ಭೋಪಾಲ್​:ನಾಲ್ಕು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಮೃತದೇಹ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದ್ದು, ಗಣೇಶ ಹಬ್ಬದ ರಾತ್ರಿ ಮನೆಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ.
ಈ ಘಟನೆ ಮಧ್ಯಪ್ರದೇಶದ ಖರ್ಗಪುರ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೀಡಾದವರನ್ನು ಧರ್ಮದಾಸ್ ಸೋನಿ (62), ಪುಣೆ ಸೋನಿ (55), ಮನೋಹರ್ ಸೋನಿ (27), ಸೋನಮ್ ಸೋನಿ (25) ಹಾಗೂ ನಾಲ್ಕು ವರ್ಷದ ಸಾನಿಧ್ ಎಂದು ಗುರುತಿಸಲಾಗಿದೆ. ಪಾದಗಳು ನೆಲಕ್ಕೆ ತಾಗಿರುವ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ:ಮಗಳಿಗೆ ನಿಶ್ಚಯವಾಗಿದ್ದ ವರನಿಗೆ ಫೋನ್​ ಮಾಡಿ ಮನೆಗೆ ಕರೆಸಿಕೊಂಡ ಮಹಿಳೆ ಹೀಗಾ​ ಮಾಡೋದು?
ಎಂದಿನಂತೆ ಇಂದೂ ಸಹ ಹಾಲು ಮಾರಾಟಗಾರ ಬೆಳಗಿನ ಜಾವ ಮೃತರ ಮನೆಯ ಬಳಿ ಬಂದು ಬಾಗಿಲು ತಟ್ಟಿದ್ದಾನೆ. ಅಲ್ಲದೆ, ಹಾಲು ತೆಗೆದುಕೋ ಬನ್ನಿ ಎಂದು ಜೋರಾಗಿ ಕೂಗಿದ್ದಾನೆ. ಆದರೆ ತುಂಬಾ ಹೊತ್ತಾದರೂ ಯಾರೂ ಬಾಗಿಲ ತೆರೆಯದ್ದನ್ನು ನೋಡಿ ಗಾಬರಿಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ.
ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ನೋಡಿದಾಗ ಒಳಗಡೆ ಐದು ಮೃತದೇಹಗಳು ನೇತಾಡುತ್ತಿರುವುದನ್ನು ನೋಡಿದ್ದಾರೆ. ಈ ಘಟನೆಯಿಂದ ಅಕ್ಕಪಕ್ಕ ಜನರು ಗಾಬರಿಗೊಂಡಿದ್ದಾರೆ. ಆತ್ಮಹತ್ಯೆಯಾಗಿದ್ದಾರೆ ಅದಕ್ಕೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ ಅಥವಾ ಸಾವಿಗೆ ಬೇರೆ ಕಾರಣ ಇರಬಹುದೆಂಬ ಶಂಕೆಯು ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ತಾಯಿ- ಮಗಳ ಲವ್ವರ್ ಆ ಕೊಲೆ ಮಾಡಿದ್ದೇಕೆ? ರೀಲು ಬಿಟ್ಟ ತಾಯಿ.. ಕಥೆಯಲ್ಲಿದೆ ರೋಚಕ ಟ್ವಿಸ್ಟ್…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
