ರಾಂಚಿ:ಆತ ಸತ್ತು ಹೋಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆಗಾಗಿ ಆತನ ಶವವನ್ನು ಆಸ್ಪತ್ರೆಗೆ ತರಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷಾ ಕೊಠಡಿಯಿಂದ ಆ ಸತ್ತ ವ್ಯಕ್ತಿ ಎದ್ದು ಹೊರಗೆ ಬಂದ.. ಅಷ್ಟೇ ಅಲ್ಲೇ ಕುಸಿದು ಕುಳಿತ.. ಆಗ ಪ್ರಾಣಪಕ್ಷಿ ಹಾರಿತು!
ಇದನ್ನೂ ಓದಿ:ಕೈ-ದಳ ಕೊಡುಕೊಳ್ಳುವಿಕೆ ಕಸರತ್ತು
ಈ ವಿಲಕ್ಷಣ ಘಟನೆ ಜಾರ್ಖಂಡ್​ನ ರಾಂಚಿಯ ರಾಜೇಂದ್ರ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸ್​ನಲ್ಲಿ ಮಂಗಳವಾರ ನಡೆದಿದೆ. ಸತ್ತು ಬದುಕಿ ಸತ್ತ ವ್ಯಕ್ತಿಯನ್ನು ಜಿತೇಂದ್ರ ಓರನ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ಆಸ್ಪತ್ರೆಗೆ ತಂದ ಕೂಡಲೇ ಡಾಕ್ಟರ್​ಗಳು ಪರಿಶೀಲಿಸಿ ಆಸ್ಪತ್ರೆಗೆ ಬರುವಾಗಲೇ ಪ್ರಾಣ ಹೋಗಿತ್ತು ಎಂದು ಪ್ರಮಾಣೀಕರಿಸಿ ಶವಪರೀಕ್ಷೆಗೆ ಕಳುಹಿಸುವಂತೆ ಸೂಚಿಸಿದ್ದರು. ಟೆಕ್ನೀಷಿಯನ್ಸ್​ ಈ ಶವವನ್ನು ಟ್ರಾಲಿಯಲ್ಲಿ ಹಾಕಿ ಮರಣೋತ್ತರ ಪರೀಕ್ಷಾ ಕೊಠಡಿಗೆ ಕೊಂಡೊಯದ್ದ ವೇಳೆ ಆತ ಅಲ್ಲಿಂದ ಎದ್ದು ಹೊರಗೆ ಬಂದಿದ್ದ! ಕೂಡಲೇ ಆತನನ್ನು ಹಿಡಿದು ತುರ್ತುಚಿಕಿತ್ಸಾ ಘಟಕಕ್ಕೆ ವರ್ಗಾಯಿಸಲು ಪ್ರಯತ್ನಿಸಿದ್ದರು. ಆದರೆ, ಅಷ್ಟು ಹೊತ್ತಿಗೆ ಆತ ಕುಸಿದು ಕುಳಿತ. ಅಲ್ಲೇ ಪ್ರಾಣವಾಯು ಹೊರಟುಹೋಗಿತ್ತು.
ಇದನ್ನೂ ಓದಿ:ನಟಿಯರ ಹಸಿರು ಪ್ರೀತಿ: ಹಿತ್ತಲು, ತಾರಸಿಯಲ್ಲಿ ಫಲ-ಪುಷ್ಪಗಳ ಘಮ
ಘಟನೆಯ ಹಿನ್ನೆಲೆ:ಜಿತೇಂದ್ರ ಓರನ್ ಖರ್ತಾ ಗ್ರಾಮದ ನಿವಾಸಿ. ಅಲ್ಲಿ ಹಾಕಿದ್ದ ಟೆಂಟ್ ಒಂದನ್ನು ತೆಗೆಯುವ ವೇಳೆ ಹೈ ಟೆನ್ಶನ್​ ವಿದ್ಯುತ್ ತಂತಿ ತಾಗಿ ವಿದ್ಯುದಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಹೋಗಿದ್ದ. ಕೂಡಲೇ ಆತನನ್ನು ಚನ್ಹೋ ಬ್ಲಾಕ್​ನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕರೆದೊಯ್ಯಲಾಗಿದೆ. ಮಂಗಳವಾರ ಬೆಳಗ್ಗೆ 7.30ಕ್ಕೆ ಈ ದುರಂತ ನಡೆದಿತ್ತು ಎಂದು ಜಿತೇಂದ್ರನ ಸಹೋದರ ಸಿಕಂದರ್ ಓರನ್​ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ರಾಮಮಂದಿರ ಶುರು: ನಿರ್ಮಾಣ ಕಾರ್ಯಕ್ಕೆ ಅಯೋಧ್ಯೆಯಲ್ಲಿ ಚಾಲನೆ
ಜಿತೇಂದ್ರನನ್ನು ಬೆಳಗ್ಗೆ 11 ಗಂಟೆಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಮತ್ತೆ ಅಪರಾಹ್ನ 1 ಗಂಟೆಗೆ ರಾಂಚಿಯ ರಿಮ್ಸ್​ಗೆ ಕರೆತರಲಾಗಿತ್ತು. ಸ್ವಲ್ಪ ಮುಂಚಿತವಾಗಿಯೇ ರಿಮ್ಸ್​ಗೆ ಕರೆತಂದಿದ್ದರೆ ರಾಜೇಂದ್ರ ಬದುಕುತ್ತಿದ್ದ ಎಂದು ಡಾಕ್ಟರ್​ಗಳು ಹೇಳಿದ್ದಾರೆ ಎಂದು ಕುಟುಂಬದ ಸದಸ್ಯರು ವಿಷಾದದಿಂದ ಹೇಳುತ್ತಿದ್ದಾರೆ. (ಏಜೆನ್ಸೀಸ್​)
ಸತ್ತಂತೆ ನಟಿಸಿ ಚಳ್ಳೆಹಣ್ಣು ತಿನ್ನಿಸೋಕೆ ಪ್ರಯತ್ನಿಸಿಯೂ ಪೊಲೀಸರ ಬಲೆಗೆ ಬಿದ್ದ ಮೇಯರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
