ಬಿಹಾರ:ವೈದ್ಯರನ್ನು ಭೂಮಿಯ ಮೇಲಿನ ದೇವರು ಎನ್ನುತ್ತಾರೆ. ಯಾವುದೇ ಅನಾರೋಗ್ಯದ ವ್ಯಕ್ತಿಗೆ ವೈದ್ಯರು ಹೇಳಿದ್ದೇ ಫೈನಲ್. ಆದರೆ ಇಲ್ಲಿನ ಬೇಗುಸರೈನಲ್ಲಿ ಸಂಚಲನ ಮೂಡಿಸುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮೃತರೆಂದು ಘೋಷಿಸಲ್ಪಟ್ಟ ವೃದ್ಧೆಯೊಬ್ಬರು ಇಂದು ಸರಿಯಾಗಿ ಉಸಿರಾಡುತ್ತಿರುವುದು ಮಾತ್ರವಲ್ಲದೆ, ಕಣ್ಣು ಮಿಟುಕಿಸಿ ಕುಟುಂಬ ಸದಸ್ಯರನ್ನೇ ನೋಡುತ್ತಿದ್ದಾರೆ.
ಹೌದು, ಬೇಗುಸರೈನ ನೀಮಾ ಚಂದ್‌ಪುರ ನಿವಾಸಿ ದಿನ್‌ ಸಾಹ್‌ ಅವರ 71 ವರ್ಷದ ಪತ್ನಿ ರಾಮರತಿ ದೇವಿ ಅವರು ಛತ್ತೀಸ್‌ಗಢದ ಕೊರ್ಬಾದಲ್ಲಿ ನೆಲೆಸಿರುವ ತಮ್ಮ ಪುತ್ರರ ಬಳಿಗೆ ತೆರಳಿದ್ದರು. ಕಳೆದ ಭಾನುವಾರ ರಾಮರತಿ ದೇವಿ ಅವರ ಆರೋಗ್ಯ ಹಠಾತ್ ಹದಗೆಟ್ಟಾಗ ಅವರ ಪುತ್ರರು ಕೊರ್ಬಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ವೇಳೆ ಅಲ್ಲಿನ ವೈದ್ಯರು ರಾಮರತಿ ದೇವಿ ಅವರ ಮಕ್ಕಳಾದ ಘನಶ್ಯಾಮ್ ಸಾಹ್ ಮತ್ತು ಮುರಾರಿ ಸಾಹ್ ಅವರಿಗೆ ತಾಯಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ನಂತರ ಕುಟುಂಬದವರು ಖಾಸಗಿ ವಾಹನದಲ್ಲಿ ಅವರನ್ನು ಕರೆದುಕೊಂಡು ತಮ್ಮ ಗ್ರಾಮ ಬೇಗುಸರೈಗೆ ತೆರಳಿದ್ದಾರೆ. ಹೀಗೆ ತೆರಳುವಾಗ ಪುತ್ರ ಮುರಾರಿ ಮತ್ತೊಮ್ಮೆ ತನ್ನ ಪ್ರೀತಿಯ ತಾಯಿಯ ಮೃತ ದೇಹವನ್ನು ಸ್ಪರ್ಶಿಸಿದಾಗ ಅವರ ದೇಹದಲ್ಲಿ ಚಲನವಲನ ಗಮನಿಸಿದ್ದಾನೆ. ತಕ್ಷಣವೇ ಕುಟುಂಬಸ್ಥರು ಅಲ್ಲಿಂದ ಬೇಗುಸರೈ ಸದರ್ ಆಸ್ಪತ್ರೆ ತಲುಪಿ, ಅಲ್ಲಿ ಐಸಿಯುಗೆ ದಾಖಲಿಸಿದ್ದಾರೆ.
ಕಳೆದ 12 ಗಂಟೆಗಳಿಂದ ಚಿಕಿತ್ಸೆ ನಡೆಯುತ್ತಿದ್ದು, ರಾಮರತಿ ದೇವಿ ಅವರ ಆರೋಗ್ಯ ಸ್ಥಿತಿ ವೇಗವಾಗಿ ಸುಧಾರಿಸುತ್ತಿದೆ. ಅವರು ಕಣ್ತೆರೆದು ಕುಟುಂಬ ಸದಸ್ಯರನ್ನು ನೋಡುತ್ತಿದ್ದಾರೆ. ಇದರಿಂದ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ ಬೇಗುಸರೈ ಸದರ್ ಆಸ್ಪತ್ರೆಯ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಆಸ್ಪತ್ರೆಯಿಂದ 15 ಗಂಟೆಗಳ ಕಾಲ ಪ್ರಯಾಣಿಸಿದ ನಂತರ ಔರಂಗಾಬಾದ್‌ನಲ್ಲಿ ದೈಹಿಕ ಚಲನೆ ಕಂಡುಬಂದಿದೆ ಎಂದು ಮಹಿಳೆಯ ಮೊಮ್ಮಗ ಬಿತ್ತು ಕುಮಾರ್ ಹೇಳಿದ್ದಾರೆ. ಅಂತಿಮ ಸಂಸ್ಕಾರಕ್ಕೆ ಅಜ್ಜಿಯ ಮೃತದೇಹದೊಂದಿಗೆ ಬರುತ್ತಿದ್ದೆವು. ಅವರ ಚಲನವಲನದ ನಂತರ, ದೇಹದಲ್ಲಿ ಉಷ್ಣತೆ, ಉಸಿರಾಟವನ್ನು ಪರೀಕ್ಷಿಸಲಾಯಿತು. ಉಸಿರಾಟವೂ ನಡೆಯುತ್ತಿತ್ತು. ನಂತರ, ಅವರನ್ನು ಬೇಗುಸರೈಗೆ ಕರೆತಂದು ಸದರ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿಸಿದ್ದಾನೆ.
ಈ ಬಗ್ಗೆ ಸದರ್ ಆಸ್ಪತ್ರೆಯ ಡಾ.ಕೃಷ್ಣ ಕುಮಾರ್ ಅವರು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮರತಿ ದೇವಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಇಲ್ಲಿಗೆ ಬಂದ ಕೂಡಲೇ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಈಗ ಎಲ್ಲವೂ ಸಾಮಾನ್ಯವಾಗಿದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದೊಂದು ಪವಾಡವೇ ಇರಬೇಕು, ಇದೊಂದು ವಿಸ್ಮಯಕಾರಿ ಘಟನೆ. ಬಹುಶಃ ಹಾರ್ಟ್ ಬ್ಲಾಕ್ ಆಗಿರಬಹುದು. ದಾರಿಯಲ್ಲಿ ವಾಹನದ ಜರ್ಕ್‌ನಿಂದ ನ್ಯಾಚುರಲ್ ಸಿಪಿಆರ್ ಆಗಿದೆ ಎಂದು ತೋರುತ್ತದೆ. ಇದರಿಂದ ಅವರ ಹೃದಯ ಬಡಿಯಲಾರಂಭಿಸಿತು. ಆಸ್ಪತ್ರೆಯಿಂದ ಅವರು ಸಂಪೂರ್ಣವಾಗಿ ಗುಣವಾಗಿ ಹೋಗುತ್ತಾರೆ ಎಂಬ ನಂಬಿಕೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಹಾನ ಡಿಯೋಲ್​​​​​ರನ್ನು ಹುಚ್ಚನಂತೆ ಪ್ರೀತಿಸಿದ್ದರು ಬಿ-ಟೌನ್‌ನ ಇಬ್ಬರು ಸೂಪರ್ ಸ್ಟಾರ್​ಗಳು!


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − one =
Remember me
