ಅಹಮದಾಬಾದ್:ಕರೊನಾ ಸೋಂಕು ಎನ್ನುವುದು ಇಡೀ ವಿಶ್ವವನ್ನೇ ತಲ್ಲಣಿಸಿರುವ ಬೆನ್ನಲ್ಲೇ ಕೆಲವು ಆಸ್ಪತ್ರೆಗಳಲ್ಲಿ ಎಡವಟ್ಟುಗಳು ಆಗುತ್ತಿವೆ. ಒಂದೆಡೆ ಹೊಸ ಹೊಸ ಸೋಂಕಿತರು, ಇನ್ನೊಂದೆಡೆ ಸೋಂಕಿನಿಂದ ಮೃತರಾಗುತ್ತಿರುವವರು, ಮತ್ತೊಂದೆಡೆ ಒಂದೇ ಹೆಸರಿನ ಅನೇಕ ಮಂದಿ… ಈ ಎಲ್ಲಾ ಕಾರಣಗಳಿಂದ ಆಸ್ಪತ್ರೆಗಳಲ್ಲಿ ಎಡವಟ್ಟುಗಳು ನಡೆಯುತ್ತಲೇ ಇವೆ.
ಇಂಥದ್ದೇ ಒಂದು ಎಡವಟ್ಟು ಇದೀಗ ಭಾರಿ ವೈರಲ್​ ಆಗಿದ್ದು, ಆಸ್ಪತ್ರೆಗಳ ವಿರುದ್ಧ ವಾಗ್ದಾಳಿ ಶುರುವಾಗಿದೆ.ಇದು ನಡೆದಿರುವುದು : ಗುಜರಾತ್‌ನಲ್ಲಿ ಆಸ್ಪತ್ರೆಯಲ್ಲಿ. ದರೀಯಾಪುರದಲ್ಲಿ ಟ್ಯೂಷನ್ ಟೀಚರ್ ಆಗಿರುವ ಸಾಗರ್ ಷಾ ಎನ್ನುವವರ ತಂದೆ ಕಿಶೋರ್‌ಭಾಯ್ ಹೀರಾಲಾಲ್ ಷಾರನ್ನು ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಇಲ್ಲಿಯ ಸಿಜಿಆರ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರ ತಂದೆ ಮೃತಪಟ್ಟರು.
ಇದನ್ನೂ ಓದಿ:ಆರೋಗ್ಯದಿಂದಿರುವ ಖ್ಯಾತ ನಟಿಗೆ ಕರೊನಾ: ಅತ್ತೆಯಿಂದ ಅಂಟಿಕೊಂಡ ಮಹಾಮಾರಿ
ತಂದೆಯ ಶವವನ್ನು ಪಡೆದುಕೊಂಡು ಬಂದ ಸಾಗರ್​ ಅವರು, ಅಂತ್ಯಕ್ರಿಯೆಯನ್ನೂ ನೆರವೇರಿಸಿದರು. ಅದಾದ ವಾರದ ನಂತರ ಅವರ ಮೊಬೈಲ್​ಗೆ ಒಂದು ಸಂದೇಶ ಬಂತು. ಅದರಲ್ಲಿ, ಕಿಶೋರ್‌ಭಾಯ್ ಹೀರಾಲಾಲ್ ಷಾ ಅವರನ್ನು ಮೇ.30ರಂದು 6.38ಕ್ಕೆ ಅಸರ್ವಾದಲ್ಲಿರುವ ಜಿಸಿಆರ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬರೆಯಲಾಗಿತ್ತು.
ಇದನ್ನು ನೋಡಿದ ಇಡೀ ಕುಟುಂಬಕ್ಕೇ ಶಾಕ್​ ಆಯಿತು. ಏಕೆಂದರೆ ಮೇ 16ರಂದೇ ಮೃತರಾಗಿದ್ದ ತಂದೆಯವರ ಅಂತ್ಯಕ್ರಿಯೆಯನ್ನೂ ನಡೆಸಲಾಗಿತ್ತು. ಈಗ ನೋಡಿದರೆ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಬರೆಯಲಾಗಿತ್ತು!
ಇದನ್ನೂ ಓದಿ:ಎಲ್ಲೆಲ್ಲೂ ಹೆಣಗಳ ರಾಶಿ: ಹತ್ತಿರ ಸುಳಿಯದ ಸಂಬಂಧಿಕರು- ಚಿಕಿತ್ಸೆಗೆ ದಿನಗಟ್ಟಲೆ ಕಾಯುವ ಸ್ಥಿತಿ!
ಈ ಸಂದೇಶ ನೋಡಿದ ಸಾಗರ್ ಅವರು ಆಸ್ಪತ್ರೆಯ ಬೇಜವಾಬ್ದಾರಿತನವನ್ನು ಟೀಕಿಸಿದ್ದಾರೆ. ಜತೆಗೆ, ಆಸ್ಪತ್ರೆಯಿಂದ ಅಪ್ಪನ ಮೃತದೇಹ ಪಡೆಯಲು ತಾವು ಪಟ್ಟ ಕಷ್ಟವನ್ನು ಅವರು ವಿಡಿಯೋದಲ್ಲಿ ತಿಳಿಸಿದ್ದು ಅದನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ತಂದೆಯ ದೇಹದ ಮೇಲಿದ್ದ ಚಿನ್ನಾಭರಣ ಹಾಗೂ ಜೇಬಲ್ಲಿದ್ದ 10 ಸಾವಿರ ರೂಪಾಯಿ ಕೂಡ ಕಳುವಾಗಿದೆ ಎಂದಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ಹೋಗಿ ಎಫ್‌ಐಆರ್ ದಾಖಲು ಮಾಡಿದ್ದೇನೆ ಎಂದಿದ್ದಾರೆ.
ಇವರು ಮಾಡಿರುವ ವಿಡಿಯೋ ಭಾರಿ ವೈರಲ್​ ಆಗಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಆಸ್ಪತ್ರೆಯ ಆರ್‌ಎಂಒ ಡಾ. ಸಂಜಯ್ ಕಪಾಡಿಯಾ ಮಾತನಾಡಿದ್ದು ‘ಆಸ್ಪತ್ರೆಯಲ್ಲಿ ಒಂದೇ ಹೆಸರಿನ ಇಬ್ಬರು ರೋಗಿಗಳಿದ್ದರು. ಹಾಗಾಗಿ ಗೊಂದಲ ಉಂಟಾಗಿದೆ ಎಂದಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − six =
Remember me
