹಾಕಿದ್ದರು. ಅಷ್ಟೇ ಅಲ್ಲ, ಕಪಾಳಕ್ಕೆ ಬಾರಿಸಿ, ಸ್ಥಳದಲ್ಲಿದ್ದ ಪೊಲೀಸ್​ ಸಿಬ್ಬಂದಿಗೆ ಅವನನ್ನು ಥಳಿಸುವಂತೆ ಹೇಳಿದ್ದರು. ಎಫ್​ಐಆರ್​ ಕೂಡ ದಾಖಲಿಸಲು ಆದೇಶಿಸಿದ್ದರು. ಇದೆಲ್ಲದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜಿಲ್ಲಾಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಐಎಎಸ್​ ಅಸೋಸಿಯೇಷನ್ ಸಹ ಈ ಕೃತ್ಯವನ್ನು ಖಂಡಿಸಿತ್ತು.
ಇದನ್ನೂ ಓದಿ:ಯುವಕನ ಮೊಬೈಲ್​ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ: ಜನರ ಆಕ್ರೋಶಕ್ಕೆ ಡಿಸಿ ಉತ್ತರ ಹೀಗಿದೆ…
ವಿಡಿಯೋ ವೈರಲ್​ ಆದ ಬೆನ್ನಲ್ಲೇ, ಛತ್ತೀಸಘಡ ಸಿಎಂ ಭೂಪೇಶ್​ ಬಘೇಲ್​ ಅವರು ಈ ಘಟನೆಯನ್ನು ಖಂಡಿಸಿ, ಈ ರೀತಿಯ ವರ್ತನೆಗಳನ್ನು ರಾಜ್ಯದಲ್ಲಿ ಸಹಿಸಿಕೊಳ್ಳುವುದಿಲ್ಲ. ಸಂಬಂಧಿತ ಅಧಿಕಾರಿಯನ್ನು ಕೂಡಲೇ ಅವರ ಹುದ್ದೆಯಿಂದ ತೆಗೆಯಲಾಗುವುದು ಎಂದು ಟ್ವೀಟ್ ಮಾಡಿದ್ದರು.
ಈ ನಡುವೆ ರಣಬೀರ್​ ಶರ್ಮ ಅವರು ತಮ್ಮ ನಡವಳಿಕೆ ಬಗ್ಗೆ ಕ್ಷಮೆ ಕೋರಿದ್ದಾರೆ. ಆದರೆ ಯುವಕನು ಉದ್ಧಟವಾಗಿ ನಡೆದುಕೊಂಡ ಎಂದು ದೂರಿದ್ದಾರೆ. “ಯುವಕನ ಉದ್ಧಟತನದ ವರ್ತನೆಯಿಂದಾಗಿ ನಾನು ಆಕ್ರೋಶಗೊಂಡು ಅವನ ಕಪಾಳಕ್ಕೆ ಹೊಡೆದೆ” ಎಂದು ಶರ್ಮ ವಿವರಣೆ ನೀಡಿದ್ದಾರೆ.(ಏಜೆನ್ಸೀಸ್)
ಲಾಕ್​​ಡೌನ್​ ರೂಲ್ಸ್​​ ಬ್ರೇಕ್ ಮಾಡಿ ಡ್ರಾಮಾ ಮಾಡಿದ ಕೈ ಮುಖಂಡ !

‘ಅಮ್ಮ ಬಿಟ್ಟು ಹೋದರು… ಅವರ ನೆನಪುಗಳನ್ನು ಉಳಿಸಿಕೊಡಿ’; ಬಾಲಕಿಯ ಈ ಮನವಿ ಕರುಳುಹಿಂಡುವಂಥದ್ದು !

ಕುಡಿದ ಮತ್ತಿನಲ್ಲಿ ಮೀನುಗಾರರು ; ನಡುರಾತ್ರಿ ದಡಕ್ಕೆ ಅಪ್ಪಳಿಸಿದ ದೋಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + sixteen =
Remember me
