ಬೀದರ್:ಹುಟ್ಟುಹಬ್ಬ ಆಚರಣೆ ವೇಳೆ ಕೇಕ್​ ಎಲ್ಲರ ಫೇವರಿಟ್ ಎಂಬುದರಲ್ಲಿ​ ಸಂಶಯವಿಲ್ಲ. ಕೇಕ್​ ಇಷ್ಟಪಡುವವರ ಸಂಖ್ಯೆಯೇನು ಕಮ್ಮಿ ಇಲ್ಲ. ಹೀಗಾಗಿ ಕೇಕ್​ ಸಿಕ್ಕಿತ್ತು ಎನ್ನುವ ಭರದಲ್ಲಿ ಹಿಂದೆ ಮುಂದೆ ನೋಡದೆ ಹಾಗೇ ಬಾಯಿಗೆ ಇಟ್ಟುಕೊಳ್ಳುವುದು ಸೂಕ್ತವಲ್ಲ ಎಂಬುದಕ್ಕೆ ಈ ಸ್ಟೋರಿ ಎಚ್ಚರಿಕೆಯ ಗಂಟೆಯಾಗಿದೆ.
ಮಹಾರಾಷ್ಟ್ರದ ಲಾತೂರ್​ ಜಿಲ್ಲೆಯ ಔಸಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜೀಕಾರಾ ಶೇಖ್ ಎಂಬ 1 ವರ್ಷದ ಮಗುವಿನ‌ ಜನ್ಮದಿನ ಆಚರಣೆಗೆ 4 ಸಾವಿರಕ್ಕೂ ಅಧಿಕ ಖರ್ಚು ಮಾಡಿ ಬೇಕರಿಯಿಂದ ಕೇಕ್ ತರಿಸಿದ್ದರು. ಬರೀ ಕೇಕ್​ ಮಾತ್ರ ಬಂದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಕೇಕ್​ ಒಳಗೆ ಸತ್ತ ಹಾವಿನ ಮರಿಯೂ ಬಂದಿದ್ದರಿಂದ, ಅದನ್ನು ತಿಂದ 8ಕ್ಕೂ ಅಧಿಕ ಮಂದಿ ಇದೀಗ ಆಸ್ಪತ್ರೆಯ ಪಾಲಾಗಿದ್ದಾರೆ.
ಮಾರ್ಚ್​ 8 ರಂದು ಜನ್ಮದಿನ‌ ಆಚರಣೆ ಹಿನ್ನೆಲೆಯಲ್ಲಿ ಮಾರ್ಚ್​ 04ರಂದು ಕೇಕ್ ಆರ್ಡರ್ ಮಾಡಿದ್ದರು. ಮಾರ್ಚ್​ 8ರ ರಾತ್ರಿ ಹುಟ್ಟುಹಬ್ಬ ಆಚರಿಸಿದ್ದಾರೆ. ಬಳಿಕ ಕೇಕ್​ ಕತ್ತರಿಸಿ ಆಚರಣೆಯಲ್ಲಿ ಭಾಗಿಯಾಗಿದ್ದವರಿಗೆ ನೀಡಲಾಗಿದೆ. ಅದನ್ನು ತಿಂದ 8ಕ್ಕೂ ಹೆಚ್ಚು ಮಂದಿಗೆ ಮರುದಿನ ಬೆಳಗ್ಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣವೇನೆಂದು ಕೇಕ್​ ಪರಿಶೀಲಿಸಿದಾಗ ಸತ್ತ ಹಾವಿನ ಮರಿ ಇರುವುದನ್ನು ಕಂಡು ಎಲ್ಲರು ಆತಂಕಕ್ಕೀಡಾಗಿದ್ದಾರೆ.(ದಿಗ್ವಿಜಯ ನ್ಯೂಸ್​​)

VIDEO| ಡ್ರೈವಿಂಗ್ ಪರೀಕ್ಷೆ ಮುಗಿಸಿ​ ಲೈಸೆನ್ಸ್​ ಪಡೆದ ಹತ್ತೇ ನಿಮಿಷದಲ್ಲಿ ಕಾರನ್ನು ನದಿಗೆ ಹಾರಿಸಿದ ಚಾಲಕ!
VIDEO| ನೋಡಲು ಭಯ ಬೀಳಿಸುವಂತೆ ಇರುವ ಸಿಡುಕು ಮೂತಿ ಬೆಕ್ಕಿನ ಮುದ್ದಾಟ ನೋಡಿದ್ರೆ ಇಷ್ಟಪಡದೆ ಇರಲಾರಿರಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + fourteen =
Remember me
