ಡೆಹ್ರಾಡೂನ್​:ಕುಟುಂಬಸ್ಥರಿಂದ ದೂರವಾಗಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮೃತನಾಗಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡುವ ವೇಳೆ ಎಲ್ಲರಿಗೂ ಆಶ್ಚರ್ಯವಾಗುವಂತೆ ಆತ ಜೀವಂತವಾಗಿ ಪತ್ತೆಯಾಗಿರುವ ಘಟನೆ ಉತ್ತರಾಖಂಡದ ಉಧಮ್​ ಸಿಂಗ್​ ನಗರ್​ ಜಿಲ್ಲೆಯಲ್ಲಿ ನಡೆದಿದೆ.
ಮೂಲತಃ ಉಧಮ್​ ಸಿಂಗ್​ ನಗರ ಜಿಲ್ಲೆಯ ಧಾಪ್ಲಾ ನಿವಾಸಿ ನವೀನ್​ ಚಂದ್ರ ಭಟ್​(42) ಮದ್ಯದ ಚಟದಿಂದ ಮನೆಯಿಂದ ನಾಪತ್ತೆಯಾಗಿದ್ದರು. ನವೀನ್​ ತಂದೆ ಧರ್ಮಾನಂದ ಭಟ್​ ಅವರಿಗೆ ನ.25ರಂದು ಪೊಲೀಸರು ಕರೆ ಮಾಡಿ, ಹಲ್ದಾವನಿಯಲ್ಲಿ ವಾರಸುದಾರರಿಲ್ಲದ ಶವ ಪತ್ತೆಯಾಗಿದ್ದು, ಅವರ ಜೇಬಿನಿಂದ ನವೀನ್​ ಭಟ್​ ಎಂದು ಬರೆದ ಚೀಟಿ ವಶಪಡಿಸಿಕೊಳ್ಳಲಾಗಿದೆ ಎಂದಿದ್ದರು. ನಂತರ ಕುಟುಂಬಸ್ಥರು ಹೋಗಿ ಅದು ನವೀನ್​ ಶವ ಎಂದು ಗುರುತಿಸಿದ್ದು, ಬಳಿಕ ಅಂತ್ಯಕ್ರಿಯೆ ನೆರವೇರಿಸಲು ಸಜ್ಜಾಗಿದ್ದರು.
ಈ ಮಧ್ಯೆ ಒಂದು ದಿನದ ಹಿಂದೆ ರುದ್ರಪುರದಲ್ಲಿ ನವೀನ್​ನನ್ನು ನೋಡಿದ್ದಾಗಿ ಕುಟುಂಬದ ಪರಿಚಯಸ್ಥರೊಬ್ಬರು ತಿಳಿಸಿದ್ದಾರೆ. ಕುಟುಂಬದ ಸಂದೇಹ ಹೋಗಲಾಡಿಸಲು ಆ ವ್ಯಕ್ತಿ ನವೀನ್​ ಮತ್ತು ಆತನ ಸಂಬಂಧಿಕರ ನಡುವೆ ವೀಡಿಯೋ ಕರೆ ಮಾಡಿ, ಆತ ಎಲ್ಲಿದ್ದಾನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾನೆ.
ಬದುಕಿರುವಾಗಲೇ ಅಂತ್ಯಕ್ರಿಯೆಗೆ ಸಜ್ಜಾದ್ದರಿಂದ ನವೀನ್​ಗೆ ನಾರಾಯಣ ಭಟ್​ ಎಂದು ಮರುನಾಮಕರಣ ಮಾಡಿ, ಅವರ ಹೆಂಡತಿ ಜತೆ ಮರುಮದುವೆ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 7 =
Remember me
